ಪ್ರತಿಕೂಲ ಹವಾಮಾನ: ದಸರಾ ಏರ್ ಶೋ ಅರ್ಧಕ್ಕೆ ಮೊಟಕು
ಮೈಸೂರು: ಭಾನುವಾರ ಬೆಳಿಗ್ಗೆ ಇಲ್ಲಿ ನಡೆದ ದಸರಾ ವೈಮಾನಿಕ ಪ್ರದರ್ಶನವು ಹವಾಮಾನ ವೈಪರೀತ್ಯದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು.ಭಾರತೀಯ ವಾಯುಸೇನೆಯ ಸೂರ್ಯಕಿರಣ್ ತಂಡವು ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿತ್ತು. ನಿಗದಿಯಾದಂತೆ ಬೆಳಿಗ್ಗೆ 11ಕ್ಕೆ ಒಟ್ಟು ಒಂಭತ್ತು ವಿಮಾನಗಳು ಭೋರ್ಗರೆಯುತ್ತ ಬನ್ನಿಮಂಟಪ ಸಮೀಪ ಆಗಸದಲ್ಲಿ ಹಾರಾಟ ಕೈಗೊಂಡವು. ಸುಮಾರು ಐದು ನಿಮಿಷ ಕ

ಮೈಸೂರು: ಭಾನುವಾರ ಬೆಳಿಗ್ಗೆ ಇಲ್ಲಿ ನಡೆದ ದಸರಾ ವೈಮಾನಿಕ ಪ್ರದರ್ಶನವು ಹವಾಮಾನ ವೈಪರೀತ್ಯದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು.ಭಾರತೀಯ ವಾಯುಸೇನೆಯ ಸೂರ್ಯಕಿರಣ್ ತಂಡವು ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿತ್ತು. ನಿಗದಿಯಾದಂತೆ ಬೆಳಿಗ್ಗೆ 11ಕ್ಕೆ ಒಟ್ಟು ಒಂಭತ್ತು ವಿಮಾನಗಳು ಭೋರ್ಗರೆಯುತ್ತ ಬನ್ನಿಮಂಟಪ ಸಮೀಪ ಆಗಸದಲ್ಲಿ ಹಾರಾಟ ಕೈಗೊಂಡವು. ಸುಮಾರು ಐದು ನಿಮಿಷ ಕಾಲ ಕಸರತ್ತು ಪ್ರದರ್ಶನ ನಡೆಯಿತು. ಆದರೆ ಮೋಡ ಕವಿದ ವಾತಾವರಣದ ಕಾರಣಕ್ಕೆ ಸೂರ್ಯಕಿರಣ್ ತಂಡವು ಪ್ರದರ್ಶನ ಮೊಟಕುಗೊಳಿಸಿ ವಾಪಸ್ ಆಯಿತು.'ಪ್ರತಿಕೂಲ ಹವಾಮಾನದ ಕಾರಣಕ್ಕೆ ಇಂದಿನ ಪ್ರದರ್ಶನವನ್ನು ಸೀಮಿತ ಅವಧಿಗೆ ನಿಲ್ಲಿಸಲಾಗಿದೆ. ನಾಳೆ ವಾತಾವರಣ ತಿಳಿಯಾದಲ್ಲಿ ಎಂದಿನಂತೆ ಬೆಳಿಗ್ಗೆ 11ಕ್ಕೆ ಪ್ರದರ್ಶನ ನಡೆಯಲಿದೆ' ಎಂದು ಆಯೋಜಕರು ಘೋಷಿಸಿದರು.ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದು, ಕೆಲವೇ ನಿಮಿಷ ಕಾಲ ವಿಮಾನಗಳ ಹಾರಾಟ ಕಂಡು ನಿರಾಸೆಯಿಂದ ಹಿಂತಿರುಗಿದರು.
Read the complete story at Prajavani