ಪಕ್ಷ ವಿಸರ್ಜಿಸ್ತೀವಿ ಅಂದಿದ್ರಲ್ಲಾ ಏನಾಯ್ತು?: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮೈಸೂರು: ‘ಅಧಿಕಾರಕ್ಕೆ ಬಾರದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇವೆ ಎಂದು ಹಿಂದೆ ಹೇಳಿದ್ದವರು ನಂತರ ಏನು ಮಾಡಿದರು? ಬಿಜೆಪಿಯವರು ಹಾಗೂ ಆರ್ಎಸ್ಎಸ್ ಬಗ್ಗೆ ಏನೆಲ್ಲಾ ಮಾತನಾಡಿದ್ದರು ಎಂಬುದನ್ನೆಲ್ಲಾ ಮಾಧ್ಯಮದವರು ಜ್ಞಾಪಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.‘2028ಕ್ಕೆ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂಬ ಆ ಪಕ್ಷಗಳ ನಾ
ಮೈಸೂರು: ‘ಅಧಿಕಾರಕ್ಕೆ ಬಾರದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇವೆ ಎಂದು ಹಿಂದೆ ಹೇಳಿದ್ದವರು ನಂತರ ಏನು ಮಾಡಿದರು? ಬಿಜೆಪಿಯವರು ಹಾಗೂ ಆರ್ಎಸ್ಎಸ್ ಬಗ್ಗೆ ಏನೆಲ್ಲಾ ಮಾತನಾಡಿದ್ದರು ಎಂಬುದನ್ನೆಲ್ಲಾ ಮಾಧ್ಯಮದವರು ಜ್ಞಾಪಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.‘2028ಕ್ಕೆ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂಬ ಆ ಪಕ್ಷಗಳ ನಾಯಕರ ಹೇಳಿಕೆಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಮಾಧ್ಯಮದವರು ಫ್ಲಾಶ್ಬ್ಯಾಕ್ಗಳನ್ನೆಲ್ಲಾ ತೋರಿಸಿ’ ಎಂದರು.‘ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತದೆ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯಿಸಲು ಬಯಸದ ಅವರು, ‘ದೊಡ್ಡವರ ಸುದ್ದಿ ನನಗೆ ಬೇಡ’ ಎಂದು ಕೈಮುಗಿಯುತ್ತಾ ಹೊರಟರು. ‘2023ರ ಚುನಾವಣೆಯಲ್ಲೂ ಅವರು (ಕುಮಾರಸ್ವಾಮಿ) ಹಾಗೆಯೇ ಹೇಳಿದ್ದರು’ ಎಂದು ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.ಕಲಬುರಗಿಯಲ್ಲಿ ಶಂಕಿತ ಉಗ್ರ ಸೆರೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜಕೀಯವಾಗಿ ಮಾತನಾಡುವ ವಿಷಯವದಲ್ಲ. ಪೊಲೀಸರೇ ಆ ಬಗ್ಗೆ ತನಿಖೆ ನಡೆಸಿ ಮಾತನಾಡುತ್ತಾರೆ’ ಎಂದು ಹೇಳಿದರು.