ಶಹಾಪುರ: ಜೋಡಿ ಕೆರೆಗಳ ಭರ್ತಿಗೆ ಹತ್ತಾರು ವಿಘ್ನ
ಶಹಾಪುರ: ಪ್ರಸಕ್ತ ವರ್ಷದ ಮುಂಗಾರು ಮುನಿಸಿಕೊಂಡು ಬರದ ದವಡೆಯಲ್ಲಿ ಸಿಲುಕಿರುವ ನಗರದ ಜನತೆಗೆ ಅಂತರ್ಜಮಟ್ಟದ ಕುಸಿತ ಬಿಸಿ ತಟ್ಟಿದೆ. ನಗರದ ಹೃದಯ ಭಾಗದಲ್ಲಿರುವ ನಾಗರ ಕೆರೆ ಹಾಗೂ ಮಾವಿನ ಕೆರೆಗಳನ್ನು ತುಂಬಿಸುವ₹ 4.84ಕೋಟಿ ವೆಚ್ಚದ ಯೋಜನಾ ಕಾಮಗಾರಿ ಎರಡು ವರ್ಷ ಕಳೆದರೂ ಕುಂಟುತ್ತಾ ಸಾಗಿದೆ. ಯೋಜನೆ ಅನುಷ್ಠಾನಕ್ಕೆ ಹತ್ತಾರು ವಿಘ್ನಗಳು ಎದುರಾಗಿವೆ.ಕೃಷ್ಣಾ ಭಾಗ್ಯ ಜಲ

ಶಹಾಪುರ: ಪ್ರಸಕ್ತ ವರ್ಷದ ಮುಂಗಾರು ಮುನಿಸಿಕೊಂಡು ಬರದ ದವಡೆಯಲ್ಲಿ ಸಿಲುಕಿರುವ ನಗರದ ಜನತೆಗೆ ಅಂತರ್ಜಮಟ್ಟದ ಕುಸಿತ ಬಿಸಿ ತಟ್ಟಿದೆ. ನಗರದ ಹೃದಯ ಭಾಗದಲ್ಲಿರುವ ನಾಗರ ಕೆರೆ ಹಾಗೂ ಮಾವಿನ ಕೆರೆಗಳನ್ನು ತುಂಬಿಸುವ₹ 4.84ಕೋಟಿ ವೆಚ್ಚದ ಯೋಜನಾ ಕಾಮಗಾರಿ ಎರಡು ವರ್ಷ ಕಳೆದರೂ ಕುಂಟುತ್ತಾ ಸಾಗಿದೆ. ಯೋಜನೆ ಅನುಷ್ಠಾನಕ್ಕೆ ಹತ್ತಾರು ವಿಘ್ನಗಳು ಎದುರಾಗಿವೆ.ಕೃಷ್ಣಾ ಭಾಗ್ಯ ಜಲ ನಿಗಮದ(ಕೆಬಿಜೆಎನ್ಎಲ್) ಅನುದಾನ ಅಡಿಯಲ್ಲಿ ಎರಡು ಕೆರೆಗೆ ನೀರು ತುಂಬಿಸಲು ಹಾಗೂ ಕೆರೆಯ ಸೌಂದರ್ಯೀಕರಣಕ್ಕಾಗಿ ಎರಡು ವರ್ಷಗಳ ಹಿಂದೆಯೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಶಹಾಪುರ ಶಾಖಾ ಕಾಲುವೆ(ಎಸ್ಬಿಸಿ) ಕಾಲುವೆ ನೀರನ್ನು ಸೆಳೆದುಕೊಂಡು ಕೆರೆಗೆ ನೀರು ತುಂಬಿಸಲು ಕೊಳವೆಗಳು ಅಳವಡಿಕೆ ಕಾರ್ಯ ಮುಗಿದೆ.‘ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಪೈಪ್ ಅಳವಡಿಸಲು ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ನಮ್ಮ ಮನವಿಗೆ ಇದುವರೆಗೂ ಪರವಾನಿಗೆ ಸಿಕ್ಕಿಲ್ಲ. ಶೇ 80ರಷ್ಟು ಕೆಲಸ ಪೂರ್ಣಗೊಂಡಿದ್ದು, ಗೇಟ್ ಅಳವಡಿಕೆ ಮಾಡಬೇಕಿದೆ ಎನ್ನುತ್ತಾರೆ ನಗರಸಭೆಯ ಎಂಜಿನಿಯರ್ ಒಬ್ಬರು.ನಾಗರ ಕೆರೆ ಹಾಗೂ ಮಾವಿನ ಕೆರೆಗಳ ವ್ಯಾಪ್ತಿಯಲ್ಲಿ ಚಾಮುಂಡೇಶ್ವರಿ ಬಡಾವಣೆ, ಜಾಲಗಾರ ಓಣಿ, ಗಣೇಶ ನಗರ, ಕೆಇಬಿ ಹಿಂಭಾಗದ ಬಡಾವಣೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಬಡಾವಣೆಗಳು ಬರುತ್ತವೆ. ಎರಡು ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೆ ಅಂತರ್ಜಮಟ್ಟ ಹೆಚ್ಚಳವಾಗಿ ಕೊಳವೆಬಾವಿಯಲ್ಲಿ ನೀರು ಜಿನುಗುತ್ತವೆ.‘ಈ ವರ್ಷ ಮಳೆ ಕೊರತೆಯಿಂದ ಕೆರೆಗಳ ಒಡಲು ಬತ್ತಿದೆ. ನಮ್ಮ ಮನೆಯಲ್ಲಿನ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಒಣಗಿವೆ. ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವ ದುಃಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಗಣೇಶ ನಗರದ ನಿವಾಸಿ ಸಂತೋಷ ಸತ್ಯಂಪೇಟೆ.ಚಳಿಗಾಲದ ಆರಂಭದಲ್ಲಿ ಇದ್ದೇವೆ. ಈಗಲೇ ನೀರಿನ ಅಭಾವ ಬಿಸಿ ತಟ್ಟುತ್ತಿದೆ. ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಹೆಚ್ಚಿನ ಮುತವರ್ಜಿವಹಿಸಿದರೆ ಇಡೀ ನಗರಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಕೆರೆಯ ನೀರು ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಗರದ ನಿವಾಸಿಗಳ ಮನವಿ.ಎರಡು ಕೆರೆಗೆ ಹೊಂದಿಕೊಂಡಂತೆ ನಾಗರ ಹಾಗೂ ಮಾವಿನ ಕೆರೆಯನ್ನು ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾಗಿತ್ತು. ಮಳೆ ನೀರು ಕೆರೆಯ ಒಡಲು ಸೇರುತ್ತದೆ. ಕೆರೆಯ ಒಡಲು ಬತ್ತಿದ್ದರಿಂದ ಅಂತರ್ಜಲ ಮಟ್ಟ ಕಾಪಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದರೂ ಇದುವರೆಗೂ ಸಾಕಾರಗೊಂಡಿಲ್ಲ.ನಾನಾ ಸಾಹೇಬ್ ಮಡಿವಾಳಕರ್ ಎಇಇ ನಗರಸಭೆ, ಶಹಾಪುರಯೋಜನೆ ತಾಂತ್ರಿಕ ಸಮಸ್ಯೆಯಿಂದ ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಶಾಸಕ ಶರಣಬಸಪ್ಪ ಅವರು ಮೇಲಧಿಕಾರಿಗೆ ಕರೆ ಮಾಡಿ ಕೆಲಸ ಪೂರ್ಣಗೊಳಿಸಲು ಸೂಚಿಸಿದ್ದಾರೆಸಂತೋಷ ಸತ್ಯಂಪೇಟೆ, ನಗರದ ನಿವಾಸಿಕೆರೆಯ ಅಂಗಳ ನೀರಿಲ್ಲದೆ ಬತ್ತಿ ಹೋಗಿದೆ. ಅಂತರ್ಜಲ ಮಟ್ಟದ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕೆರೆ ತುಂಬಿಸುವ ಯೋಜನೆ ಆದಷ್ಟು ಬೇಗ ಮುಗಿದರೆ ನೀರಿನ ಬವಣೆ ತಪ್ಪಲಿದೆ261018-30-1580578502