ಧಾರವಾಡ: ಎ೦ಎಸ್ಪಿ ನಿಗದಿ ದಿನಾಂಕ ಘೋಷಣೆಗೆ ರೈತರ ಪಟ್ಟು
ಧಾರವಾಡ: ಕಬ್ಬಿಗೆ ಎಂ ಎಸ್ ಪಿ ನಿಗದಿಪಡಿಸುವ ದಿನಾಂಕ ಘೋಷಿಸುವವರೆಗೆ ಉಗ್ರಾಣದ ಸಕ್ಕರೆಯನ್ನು ಮಾರಾಟ ಮಾಡ ಬಾರದು. ಈ ಕುರಿತು ಸಚಿವ ಪ್ರಲ್ಹಾದ ಜೋಶಿ ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಆಗ್ರಹಿಸಿದರು.ಸೋಮವಾರ (ಅ.19) ಬೆಳಿಗ್ಗೆ ವರೆಗೆ ತಾತ್ಕಾಲಿಕವಾಗಿ ಪಾದಯಾತ್ರೆ. ಸ್ಥಗಿತಗೊಳಿಸುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಪಾದಯಾತ್ರೆ ಮುಂದ

ಧಾರವಾಡ: ಕಬ್ಬಿಗೆ ಎಂ ಎಸ್ ಪಿ ನಿಗದಿಪಡಿಸುವ ದಿನಾಂಕ ಘೋಷಿಸುವವರೆಗೆ ಉಗ್ರಾಣದ ಸಕ್ಕರೆಯನ್ನು ಮಾರಾಟ ಮಾಡ ಬಾರದು. ಈ ಕುರಿತು ಸಚಿವ ಪ್ರಲ್ಹಾದ ಜೋಶಿ ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಆಗ್ರಹಿಸಿದರು.ಸೋಮವಾರ (ಅ.19) ಬೆಳಿಗ್ಗೆ ವರೆಗೆ ತಾತ್ಕಾಲಿಕವಾಗಿ ಪಾದಯಾತ್ರೆ. ಸ್ಥಗಿತಗೊಳಿಸುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಪಾದಯಾತ್ರೆ ಮುಂದುವರಿಸುತ್ತೇವೆ ಎಂದರು.ಬೇಡಿಕೆಗೆ ಸ್ಪಂದನೆ: ಜಿಲ್ಲಾಧಿಕಾರಿ ಭರವಸೆಎಂ ಎಸ್ ಪಿ ನಿಗದಿಯಾಗುವವರೆಗೆ ಜಿಲ್ಲೆಯ ಕಬ್ಬಿನ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಲ್ಲ. ಪಾದಯಾತ್ರೆ ಸ್ಥಗಿತಗೊಳಿಸಿ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.ಸಚಿವ ಪ್ರಲ್ಹಾದ ಜೋಶಿ ಅವರನ್ನ ಭೇಟಿ ಮಾಡಿಸಲು ಅಧಿಕಾರಿಗಳು ರೈತ ಮುಖಂಡರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ದರು.
Read the complete story at Prajavani