ಶಿವಮೊಗ್ಗದಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ – ಆನೆಗಳಿಗೆ ಜಂಬೂ ಸವಾರಿ ತಾಲೀಮು
ಶಿವಮೊಗ್ಗ: ನಗರದಲ್ಲಿ (Shivamogga) ದಸರಾ (Dasara) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿಗಾಗಿ ಆನೆಗಳ (Elephant) ತಂಡಕ್ಕೆ ಅಂಬಾರಿ ಹೊರುವ ಹಾಗೂ ಕುಮ್ಕಿ ಆನೆಗಳಿಗೆ ತರಬೇತಿ ಆರಂಭಿಸಲಾಗಿದೆ. ಆನೆ ಬಿಡಾರದ ವೈದ್ಯ ಡಾ. ಮುರಳಿ ಮನೋಹರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳಿಗೆ ಪ್ರತಿನಿತ್ಯ ಎರಡು ಬಾರಿ ತರಬೇತಿ ನೀಡುತ್ತಿದ್ದಾರೆ. ಜಂಬೂ ಸವಾರಿ ಸಾ

ಶಿವಮೊಗ್ಗ: ನಗರದಲ್ಲಿ (Shivamogga) ದಸರಾ (Dasara) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿಗಾಗಿ ಆನೆಗಳ (Elephant) ತಂಡಕ್ಕೆ ಅಂಬಾರಿ ಹೊರುವ ಹಾಗೂ ಕುಮ್ಕಿ ಆನೆಗಳಿಗೆ ತರಬೇತಿ ಆರಂಭಿಸಲಾಗಿದೆ. ಆನೆ ಬಿಡಾರದ ವೈದ್ಯ ಡಾ. ಮುರಳಿ ಮನೋಹರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳಿಗೆ ಪ್ರತಿನಿತ್ಯ ಎರಡು ಬಾರಿ ತರಬೇತಿ ನೀಡುತ್ತಿದ್ದಾರೆ. ಜಂಬೂ ಸವಾರಿ ಸಾಗುವ ಪ್ರಮುಖ ರಸ್ತೆಗಳಲ್ಲಿ ಸಕ್ರೆಬೈಲು ಬಿಡಾರದ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಕೋಟೆ ರಸ್ತೆ-ಗಾಂಧಿ ಬಜಾರ್- ಬಿ.ಹೆಚ್.ರಸ್ತೆ- ಎ.ಎ.ಸರ್ಕಲ್, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರೋಡ್ ಮೂಲಕ ಫ್ರೀಡಂ ಪಾರ್ಕ್ವರೆಗೂ ಆನೆಗಳು ತಾಲೀಮು ನಡೆಸಿವೆ. ಇದನ್ನೂ ಓದಿ: ಮೈಸೂರು ದಸರಾದಿಂದ ‘ಕೋಲು’ ವರೆಗೆ; ದಕ್ಷಿಣ ಭಾರತದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ? ಜನಸಂದಣಿಗೆ ಹೊಂದಾಣಿಕೆ ಮಾಡಿಸುವ ಸಲುವಾಗಿ ತಾಲೀಮು ಮಾಡಲಾಗುತ್ತಿದೆ. ಈ ಬಾರಿ ಸಾಗರ್ ಆನೆ ಅಂಬಾರಿ ಹೊರಲಿದೆ. ಸಾಗರ್ ಆನೆಗೆ ಸೋಮಣ್ಣ ಹಾಗೂ ಬಹದ್ಹೂರ್ ಆನೆ ಸಾಥ್ ನೀಡಲಿವೆ. ಅ.21ರ ಬುಧವಾರ ಶಿವಮೊಗ್ಗ ದಸರಾದ ವೈಭವದ ಜಂಬೂ ಸವಾರಿ ನೆರವೇರಲಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಇದನ್ನೂ ಓದಿ: ಕಂಬಳಕ್ಕೆ ವಿದ್ಯುಕ್ತ ಚಾಲನೆ – ಇಂದಿನಿಂದ 2 ದಿನ ದಸರೆಯಲ್ಲಿ ಕರಾವಳಿ ಸಂಸ್ಕೃತಿಯ ಸಂಭ್ರಮ