ಪರಪ್ಪನ ಅಗ್ರಹಾರದಲ್ಲಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ: ವಿಚಾರಣಾಧೀನ ಕೈದಿ ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತು ಹಾಗೂ ನಗದು ಸಾಗಣೆ ಆರೋಪ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಜೈಲಿನೊಳಗೆ ₹11,500 ನಗದು ಸಾಗಣೆ ಮಾಡಲು ಯತ್ನಿಸಿದ ವಿಚಾರಣಾಧೀನ ಮಹಿಳಾ ಕೈದಿ ಹಾಗೂ ಇಬ್ಬರು ಸಜಾಬಂಧಿಗಳ ಬ್ಯಾರಕ್ನಲ್ಲಿ ಎರಡು ಮೊಬೈಲ್ ಪೋನ್, ಮೂರು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಈ ಕುರಿತು ಪರಪ್ಪನ ಅಗ್ರಹಾರ ಪ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತು ಹಾಗೂ ನಗದು ಸಾಗಣೆ ಆರೋಪ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಜೈಲಿನೊಳಗೆ ₹11,500 ನಗದು ಸಾಗಣೆ ಮಾಡಲು ಯತ್ನಿಸಿದ ವಿಚಾರಣಾಧೀನ ಮಹಿಳಾ ಕೈದಿ ಹಾಗೂ ಇಬ್ಬರು ಸಜಾಬಂಧಿಗಳ ಬ್ಯಾರಕ್ನಲ್ಲಿ ಎರಡು ಮೊಬೈಲ್ ಪೋನ್, ಮೂರು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.ವಿಚಾರಣಾಧೀನ ಕೈದಿ ವಿದೇಶಿ ಮಹಿಳೆ ಆಗ್ನೇಸ್ ನಂಬಲಿರಾವ್ ಅವರನ್ನು ಅಕ್ಟೋಬರ್ 12ರಂದು ಕೋರ್ಟ್ ವಿಚಾರಣೆಗೆ ಕರೆದುಕೊಂಡು ಹೋಗಲಾಗಿತ್ತು. ವಾಪಸ್ ಜೈಲಿಗೆ ಕರೆದುಕೊಂಡು ಬಂದಾಗ ಜೈಲಿನ ಮುಖ್ಯ ದ್ವಾರದಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದಾಗ, ಒಳಉಡುಪಿನಲ್ಲಿ ಹಣ ಬಚ್ಚಿಟ್ಟುಕೊಂಡಿದ್ದು ಪತ್ತೆಯಾಗಿದೆ. ಜೈಲಿನೊಳಗೆ ಹಣ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಕಾರಾಗೃಹ ಅಧೀಕ್ಷಕ ಬಿ.ಎಂ.ಕೊಟ್ರೇಶ್ ಅವರ ದೂರಿನ ಮೇರೆಗೆ ಸಜಾಬಂಧಿ ಕೈದಿ ಮಾಲತೇಶ್ ಎಂಬಾತ ಟವರ್-2 ಬ್ಯಾರಕ್ನ ನಾಲ್ಕನೇ ಕೊಠಡಿಯಲ್ಲಿ ಒಂದು ಮೊಬೈಲ್, ಸಿಮ್ ಕಾರ್ಡ್ ಪತ್ತೆಯಾಗಿದೆ. ಅದೇ ವೇಳೆ ‘ಸಿ’ ಬ್ಯಾರಕ್ನ 5ನೇ ಕೊಠಡಿಯಲ್ಲಿ ಮಹಮ್ಮದ್ ನವಾಜ್ ಎಂಬಾತ ಟೋಪಿಯೊಳಗೆ ಮುಚ್ಚಿಟ್ಟಿದ್ದ ಮೂರು ಸಿಮ್ ಕಾರ್ಡ್, ಒಂದು ಮೊಬೈಲ್ ಪತ್ತೆಯಾಗಿದೆ.ನಿಷೇಧಿತ ವಸ್ತುಗಳು ಜೈಲಿನ ಒಳಗೆ ಹೇಗೆ ಬಂದಿವೆ. ಅವುಗಳ ಪೂರೈಕೆ ಮಾಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.