ಚಾಲಕನ ನಿಂಯಂತ್ರಣ ತಪ್ಪಿದ ಟ್ಯಾಕ್ಟರ್ – ಬೈಕ್ ಸವಾರನ ಮೇಲೆ ಅಪ್ಪಳಿಸಿದ ಕಬ್ಬಿನ ಲೋಡ್!
ಬೀದರ್: ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲೋಡ್ ಬೈಕ್ ಸವಾರನ (Bidar) ಮೇಲೆ ಬಿದ್ದ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಲಾರಿ ಟರ್ನ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿದೆ. ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಕಬ್ಬಿನ ಲೋಡ್ ಬಿದ್ದಿದೆ.

ಬೀದರ್: ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲೋಡ್ ಬೈಕ್ ಸವಾರನ (Bidar) ಮೇಲೆ ಬಿದ್ದ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಲಾರಿ ಟರ್ನ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿದೆ. ಇದೇ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಕಬ್ಬಿನ ಲೋಡ್ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಚಲಿಸುತ್ತಿದ್ದ ಟ್ಯಾಕ್ಟರ್ ನಿಯಂತ್ರಣ ತಪ್ಪಿದ್ದರಿಂದ ಕಬ್ಬಿನ ಲೋಡ್ ಬೈಕ್ ಸವಾರನ ಮೇಲೆ ಬಿದ್ದಿದೆ. ಬೈಕ್ ಸಮೇತ ಸವಾರ ಕಬ್ಬಿನ ಲೋಡ್ ಒಳಗಡೆ ಸಿಲುಕಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಬೈಕ್ ಸವಾರನನ್ನು ರಕ್ಷಣೆ ಮಾಡಿದ್ದಾರೆ.ಇದನ್ನೂ ಓದಿ: ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ – ಮಂಗಳೂರಿನ ಚರ್ಚ್ ಪಾದ್ರಿ ಅರೆಸ್ಟ್ ಬೈಕ್ ಸವಾರನ ಮೇಲೆ ಬಿದ್ದಿದ್ದ ಕಬ್ಬಿನ ಲೋಡ್ ತೆಗೆದು ಆತನ ಜೀವ ಉಳಿಸಿದ್ದಾರೆ. ಘಟನೆ ಸಂಬಂಧ ಮನ್ನಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಸ್ಕಂದಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ವೇಳೆ ಯುವಕನಿಗೆ ವಿಷಕಾರಿ ಹಾವು ಕಡಿತ