ಬಿಗ್ಬಾಸ್ ಮನೆಯಲ್ಲಿ ನನಗೊಂದು ಜೋಡಿಯಿಲ್ಲ: ಕಿಚ್ಚನ ಮುಂದೆ ಪ್ರಶಾಂತನ ಅಳಲು
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಶಾಂತ್ ಅವರು ಕಿಚ್ಚ ಸುದೀಪ್ ಮುಂದೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ಮನೆಯಲ್ಲಿ ಎಲ್ಲರಿಗೂ ಜೋಡಿಯಿದೆ, ಆದರೆ ನನಗೆ ಮಾತ್ರ ಯಾರೂ ಇಲ್ಲ ಎಂದು ತಮ್ಮ ಅಳಲು’ ತೋಡಿಕೊಂಡಿದ್ದಾರೆ.ಈ ಕುರಿತು ಕಲರ್ಸ್ ಕನ್ನಡ ವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಪ್ರೋಮೊದಲ್ಲಿ ಸುದ

ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಶಾಂತ್ ಅವರು ಕಿಚ್ಚ ಸುದೀಪ್ ಮುಂದೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ‘ಮನೆಯಲ್ಲಿ ಎಲ್ಲರಿಗೂ ಜೋಡಿಯಿದೆ, ಆದರೆ ನನಗೆ ಮಾತ್ರ ಯಾರೂ ಇಲ್ಲ ಎಂದು ತಮ್ಮ ಅಳಲು’ ತೋಡಿಕೊಂಡಿದ್ದಾರೆ.ಈ ಕುರಿತು ಕಲರ್ಸ್ ಕನ್ನಡ ವಾಹಿನಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಪ್ರೋಮೊದಲ್ಲಿ ಸುದೀಪ್ ಅವರು, ʼಪ್ರಶಾಂತ್, ನಿಮ್ಮ ಕಡೆಯಿಂದ ಒಂದು ಸೀರಿಯಸ್ ಮನವಿ ಬಂದಿದೆʼ ಎಂದು ಹೇಳುತ್ತಾರೆ.ಬಿಗ್ ಬಾಸ್ ಎಂಬ ಮನದೊಳಗಿನ ಚದುರಂಗದಾಟ...ಆಗ ಪ್ರಶಾಂತ್, ʼಸರ್, ಬಿಗ್ಬಾಸ್ ಮನೆಯಲ್ಲಿ ಎಲ್ಲರಿಗೂ ಅವರದ್ದೇ ಆದ ಜೋಡಿಯಿದೆ. ಆದರೆ ನನಗೆ ಮಾತ್ರ ಯಾರೂ ಇಲ್ಲವಲ್ಲ ಎನ್ನುವ ನೋವಿದೆʼ ಎಂದು ಹೇಳಿದ್ದಾರೆ.‘ಬಿಗ್ ಬಾಸ್’ ಮೂಲಕ ಹೆಸರು ಮಾಡಿದ್ದ ಮಂಡ್ಯದ ಹೈದ ಗಿಲ್ಲಿ ಈಗ ನಾಯಕಇದಕ್ಕೆ ಸುದೀಪ್ ಅವರು ʼನೀವು ಯಾರಿಗೆ ಪ್ರಯತ್ನಿಸಿದ್ದೀರಾʼ ಎಂದು ಪ್ರಶ್ನಿಸುತ್ತಾರೆ. ಆಗ ಪ್ರಶಾಂತ್, ಸೋನಿಕಾ ಅವರ ಹೆಸರನ್ನು ಪ್ರಸ್ತಾಪಿಸಿ, ಸೋನಿಕಾ ಅವರು, ಟಾಲ್, ಡಾರ್ಕ್ ಹಾಗೂ ಹ್ಯಾಂಡ್ಸಮ್ ಆಗಿರುವ ಹುಡುಗನನ್ನು ಬಿಗ್ಬಾಸ್ ಮನೆಗೆ ಕಳುಹಿಸಿ ಕೊಡುವಂತೆ ಬಿಗ್ಬಾಸ್ಗೆ ಕೇಳುತ್ತಿದ್ದರು. ಎಲ್ಲೆಲ್ಲೋ ಹುಡುಕುವುದು ಯಾಕೆ, ನಾನೇ ಇದ್ದೇನಲ್ಲʼ ಎಂದು ಹೇಳಿದ್ದಾರೆ. View this post on Instagram ಸುದೀಪ್ ಅವರು, ʼಆ ಮೂರು ಗುಣಗಳನ್ನು ಅವರು ನಿನ್ನಲ್ಲೇ ಹುಡುಕಿರಬಹುದು, ಆದರೆ ಅವರಿಗೆ ಅವು ಸಿಕ್ಕಿಲ್ಲʼ ಎಂದು ಕಾಲೆಳೆದಿದ್ದಾರೆ. ಇದನ್ನು ಇಂದು ಸಂಜೆ ಪ್ರಸಾರವಾಗಲಿರುವ 'ಸೂಪರ್ ಸಂಡೇ ವಿತ್ ಬಾದ್ಷಾ' ಸಂಚಿಕೆಯಲ್ಲಿ ವೀಕ್ಷಿಸಬಹುದಾಗಿದೆ.