ಮುಂದಿನ ಬಾರಿ ಬಿಜೆಪಿ – ಜೆಡಿಎಸ್ ಒಟ್ಟಾಗಿ ಸರ್ಕಾರ ಮಾಡ್ತೀವಿ: ಬಿ.ಎಸ್ ಯಡಿಯೂರಪ್ಪ
– ಸಿದ್ದರಾಮಯ್ಯ ಎಲ್ಲವನ್ನ ಗಮನಿಸ್ತಿದ್ದಾರೆ, ತಕ್ಕಪಾಠ ಕಲಿಸುತ್ತಾರೆ ಎಂದ ಮಾಜಿ ಸಿಎಂ ದಾವಣಗೆರೆ: ಮುಂದಿನ ಬಾರಿ ಬಿಜೆಪಿ – ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಿ, ನೂರಕ್ಕೆ ನೂರು ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಭವಿಷ್ಯ ನುಡಿದರು. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಮ್ಮಿಶ

– ಸಿದ್ದರಾಮಯ್ಯ ಎಲ್ಲವನ್ನ ಗಮನಿಸ್ತಿದ್ದಾರೆ, ತಕ್ಕಪಾಠ ಕಲಿಸುತ್ತಾರೆ ಎಂದ ಮಾಜಿ ಸಿಎಂ ದಾವಣಗೆರೆ: ಮುಂದಿನ ಬಾರಿ ಬಿಜೆಪಿ – ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಿ, ನೂರಕ್ಕೆ ನೂರು ಸರ್ಕಾರ ರಚನೆ ಮಾಡ್ತೀವಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಭವಿಷ್ಯ ನುಡಿದರು. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಬರುತ್ತೆ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಬೇರೆ ಅಲ್ಲ, ನಾವು ಬೇರೆ ಅಲ್ಲ ಎಲ್ಲರೂ ಒಟ್ಟಾಗಿ ಸರ್ಕಾರ ಮಾಡ್ತೀವಿ. ಮುಂದಿನ ಬಾರಿ ಬಿಜೆಪಿ – ಜೆಡಿಎಸ್ ಒಟ್ಟಾಗಿ ಹೋರಾಟ ಮಾಡ್ತೀವಿ. ನಾವಿಬ್ಬರೂ ಸೇರಿ ಸರ್ಕಾರ ಮಾಡ್ತೀವಿ ಅಂತಾ ನೂರಕ್ಕೆ ನೂರು ವಿಶ್ವಾಸವಿದೆ. ಈ ಭ್ರಷ್ಟ ಸರ್ಕಾರ ಕಿತ್ತೊಗೆದು ಬಿಜೆಪಿ ಜೆಡಿಎಸ್ ಸರ್ಕಾರ (BJP JDS Govt) ತರಬೇಕು. ಕೈ ಜೋಡಿಸಿ ರಾಜ್ಯದ ಜನರಿಗೆ ಪ್ರಾರ್ಥನೆ ಮಾಡ್ತೀನಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಭೀಕರ ಬರ ತಾಂಡವವಾಡ್ತಿದೆ. ರಾಜ್ಯ ಸರ್ಕಾರಕ್ಕೆ ಬೇಜವಾಬ್ದಾರಿತನದ ಪರಮಾವಧಿ, ಅವರಿಗೆ ಬರಗಾಲನೂ ಗೊತ್ತಿಲ್ಲ, ಜನರ ಸಂಕಷ್ಟವೂ ಗೊತ್ತಿಲ್ಲ. ಒಂದ್ ರೀತಿ ತುಘಲಕ್ ದರ್ಬಾರ್ ನಡೆಸಿದ್ದಾರೆ. ಜನ ತಕ್ಕ ಪಾಠ ಕಲಿಸಬೇಕು, ಬುದ್ದಿ ಕಲಿಸಬೇಕು ಅಷ್ಟೇ. ಅಜೀರ್ಣ ಆಗುವಷ್ಟು ಬಹುಮತ ಸಿಕ್ಕಾಗ ತುಘಲಕ್ ದರ್ಬಾರ್ ನಂತೆ ನಡೆಸುತ್ತಿದ್ದಾರೆ. ಮಾಧ್ಯಮದವರು ಟೀಕೆ ಟಿಪ್ಪಣಿ ಮಾಡಿ ಸಲಹೆ ಕೊಡ್ತಿದ್ದೀರಿ, ಆದ್ರೆ ತಿದ್ದಿಕೊಳ್ಳಲು ಶಿವಕುಮಾರ್ ಸರ್ಕಾರ ಸಿದ್ಧವಿಲ್ಲ. ಒಂದ್ ತರಹ ಅಧಿಕಾರದ ಮದದಿಂದ ಏನ್ ಮಾಡಬೇಕೋ ಮಾಡ್ತಿದ್ದಾರೆ. ಅದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಅಂಥವರನ್ನ ಕೆಳಗಿಳಿಸಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ರು. ಡಿ.ಕೆ.ಶಿವಕುಮಾರ್, ಎಲ್ಲರೂ ಸೇರಿ ವ್ಯವಸ್ಥಿತ ಪಿತೂರಿ ಮಾಡಿ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಿದ್ದು ಗೊತ್ತೇ ಇದೆ. ಸಿದ್ದರಾಮಯ್ಯ ತಕ್ಕಪಾಠ ಕಲಿಸ್ತಾರೆ, ಎಲ್ಲವನ್ನೂ ಗಮನಿಸ್ತಿದ್ದಾರೆ, ನೋಡೋಣ ಮುಂದೆ ಏನಾಗುತ್ತೆ ಅಂತ ಎಂದು ಹೇಳಿದರು.