ಮುಂಡಗೋಡದಲ್ಲಿ ಬಲೆಗೆ ಸಿಲುಕಿದ್ದ 12 ಅಡಿ ಹೆಬ್ಬಾವು ರಕ್ಷಣೆ
ಮುಂಡಗೋಡ: ಬಲೆಯಲ್ಲಿ ಸಿಲುಕಿದ್ದ 12 ಅಡಿ ಉದ್ದದ ಹೆಬ್ಬಾವು ಅನ್ನು ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ರಕ್ಷಿಸಿ ಶನಿವಾರ ಕಾಡಿಗೆ ಬಿಟ್ಟರು.ಗದ್ದೆಗೆ ಅಳವಡಿಸಿದ್ದ ಬಲೆಗೆ ಹೆಬ್ಬಾವು ಸಿಲುಕಿದೆ. ಇದನ್ನು ರಕ್ಷಿಸುವ ಬದಲು ಅಪರಿಚಿತರು, ಬಲೆ ಸಮೇತ ಹೆಬ್ಬಾವು ಅನ್ನು ತಂದು ರಸ್ತೆ ಬದಿಯ ಮರಕ್ಕೆ ಕಟ್ಟಿ ಹೋಗಿದ್ದಾರೆ. ಬಲೆಯಲ್ಲಿ ಸಿಲುಕಿ ನರಳಾಡುತ್ತಿದ್ದ ಹೆಬ್ಬಾವು ಅ

ಮುಂಡಗೋಡ: ಬಲೆಯಲ್ಲಿ ಸಿಲುಕಿದ್ದ 12 ಅಡಿ ಉದ್ದದ ಹೆಬ್ಬಾವು ಅನ್ನು ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ರಕ್ಷಿಸಿ ಶನಿವಾರ ಕಾಡಿಗೆ ಬಿಟ್ಟರು.ಗದ್ದೆಗೆ ಅಳವಡಿಸಿದ್ದ ಬಲೆಗೆ ಹೆಬ್ಬಾವು ಸಿಲುಕಿದೆ. ಇದನ್ನು ರಕ್ಷಿಸುವ ಬದಲು ಅಪರಿಚಿತರು, ಬಲೆ ಸಮೇತ ಹೆಬ್ಬಾವು ಅನ್ನು ತಂದು ರಸ್ತೆ ಬದಿಯ ಮರಕ್ಕೆ ಕಟ್ಟಿ ಹೋಗಿದ್ದಾರೆ. ಬಲೆಯಲ್ಲಿ ಸಿಲುಕಿ ನರಳಾಡುತ್ತಿದ್ದ ಹೆಬ್ಬಾವು ಅನ್ನು ಸ್ಥಳೀಯ ನಿವಾಸಿಗಳಾದ ಪ್ರಭು ಹಾಗೂ ಶಿವಾನಂದ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಗಸ್ತು ಅರಣ್ಯಪಾಲಕ ಮುತ್ತುರಾಜ ಹಳ್ಳಿ ಸ್ಥಳಕ್ಕಾಗಮಿಸಿ, ಬಲೆ ಕತ್ತರಿಸಿ ಹೆಬ್ಬಾವು ರಕ್ಷಿಸಿದ್ದಾರೆ.‘ಬಲೆಯ ಬಿಗಿತ ಹಾಗೂ ಕಟ್ಟಿದ ರೀತಿಯಿಂದಾಗಿ ಹೆಬ್ಬಾವು ಉಸಿರುಗಟ್ಟಿ ಸಾವು-ಬದುಕಿನ ನಡುವೆ ನರಳಾಡುತ್ತಿತ್ತು. ಹೆಬ್ಬಾವಿಗೆ ಸಣ್ಣ ಗಾಯ ಆಗದಂತೆ ಬಲೆಯಿಂದ ರಕ್ಷಿಸಲಾಯಿತು’ ಎಂದು ಮುತ್ತುರಾಜ ಹಳ್ಳಿ ಹೇಳಿದರು.261018-20-1746874108
Read the complete story at Prajavani