ಧಾರವಾಡ ಜಿಲ್ಲೆಯಲ್ಲಿ ಅ.21 ರಿಂದ ಮದ್ಯ ಮಾರಾಟ ನಿಷೇಧ
ಧಾರವಾಡ : ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಅ.21ರ ಸಂಜೆ 4ರಿಂದ 23ರ ರಾತ್ರಿ 12ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ, ಮದ್ಯಪಾನ ಮತ್ತು ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಆದೇಶ ಹೊರಡಿಸಿದ್ದಾರೆ.23ರಂದು ಮತದಾನ ಹಾಗೂ 27ರಂದು ಮತ ಎಣಿಕೆ ನಡೆಯಲಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135(ಸಿ) ಅನ್ವಯ ಮತದ

ಧಾರವಾಡ : ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಅ.21ರ ಸಂಜೆ 4ರಿಂದ 23ರ ರಾತ್ರಿ 12ರವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ, ಮದ್ಯಪಾನ ಮತ್ತು ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಆದೇಶ ಹೊರಡಿಸಿದ್ದಾರೆ.23ರಂದು ಮತದಾನ ಹಾಗೂ 27ರಂದು ಮತ ಎಣಿಕೆ ನಡೆಯಲಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಕಲಂ 135(ಸಿ) ಅನ್ವಯ ಮತದಾನದ 48 ಗಂಟೆಗಳ ಮೊದಲು ಮದ್ಯ ನಿಷೇಧ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಬಾರ್, ಕ್ಲಬ್, ಡಿಪೊ, ಮದ್ಯದ ಅಂಗಡಿಗಳು ಮುಚ್ಚಿರಬೇಕು. ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.261018-24-1767839409
Read the complete story at Prajavani