ಫ್ರಾನ್ಸ್ನಲ್ಲಿ ಧಗಧಗ; ಭುಗಿಲೆದ್ದ ಹಿಂಸಾಚಾರ – 5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ
– ಐಷಾರಾಮಿ ಮಳಿಗೆಗಳ ಲೂಟಿ ಪ್ಯಾರಿಸ್: ಫ್ರಾನ್ಸ್ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಹದಗೆಡುತ್ತಿರುವ ಸಾರ್ವಜನಿಕ ಸೇವೆಗಳ ವಿರುದ್ಧ ಶನಿವಾರ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದೆ. ಫ್ರಾನ್ಸ್ ದೇಶಾದ್ಯಂತ 5.5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಿಂದ ಪ್ಯಾರಿಸ್ನಾದ್ಯಂತ ಅಶ್ರುವಾಯು ಆವರಿಸಿತ್

– ಐಷಾರಾಮಿ ಮಳಿಗೆಗಳ ಲೂಟಿ ಪ್ಯಾರಿಸ್: ಫ್ರಾನ್ಸ್ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಹದಗೆಡುತ್ತಿರುವ ಸಾರ್ವಜನಿಕ ಸೇವೆಗಳ ವಿರುದ್ಧ ಶನಿವಾರ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದೆ. ಫ್ರಾನ್ಸ್ ದೇಶಾದ್ಯಂತ 5.5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಿಂದ ಪ್ಯಾರಿಸ್ನಾದ್ಯಂತ ಅಶ್ರುವಾಯು ಆವರಿಸಿತ್ತು. ಫ್ರಾನ್ಸ್ನ ಹಲವು ನಗರಗಳಲ್ಲಿ ಕಟ್ಟಡಗಳು ಬೆಂಕಿಗಾಹುತಿಯಾದವು. ಅಂಗಡಿಗಳನ್ನು ಲೂಟಿ ಮಾಡಲಾಯಿತು. ಪ್ರತಿಭಟನೆಗಿಳಿದ 5.5 ಲಕ್ಷ ಜನರ ಪೈಕಿ 1.10 ಲಕ್ಷ ಜನ ಪ್ಯಾರಿಸ್ನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಆಂತರಿಕ ಸಚಿವ ಲಾರೆಂಟ್ ನುನೆಜ್ ತಿಳಿಸಿದ್ದಾರೆ. Chaos et flammes place de la République : les manifestations du 17 octobre dégénèrent à #Paris et dans toute la #France Samedi 17 octobre 2026, une journée nationale de mobilisation a viré au chaos dans plusieurs villes, en particulier à Paris. Place de la République, point de départ du principal cortège, des affrontements violents ont éclaté avant même le lancement de la manifestation. Des centaines d’individus masqués et vêtus de noir ont affronté les forces de l’ordre. Gaz lacrymogènes, canon à eau et grenades ont été déployés face à des jets de projectiles, de pavés et de mortiers d’artifice. Des voitures on été incendiées, tandis que des barricades brûlaient dans les rues adjacentes. La préfecture de police a évoqué « plusieurs centaines d’individus violents » liés à l’ultragauche, et annoncé 133 interpellations dans la capitale en début d’après-midi. Malgré ces tensions, le cortège autorisé (Gilets jaunes, syndicats, lycéens, étudiants et autres) a finalement démarré vers 14h30 en direction de la place de Clichy. Les autorités avaient interdit les parcours vers Bastille, Concorde ou les Champs-Élysées et déployé un dispositif sécuritaire massif. Ailleurs en France, les incidents se sont multipliés. À Marseille, des manifestants ont brièvement envahi la mairie en criant « C’est la Révolution, on prend la Bastille ». À Lyon, l’office de tourisme de la place Bellecour a été pillé et incendié. Des violences ont également été signalées à Rennes, Toulouse, Angers et d’autres villes : tentatives de pillage, attaques contre les forces de l’ordre et dégradations. À la mi-journée, le ministère de l’Intérieur recensait déjà 140 actions et plus de 32 800 personnes mobilisées hors de Paris, avec des centaines d’interpellations au total (272 en milieu d’après-midi selon certains bilans). Les autorités anticipaient jusqu’à 40 000 à 60 000 participants à Paris et 150 000 en régions, dans une « convergence des colères » réunissant anciens Gilets jaunes, lycéens, syndicats (dont la CGT), agriculteurs et militants du climat. Cette mobilisation, née de revendications sur l’éducation et le pouvoir d’achat, intervient dans un contexte social tendu. — XINFOLIVE (@xinfolive) October 17, 2026 ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡ ಹಿನ್ನೆಲೆ 1,200ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಘರ್ಷಣೆಯಲ್ಲಿ 150 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಸೆಬಾಸ್ಟಿಯನ್ ಲೆಕೊರ್ನು ತಿಳಿಸಿದ್ದಾರೆ. ಶಾಲೆಗಳಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನ ವಿರೋಧಿಸಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆ, ಇದೀಗ ಬೃಹತ್ ಜನಾಂದೋಲನವಾಗಿ ರೂಪುಗೊಂಡಿದೆ. ಪ್ಯಾರಿಸ್ನಲ್ಲಿ ಆರಂಭದಲ್ಲಿ ನಡೆದ ಮೆರವಣಿಗೆ ಬಹುತೇಕ ಶಾಂತಿಯುತವಾಗಿತ್ತು. ಆದರೆ, ಸಂಜೆ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಕೈಮೀರಿತು. ಉದ್ರಿಕ್ತರ ಗುಂಪು ಬೀದಿಗಿಳಿದು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದವು. ʻಪ್ಲಾಸ್ ದೆ ಲಾ ರಿಪಬ್ಲಿಕ್ʼ ಸೇರಿದಂತೆ ಪ್ರಮುಖ ಸ್ಥಳಗಳ ಸಮೀಪ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 17 octobre 2026: la mairie de Limoges incendiée, son clocher qui s’effondre. Des images insoutenables. Manifester est un droit, détruire est un crime. Quand la colère devient barbarie, c’est la République qu’on attaque. Jusqu’où ira cette folie ? #Limoges #France https://t.co/VL9DZZLv6s — Ricardo Karam ريكاردو كرم (@RicardoRKaram) October 17, 2026 ಇದಲ್ಲದೇ ಉದ್ರಿಕ್ತರ ಗುಂಪು ಅನೇಕ ಅಂಗಡಿಗಳನ್ನ ಲೂಟಿ ಮಾಡಿದ್ದು, ವ್ಯಾಪಾರ ಮಳಿಗೆಗಳನ್ನು ಧ್ವಂಸಗೊಳಿಸಲಾಗಿದೆ. ಕನಿಷ್ಠ 1 ರೆಸ್ಟೋರೆಂಟ್ ಬೆಂಕಿಗೆ ಆಹುತಿಯಾಗಿದೆ. ಬೋರ್ಡೋ ನಗರದಲ್ಲಿ ಪ್ರತಿಭಟನಾಕಾರರು ಲೂಯಿ ವಿಟಾನ್ ಮಳಿಗೆಯನ್ನ ಲೂಟಿ ಮಾಡಿದ್ದಾರೆ. ಲಿಲ್ಲೆ ನಗರದಲ್ಲಿರುವ ಆಪಲ್ ಮಳಿಗೆಯನ್ನೂ ಧ್ವಂಸಗೊಳಿಸಿ ಲೂಟಿ ಮಾಡಲಾಗಿದೆ. ಪ್ಯಾರಿಸ್ನಲ್ಲಿ ಬಟ್ಟೆ ಮತ್ತು ಆಹಾರ ಪದಾರ್ಥಗಳ ಮಳಿಗೆಗಳನ್ನೂ ಗುರಿಯಾಗಿಸಲಾಗಿದೆ. ಲಿಲ್ಲೆ ಮತ್ತು ಮಾರ್ಸೆ ನಗರಗಳಲ್ಲಿನ ಸರ್ಕಾರಿ ಕಟ್ಟಡಗಳಿಗೆ ಪ್ರತಿಭಟನಾಕಾರರು ನುಗ್ಗಿದ್ದಾರೆ ಎಂಬ ವರದಿಗಳೂ ಬಂದಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನ ಬಳಸಿದರು. ಪೊಲೀಸರು ಉದ್ರಿಕ್ತ ಗುಂಪುಗಳತ್ತ ನುಗ್ಗಿ, ಹಲವರ ಮೇಲೆ ಲಾಠಿ ಪ್ರಹಾರ ನಡೆಸಿದರು.