ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್, ಓರ್ವ ವಶಕ್ಕೆ
ಮುಂಬೈ: ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್(Tiger Shroff) ಅವರ ಕಾರಿನ ಮೇಲೆ ಭಾನುವಾರ ಸಂಜೆ ಮುಂಬೈನ ಜುಹೂ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರು ಚಾಲಕನ ಎದೆಗೆ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಫುಟ

ಮುಂಬೈ: ಬಾಲಿವುಡ್ ಖ್ಯಾತ ನಟ ಟೈಗರ್ ಶ್ರಾಫ್(Tiger Shroff) ಅವರ ಕಾರಿನ ಮೇಲೆ ಭಾನುವಾರ ಸಂಜೆ ಮುಂಬೈನ ಜುಹೂ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರು ಚಾಲಕನ ಎದೆಗೆ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಫುಟ್ಬಾಲ್ ಮೈದಾನದಿಂದ ಹೊರಬರುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಹಾಗೂ ವಿಡಿಯೋ ಸಂದೇಶವೊಂದು ಹರಿದಾಡುತ್ತಿದ್ದು, ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್(Lawrence Bishnoi) ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ನಂತರ ಟ್ರೈಗರ್ ಶ್ರಾಫ್ ಅವರ ಕಾರನ್ನು ಆಸ್ಪತ್ರೆಗೆ ಚಲಾಯಿಸಿಕೊಂಡು ಬಂದಿದ್ದಾರೆ. #WATCH | Mumbai | Firing incident involving actor Tiger Shroff | Maharashtra Deputy Chief Minister Eknath Shinde says, “I spoke with Tiger Shroff, as well as his father, Jackie Shroff. I told Tiger not to worry—the government is with him; there is no need for concern. We will review the security arrangements for all celebrities, and the government is fully committed to ensuring their safety. If anyone tries to intimidate or threaten others, the police and the government will not spare them” — ANI (@ANI) October 18, 2026 ತನ್ನನ್ನು ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ “ನಾನು ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ. ಇಂದು ಟೈಗರ್ ಶ್ರಾಫ್ ಮೇಲೆ ನಡೆದ ದಾಳಿಯ ಹೊಣೆಯನ್ನು ಹರ್ಮನ್ ಸಂಧು ಮತ್ತು ನಾನು ಹೊರುತ್ತೇವೆ. ಟೈಗರ್ ಶ್ರಾಫ್ಗೆ ನಮ್ಮ ಎಚ್ಚರಿಕೆಗಳನ್ನು ಪಾಲಿಸುವಂತೆ ತಿಳಿಹೇಳಲಾಗಿತ್ತು. ಆದರೆ ಅವರು ಕೇಳಲಿಲ್ಲ ಮತ್ತು ಆತ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿದ್ದ ಕಾರಣ ನಮ್ಮ ಹಿಟ್ ಲಿಸ್ಟ್ನಲ್ಲಿದ್ದರು” ಎಂದು ಹೇಳಿಕೊಂಡಿದ್ದಾನೆ. ಇಡೀ ಚಿತ್ರರಂಗದಲ್ಲಿ ನಮ್ಮ ಮಾತು ಕೇಳದೆ ಕೆಲಸ ಮಾಡುವವರು ಅಥವಾ ಸಲ್ಮಾನ್ ಖಾನ್ (Salman Khan) ಜೊತೆ ಕೈಜೋಡಿಸುವ ಪ್ರತಿಯೊಬ್ಬರನ್ನೂ ಮುಗಿಸುತ್ತೇವೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಅವರು ಲಾರೆನ್ಸ್ ಬಿಷ್ಣೋಯ್ ಹಾಗೂ ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸದಿದ್ದರೆ, ಅವರ ಕುಟುಂಬದ ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಬಹಿರಂಗ ಬೆದರಿಕೆ ಹಾಕಿದ್ದಾನೆ. ಟೈಗರ್ ಶ್ರಾಫ್ ಮತ್ತು ಸಲ್ಮಾನ್ ಖಾನ್ ಪೂರ್ಣ ಪ್ರಮಾಣದ ಚಲನಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ, ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಟೈಗರ್ ಅವರ ಬಾಲಿವುಡ್ ಪ್ರವೇಶಕ್ಕೆ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರಿಗೆ ಸಲಹೆ ನೀಡುವ ಮೂಲಕ ಸಲ್ಮಾನ್ ನೆರವಾಗಿದ್ದರು. ಅಲ್ಲದೆ ಟೈಗರ್ ತಂದೆ ಜಾಕಿ ಶ್ರಾಫ್ ಕೂಡ ಸಲ್ಮಾನ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ 2024ರ ಅಕ್ಟೋಬರ್ನಲ್ಲಿ ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಇದೇ ಗ್ಯಾಂಗ್ ಗುಂಡಿಕ್ಕಿ ಹತ್ಯೆ ಮಾಡಿತ್ತು. ಇದೀಗ ಟೈಗರ್ ಶ್ರಾಫ್ ಕಾರಿನ ಮೇಲೂ ಗುಂಡಿನ ದಾಳಿ ನಡೆಸಿರುವುದು ಬಾಲಿವುಡ್ ಚಿತ್ರರಂಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.