ಅನ್ನ, ದೋಸೆಯೊಂದಿಗೆ ಅದ್ಭುತ ರುಚಿ ಕೊಡುತ್ತೆ ಈ ಆಂಧ್ರ ಶೈಲಿಯ ನೆಲ್ಲಿಕಾಯಿ ಪಚಡಿ
ಗೃಹಿಣಿಯರು ಈ ಆಂಧ್ರ ಶೈಲಿಯ ನೆಲ್ಲಿಕಾಯಿ ಪಚಡಿಯನ್ನು ಮನೆಯಲ್ಲೇ ಸುಲಭವಾಗಿ ಕೇವಲ 10 ನಿಮಿಷಗಳಲ್ಲಿ ಮಾಡಿಕೊಳ್ಳಬಹುದು. ಈ ನೆಲ್ಲಿಕಾಯಿ ಪಚಡಿಯನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಬಳಸಬಹುದು. ಇದನ್ನು ಬಿಳಿ ಅನ್ನ, ದೋಸೆ, ಚಪಾತಿ, ರೊಟ್ಟಿ ಜೊತೆಗೆ ತುಪ್ಪದೊಂದಿಗೆ ಸವಿಯಬಹುದು. ನೆಲ್ಲಿಕಾಯಿ ಬೇಕಾಗುವ ಪದಾರ್ಥಗಳು...• ನೆಲ್ಲಿಕಾಯಿ: ಅರ್ಧ ಕೆಜಿ• ಹುಣಸೆಹಣ್ಣು: 100 ಗ

ಗೃಹಿಣಿಯರು ಈ ಆಂಧ್ರ ಶೈಲಿಯ ನೆಲ್ಲಿಕಾಯಿ ಪಚಡಿಯನ್ನು ಮನೆಯಲ್ಲೇ ಸುಲಭವಾಗಿ ಕೇವಲ 10 ನಿಮಿಷಗಳಲ್ಲಿ ಮಾಡಿಕೊಳ್ಳಬಹುದು. ಈ ನೆಲ್ಲಿಕಾಯಿ ಪಚಡಿಯನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಬಳಸಬಹುದು. ಇದನ್ನು ಬಿಳಿ ಅನ್ನ, ದೋಸೆ, ಚಪಾತಿ, ರೊಟ್ಟಿ ಜೊತೆಗೆ ತುಪ್ಪದೊಂದಿಗೆ ಸವಿಯಬಹುದು. ನೆಲ್ಲಿಕಾಯಿ ಬೇಕಾಗುವ ಪದಾರ್ಥಗಳು...• ನೆಲ್ಲಿಕಾಯಿ: ಅರ್ಧ ಕೆಜಿ• ಹುಣಸೆಹಣ್ಣು: 100 ಗ್ರಾಂ• ಖಾರದ ಪುಡಿ: 100 ಗ್ರಾಂ• ಉಪ್ಪು: 100 ಗ್ರಾಂ• ಸಾಸಿವೆ ಪುಡಿ: 30 ಗ್ರಾಂ • ಮೆಂತ್ಯ ಪುಡಿ: 2 ಚಮಚ • ಅರಿಸಿನ ಪುಡಿ: 1 ಚಮಚ• ಅಗತ್ಯಕ್ಕೆ ಬೇಕಾದಷ್ಟು ಎಣ್ಣೆ • ಬೆಳ್ಳುಳ್ಳಿ: 2 ಪೂರ್ತಿ ಗೆಡ್ಡೆ • ಒಣ ಮೆಣಸಿನಕಾಯಿ: 10• ಕರಿಬೇವು• ಇಂಗು: 2 ಚಮಚಮಾಡುವ ವಿಧಾನಮೊದಲು ನೆಲ್ಲಿಕಾಯಿಗಳನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿಕೊಳ್ಳಿ. ಹುಣಸೆಹಣ್ಣನ್ನು 2 ಕಪ್ ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ನಂತರ ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಂಡ ನೆಲ್ಲಿಕಾಯಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.ನಂತರ ಎಣ್ಣೆಯಲ್ಲಿ ಬೇಯಿಸಿಕೊಂಡ ನೆಲ್ಲಿಕಾಯಿ ತುಂಡುಗಳಿರುವ ಪಾತ್ರೆಗೆ ಖಾರದ ಪುಡಿ, ಉಪ್ಪು, ಸಾಸಿವೆ, ಮೆಂತ್ಯ, ಅರಿಸಿನ ಪುಡಿ ಮತ್ತು ಹುಣಸೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ನೆಲ್ಲಿಕಾಯಿ ಬೇಯಿಸಿದ ಎಣ್ಣೆಯಲ್ಲೇ ಸಾಸಿವೆ, ಮೆಂತ್ಯ, ಒಣ ಮೆಣಸಿನಕಾಯಿ, ಇಂಗು ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಬೆಳ್ಳುಳ್ಳಿ ಸೇರಿಸಿ, ಅವು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಈ ಒಗ್ಗರಣೆ ಸಂಪೂರ್ಣವಾಗಿ ತಣ್ಣಗಾದ ನಂತರ, ಅದನ್ನು ನೆಲ್ಲಿಕಾಯಿ ಮಸಾಲೆ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಕಲಸಿ. ಈಗ ಆಂಧ್ರ ಶೈಲಿಯ ನೆಲ್ಲಿಕಾಯಿ ಪಚಡಿ ಸವಿಯಲು ಸಿದ್ಧ.