ಜಿರಳೆಗಳ ವಿರುದ್ಧ ಲಾಲ್ ಹಿಟ್ ಜನತಾ ಪಾರ್ಟಿ ಅಖಾಡಕ್ಕೆ: ಸಿಇಸಿ ರಾಜೀನಾಮೆ ಆಗ್ರಹಕ್ಕೆ ತೀವ್ರ ವಿರೋಧ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕನ್ನಾಟ್ ಪ್ಲೇಸ್ ಸೇರಿದಂತೆ ದೆಹಲಿಯ ಹಲವೆಡೆ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗಳಿಗೆ ಪ್ರತಿಯಾಗಿ ಇದೀಗ ಲಾಲ್ ಹಿಟ್ ಜನತಾ ಪಾರ್ಟಿ(Lal Hit Janata Party) ಎಂಬ ಹೊಸ ಬಣ ಸ್ಥಾಪನೆಯಾಗಿದೆ. ಭಾನುವಾರ ದೆಹಲಿಯ ಮಾಳವೀಯ ಸ್ಮೃತಿ ಭ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ಕನ್ನಾಟ್ ಪ್ಲೇಸ್ ಸೇರಿದಂತೆ ದೆಹಲಿಯ ಹಲವೆಡೆ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗಳಿಗೆ ಪ್ರತಿಯಾಗಿ ಇದೀಗ ಲಾಲ್ ಹಿಟ್ ಜನತಾ ಪಾರ್ಟಿ(Lal Hit Janata Party) ಎಂಬ ಹೊಸ ಬಣ ಸ್ಥಾಪನೆಯಾಗಿದೆ. ಭಾನುವಾರ ದೆಹಲಿಯ ಮಾಳವೀಯ ಸ್ಮೃತಿ ಭವನದಲ್ಲಿ ಲಾಲ್ ಹಿಟ್ ಜನತಾ ಪಾರ್ಟಿ ತನ್ನ ಮೊದಲ ಸದಸ್ಯತ್ವ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖ್ಯಸ್ಥ ಅಯಾನ್ ಭಟ್ನಾಗರ್ ಹಾಗೂ ಇತರ ಮುಖಂಡರು ಸಿಜೆಪಿ, ಕಾಂಗ್ರೆಸ್(Congress) ಮತ್ತು ಪ್ರತಿಭಟನಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಪ್ರತಿಭಟನೆಗಳು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುತ್ತಿದ್ದು, ವ್ಯಾಪಾರಸ್ಥರಿಗೆ ಅಪಾರ ನಷ್ಟ ಉಂಟುಮಾಡುತ್ತಿವೆ ಎಂದು ಅವರು ಆರೋಪಿಸಿದರು. ತಮ್ಮ ಭವಿಷ್ಯದ ಕಾರ್ಯತಂತ್ರ ರೂಪಿಸಲು ಮತ್ತು ಅಲ್ಪಾವಧಿಯ ಸೂಚನೆಯಲ್ಲೂ ಭಾರಿ ಸಂಖ್ಯೆಯಲ್ಲಿ ಜನರನ್ನು ಒಗ್ಗೂಡಿಸಬಹುದು ಎಂದು ತೋರಿಸಲು ಈ ಸಭೆ ಕರೆಯಲಾಗಿತ್ತು ಎಂದು ಅಯಾನ್ ಭಟ್ನಾಗರ್ ಹೇಳಿದರು. “ನಾವೇ ಇಷ್ಟು ಜನ ಸೇರಿದ್ದೇವೆ, ಇನ್ನು ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಕೊಟ್ಟರೆ ಎಷ್ಟು ಜನ ಜಮಾಯಿಸಬಹುದು ಯೋಚಿಸಿ” ಎಂದ ಅವರು, ಜನರು ಕೇವಲ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗದೆ ಬೀದಿಗಿಳಿಯಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಫ್ರಾನ್ಸ್ನಲ್ಲಿ ಧಗಧಗ; ಭುಗಿಲೆದ್ದ ಹಿಂಸಾಚಾರ – 5 ಲಕ್ಷಕ್ಕೂ ಹೆಚ್ಚು ಜನ ಬೀದಿಗಿಳಿದು ಪ್ರತಿಭಟನೆ Delhi: Lal Hit Janta Party convenor Ayan Bhatnagar says, “The Lal Hit Janta Party was not formed to contest elections, as we have already made clear. We stand against CJP and its protests. We oppose cockroaches who want to weaken the country’s democracy and attempt to create anarchy in the country. We will gather in different groups, on both large and small scales, present our views and arguments, and take our message forward. We will show them that a party like the ‘Lal HIT Janta Party’ now exists to challenge them. If you have the courage, come and debate. If you win, it will be your victory, and if we win, it will be ours.” — IANS (@ians_india) October 18, 2026 ಪ್ರತಿಭಟನಾಕಾರರನ್ನು ಕೀಟಗಳಿಗೆ ಹೋಲಿಸಿದ ಅವರು, ದಸರಾದಿಂದ ದೀಪಾವಳಿಯವರೆಗಿನ ಸಮಯವು ವ್ಯಾಪಾರಿಗಳಿಗೆ ಪ್ರಮುಖ ವಹಿವಾಟಿನ ಋತು. ಕನ್ನಾಟ್ ಪ್ಲೇಸ್ನಂತಹ ವಾಣಿಜ್ಯ ಕೇಂದ್ರಗಳಲ್ಲಿ ಇಂತಹ ಗೊಂದಲ ಸೃಷ್ಟಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ವಕೀಲ ಪ್ರಶಾಂತ್ ಭೂಷಣ್ ಅವರ ಪ್ರಭುತ್ವ ಬದಲಾವಣೆ(Regime Change) ಹೇಳಿಕೆಯನ್ನು ಪ್ರಸ್ತಾಪಿಸಿದ ಭಟ್ನಾಗರ್, ಬೀದಿಗಿಳಿದು ಪ್ರತಿಭಟಿಸುವುದರಿಂದ ಸರ್ಕಾರ ಬದಲಾಗುವುದಿಲ್ಲ ಎಂದರು. ಇಂದು ಚುನಾವಣಾ ಆಯುಕ್ತರ ರಾಜೀನಾಮೆ ಕೇಳುವವರು ನಾಳೆ ಪ್ರಧಾನಿ ಮೋದಿಯವರ ರಾಜೀನಾಮೆ ಕೇಳಬಹುದು. 50,000 ಜನ ಸೇರಿದ ಮಾತ್ರಕ್ಕೆ ಅಸಂವಿಧಾನಿಕ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, 2023 ರಲ್ಲಿ ಜಾರಿಗೆ ತಂದ ನೂತನ ನೇಮಕಾತಿ ನಿಯಮಾವಳಿಗಳಲ್ಲಿ ವಿರೋಧ ಪಕ್ಷದ ನಾಯಕರೂ ಭಾಗಿಯಾಗಿದ್ದಾರೆ ಎಂಬುದನ್ನು ಅವರು ನೆನಪಿಸಿದರು. ಪ್ರಜಾಪ್ರಭುತ್ವ ರಕ್ಷಣೆಯೇ ತಮ್ಮ ಮುಖ್ಯ ಉದ್ದೇಶ ಎಂದ ಅವರು, ಪೊಲೀಸರು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಹಾಳುಗೆಡವುವುದೇ ಸಿಜೆಪಿಯ ಗುರಿ ಎಂದು ದೂರಿದರು. ಈ ಸಂಘಟನೆಗೆ ಕಾಂಗ್ರೆಸ್ ಮತ್ತು ಐಸಾ (AISA) ಬೆಂಬಲ ನೀಡುತ್ತಿವೆ ಎಂದು ಆರೋಪಿಸಿದ ಅವರು, ಪೊಲೀಸರ ಮೇಲಿನ ಅನುಚಿತ ವರ್ತನೆಯನ್ನು ಎಚ್ಚರಿಸುತ್ತಾ, ಕೆಡುಕಿನ ಮೇಲೆ ಒಳಿತಿನ ವಿಜಯವಾಗಿ ಈ ಕಾಕ್ರೋಚ್ ಜನತಾ ಪಾರ್ಟಿಯ ಅಂತ್ಯವು ದಸರಾದಿಂದಲೇ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದರು.