ಸ್ಟಿಂಗ್ ಆಪರೇಷನ್ ಪಿತಾಮಹ ಮೋದಿ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
ಗದಗ: ‘ಗುಜರಾತ್ನಲ್ಲಿ ತಮ್ಮ ಪ್ರತಿಸ್ಪರ್ಧಿ ಸಂಜಯ್ ಜೋಶಿಯನ್ನುಸ್ಟಿಂಗ್ ಆಪರೇಷನ್ ಸಿಲುಕಿಸಿ, ರಾಜಕೀಯದಿಂದ ನಿವೃತ್ತಿ ಆಗುವಂತೆ ಮಾಡಿದವರು ನರೇಂದ್ರ ಮೋದಿ. ಅವರು ಸ್ಟಿಂಗ್ ಆಪರೇಷನ್ನ ಪಿತಾಮಹ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಆರೋಪಿಸಿದರು.‘ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿ. ಸ್ಟಿಂಗ್ ಕಾರ್ಯಾಚರಣೆ ಕುರಿತು ಏನು ಮಾಡಬೇಕೆಂದು ಅವರೇ ತ

ಗದಗ: ‘ಗುಜರಾತ್ನಲ್ಲಿ ತಮ್ಮ ಪ್ರತಿಸ್ಪರ್ಧಿ ಸಂಜಯ್ ಜೋಶಿಯನ್ನುಸ್ಟಿಂಗ್ ಆಪರೇಷನ್ ಸಿಲುಕಿಸಿ, ರಾಜಕೀಯದಿಂದ ನಿವೃತ್ತಿ ಆಗುವಂತೆ ಮಾಡಿದವರು ನರೇಂದ್ರ ಮೋದಿ. ಅವರು ಸ್ಟಿಂಗ್ ಆಪರೇಷನ್ನ ಪಿತಾಮಹ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಆರೋಪಿಸಿದರು.‘ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿ. ಸ್ಟಿಂಗ್ ಕಾರ್ಯಾಚರಣೆ ಕುರಿತು ಏನು ಮಾಡಬೇಕೆಂದು ಅವರೇ ತೀರ್ಮಾನಿಸುವರು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ಸ್ಟಿಂಗ್ ಕಾರ್ಯಾಚರಣೆ ವಿರುದ್ಧ ಹೋರಾಟ ಮಾಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಸಿಜೆಪಿ, ಕಾಂಗ್ರೆಸ್ ಪ್ರತಿಭಟನೆಗೂ ಅವರು ಅವಕಾಶ ಕೊಡಬೇಕಿದೆ’ ಎಂದರು.‘ಸಿಜೆಪಿ ಕಾರ್ಯಕರ್ತರನ್ನು ಪ್ರಧಾನಿ ಮೋದಿ ಜೈಲಿಗೆ ಹಾಕಿಸುತ್ತಿದ್ದಾರೆ. ಅವರ ಬಿಡುಗಡೆಗೆ ಕಾಂಗ್ರೆಸ್ ಕಾನೂನು ನೆರವು ನೀಡುತ್ತಿದೆ. ಪ್ರತಿಭಟನೆ ವೇಳೆ ಧ್ವಜ, ಮೈಕ್ ಸೇರಿ ಅಗತ್ಯ ಸಹಕಾರ ನೀಡುತ್ತಿದೆ. ಇದನ್ನು ಧನ ಸಹಾಯ(ಫಂಡಿಂಗ್) ಎನ್ನಲಾಗದು. ಆ ಭ್ರಷ್ಟರಿಗೆ (ಬಿಜೆಪಿ) ಫಂಡಿಂಗ್ ಎಂದರೆ ದುಡ್ಡು ಅಷ್ಟೇ ನೆನಪಾಗುತ್ತದೆ’ ಎಂದು ಟೀಕಿಸಿದರು.‘ಕೊಳಕು ರಾಜಕೀಯ ಬೇಡ’‘ಸ್ಟಿಂಗ್ ಕಾರ್ಯಾಚರಣೆ ಕೊಳಕು ರಾಜಕೀಯ. ಎಚ್.ಡಿ. ಕುಮಾರಸ್ವಾಮಿ ಅವರು ಇಷ್ಟು ಕೆಳಮಟ್ಟಕ್ಕಿಳಿದು ರಾಜಕಾರಣ ಮಾಡಬಾರದು’ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.‘ಈ ವಿಷಯದಲ್ಲಿ ಯಾರೂ ಮಾತನಾಡಬಾರದೆಂದು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಅವರೇ ಈ ಬಗ್ಗೆ ತೀರ್ಮಾನಿಸುವರು. ಸಿದ್ದರಾಮಯ್ಯ ಅವರು ಈ ರಾಷ್ಟ್ರ ಕಂಡ ಶ್ರೇಷ್ಠ ನಾಯಕ. ಒಳ್ಳೆಯವರ ತೇಜೋವಧೆಗೆ ಹುನ್ನಾರ ನಡೆದಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.ಎಚ್.ಕೆ.ಪಾಟೀಲ, ಶಾಸಕಸ್ಟಿಂಗ್ ಕಾರ್ಯಾಚರಣೆ ಎಂಬುದು ದುರ್ದೈವ, ಅನಾರೋಗ್ಯಕರ ಬೆಳವಣಿಗೆ. ರಾಜಕಾರಣದಲ್ಲಿ ಇಂತಹ ಕೆಟ್ಟ ವಾತಾವರಣ, ಸಂಶಯದ ಪರಿಸ್ಥಿತಿ ನಿರ್ಮಾಣ ಆಗಬಾರದು 261018-51-1520503172