ಹುಬ್ಬಳ್ಳಿಯಲ್ಲಿ ದಸರಾ ಹಬ್ಬ: ನಾರಿಶಕ್ತಿ ಆರಾಧನೆಯ ಪ್ರತೀಕ ಎಂದ ಮೇಯರ್
ಹುಬ್ಬಳ್ಳಿ: ‘ದಸರಾ ಹಬ್ಬವು ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ನಾರಿಶಕ್ತಿಯ ಆರಾಧನೆಯ ಪ್ರತೀಕವಾಗಿದೆ. ಈ ವೇಳೆ ದುರ್ಗಾ ದೇವಿಗೆ ಪೂಜೆ ಸಲ್ಲಿಸುವುದು. ಮಹಿಳೆಯರಿಗೆ ಉಡಿ ತುಂಬುವುದು ಶ್ರೇಷ್ಠವಾದ ಕಾರ್ಯವಾಗಿದೆ’ ಎಂದು ಹು–ಧಾ ಮಹಾನಗರ ಪಾಲಿಕೆಯ ಮೇಯರ್ ದುರ್ಗಮ್ಮ ಶಶಿಕಾಂತ್ ಬೆಜವಾಡ ಹೇಳಿದರು.ನಗರದ ಲೋಹಿಯಾ ನಗರದ ರಂಗಮಂದಿರದಲ್ಲಿ ಮರಾಠಾ ಅಭಿವೃದ್ಧಿ ಸಂಘ,

ಹುಬ್ಬಳ್ಳಿ: ‘ದಸರಾ ಹಬ್ಬವು ಭಾರತೀಯ ಸಂಸ್ಕೃತಿ, ಧಾರ್ಮಿಕ ಪರಂಪರೆ ಹಾಗೂ ನಾರಿಶಕ್ತಿಯ ಆರಾಧನೆಯ ಪ್ರತೀಕವಾಗಿದೆ. ಈ ವೇಳೆ ದುರ್ಗಾ ದೇವಿಗೆ ಪೂಜೆ ಸಲ್ಲಿಸುವುದು. ಮಹಿಳೆಯರಿಗೆ ಉಡಿ ತುಂಬುವುದು ಶ್ರೇಷ್ಠವಾದ ಕಾರ್ಯವಾಗಿದೆ’ ಎಂದು ಹು–ಧಾ ಮಹಾನಗರ ಪಾಲಿಕೆಯ ಮೇಯರ್ ದುರ್ಗಮ್ಮ ಶಶಿಕಾಂತ್ ಬೆಜವಾಡ ಹೇಳಿದರು.ನಗರದ ಲೋಹಿಯಾ ನಗರದ ರಂಗಮಂದಿರದಲ್ಲಿ ಮರಾಠಾ ಅಭಿವೃದ್ಧಿ ಸಂಘ, ಮರಾಠಾ ಮಹಿಳಾ ಮಂಡಳದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಮಹತ್ವದ ಕಾರ್ಯವಾಗಿದೆ’ ಎಂದರು.‘ಸಂಘಟಿತವಾಗಿ ನಡೆಸುವ ಇಂತಹ ಕಾರ್ಯಕ್ರಮಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಒಗ್ಗಟನ್ನು ಬೆಳೆಸುವುದರ ಜೊತೆಗೆ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಶಕ್ತಿ. ಪ್ರತಿಯೊಬ್ಬರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ತಿಳಿಸಿದರು.ವಿದ್ಯಾತಾಯಿ ಪವಾರ್ ಮಾತನಾಡಿದರು. ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿದರು. ಪ್ರಮುಖರಾದ ವಿಶಾಲ ಅಬ್ಬಯ್ಯ, ರಾಜಶೇಖರ ಮೆಣಸಿನಕಾಯಿ, ವಿನಾಯಕ ಮಾಳದಕರ್, ಗುರುರಾಜ್ ಕಾಟೇನವರ, ಸೀಮಾಲಾದವ, ಕೃಷ್ಣಾ ಶಿಂದೆ, ಸಂಜನಾ ಕೊಂಗಿ, ಕೋಮಲ್ ಶಿಂಧೆ ಹಾಗೂ ಸಮುದಾಯದ ಗಣ್ಯರು ಭಾಗಹಿಸಿದ್ದರು.261018-24-1620084129