ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆಗ್ರಹ: ಶಾಸಕ ಗವಿಯಪ್ಪ ಮನೆ ಮುಂಭಾಗ ಉಪವಾಸ ಆರಂಭ
ಹೊಸಪೇಟೆ (ವಿಜಯನಗರ): ಹೊಸಪೇಟೆ ಸಮೀಪದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲೇಬೇಕು ಎಂದು ಆಗ್ರಹಿಸಿ ಸುಮಾರು 51 ಸಂಘಟನೆಗಳ ವತಿಯಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರ ಮನೆಯ ಮುಂದೆ ಭಾನುವಾರ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.ನಗರದ ಮದಕರಿ ನಾಯಕ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು, ಘೋಷಣೆ ಕೂಗುತ್ತ ಶಾಸಕರ ಮನೆ ಬಳಿಗೆ ಬಂದರು. ಬಳಿಕ ಮನೆ ಮುಂದೆ ಧರಣಿ ಕುಳಿತ
ಹೊಸಪೇಟೆ (ವಿಜಯನಗರ): ಹೊಸಪೇಟೆ ಸಮೀಪದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲೇಬೇಕು ಎಂದು ಆಗ್ರಹಿಸಿ ಸುಮಾರು 51 ಸಂಘಟನೆಗಳ ವತಿಯಿಂದ ಶಾಸಕ ಎಚ್.ಆರ್.ಗವಿಯಪ್ಪ ಅವರ ಮನೆಯ ಮುಂದೆ ಭಾನುವಾರ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.ನಗರದ ಮದಕರಿ ನಾಯಕ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು, ಘೋಷಣೆ ಕೂಗುತ್ತ ಶಾಸಕರ ಮನೆ ಬಳಿಗೆ ಬಂದರು. ಬಳಿಕ ಮನೆ ಮುಂದೆ ಧರಣಿ ಕುಳಿತರು.ಮನೆಯಲ್ಲೇ ಇದ್ದ ಶಾಸಕ ಗವಿಯಪ್ಪ ಅವರು ಉಪವಾಸ ಸತ್ಯಾಗ್ರಹ ಆರಂಭದಲ್ಲೇ ಮನವಿ ಸ್ವೀಕರಿಸಲು ಮುಂದಾದರು. ರೈತರ ಮಾತು ಕೇಳಿದ ಮೇಲೆಯೇ ಮನವಿ ಕೊಡುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದರು. ಹೀಗಾಗಿ ಶಾಸಕರು ಬಹಳ ಹೊತ್ತು ನಿಂತುಕೊಂಡೇ ಎಲ್ಲರ ಅಹವಾಲು ಆಲಿಸಬೇಕಾಯಿತು.ಮುಖಂಡರಾದ ಖಾಜಿ ಹುಸೇನ್ ನಿಯಾಜಿ, ಎಂ.ಜಂಬಯ್ಯ ನಾಯಕ, ಶ್ರೀನಿವಾಸ್, ಟಿ. ನಾಗರಾಜ್, ಸಣ್ಣಕ್ಕಿ ರುದ್ರಪ್ಪ, ದುರುಗಪ್ಪ, ಎಸ್.ಎಸ್.ಚಂದ್ರಶೇಖರ್, ಜಂಬಾನಳ್ಳಿ ವಸಂತ, ಕೊಟ್ರೇಶ, ದೇವರಮನೆ ಶ್ರೀನಿವಾಸ್, ಜೆ.ಉಮಾದೇವಿ, ಆರ್. ಭಾಸ್ಕರ ರೆಡ್ಡಿ ಇತರರು ಮಾತನಾಡಿ, ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಅಗತ್ಯವನ್ನು ತಿಳಿಸಿದರು.
Read the complete story at Prajavani