ಮೋದಿಯನ್ನು ದೇವರೆಂದು ಬಿಂಬಿಸಲು ಬಿಜೆಪಿ ಪ್ರಯತ್ನ: ಪ್ರಶಾಂತ್ ಕಿಶೋರ್
ಪಟ್ನಾ: ಅಯೋಧ್ಯೆಯ ಶ್ರೀರಾಮ ಮಂದಿರದ ಬಗ್ಗೆ ಬಿಹಾರ ಮುಖ್ಯಮಂತ್ರಿ ಸ್ಮರಣ್ ಚೌಧರಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರೆಂದು ಬಿಂಬಿಸುವ ಪ್ರಯತ್ನ ಹಾಗೂ ಬಿಜೆಪಿಯವರ ʼದುರಂಹಕಾರʼವೇ ತುಂಬಿದೆ ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.ಬಿಹ್ತಲೇಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ

ಪಟ್ನಾ: ಅಯೋಧ್ಯೆಯ ಶ್ರೀರಾಮ ಮಂದಿರದ ಬಗ್ಗೆ ಬಿಹಾರ ಮುಖ್ಯಮಂತ್ರಿ ಸ್ಮರಣ್ ಚೌಧರಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರೆಂದು ಬಿಂಬಿಸುವ ಪ್ರಯತ್ನ ಹಾಗೂ ಬಿಜೆಪಿಯವರ ʼದುರಂಹಕಾರʼವೇ ತುಂಬಿದೆ ಎಂದು ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.ಬಿಹ್ತಲೇಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಶಾಂತ್, ಮುಖ್ಯಮಂತ್ರಿಯ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼಸಾಮ್ರಾಟ್ ಚೌಧರಿ ಅವರು ಇತ್ತೀಚೆಗೆ ಮಾತನಾಡುತ್ತಾ, ಶ್ರೀರಾಮ 400 ವರ್ಷಗಳಿಂದ ಟೆಂಟ್ನಲ್ಲಿ ನೆಲೆಸಿದ್ದ. ದೇಶದಾದ್ಯಂತ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಪ್ರಧಾನಿ ಮೋದಿ, ಶ್ರೀರಾಮನಿಗೂ ಒಂದು ನೆಲೆ ನೀಡಿದ್ದಾರೆ ಎಂದು ಇತ್ತೀಚೆಗೆ ಹೇಳಿದ್ದರು. ಇದು ದುರಂಹಕಾರವಲ್ಲದೆ ಇನ್ನೇನು?ʼ ಎಂದು ಕೇಳಿದ್ದಾರೆ.ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ (2001) ಮತ್ತು ದೇಶದ ಪ್ರಧಾನಿಯಾಗಿ ಒಟ್ಟು 25 ವರ್ಷಗಳ ಆಡಳಿತಾವಧಿ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಧರಿ ಮಾತನಾಡಿದ್ದರು.ʼಜನರ ಮೂಲಭೂತ ಅಗತ್ಯಗಳಾದ ಉದ್ಯೋಗ, ಶಿಕ್ಷಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಆದರೂ, ಶ್ರೀರಾಮನಿಗೂ ಮೋದಿಯಿಂದ ನೆಲೆ ದೊರೆಯಿತು ಎನ್ನುವ ಮೂಲಕ ಬಿಜೆಪಿಯು ಅವರನ್ನು (ಮೋದಿಯನ್ನು) ದೇವರನ್ನಾಗಿ ಮಾಡುವ ಸಾಹಸ ಮಾಡುತ್ತಿದೆ. ಈ ಪಕ್ಷವು ತನ್ನ ರ್ಯಾಲಿಯೊಂದರಲ್ಲಿ ಹನುಮಂತನ ವೇಷಧಾರಿಯಿಂದ ನೃತ್ಯ ಮಾಡಿಸಿತ್ತುʼ ಎಂದು ಪ್ರಶಾಂತ್ ಟೀಕಿಸಿದ್ದಾರೆ.ʼಬಾಂಕೀಪುರ ಉಪಚುನಾವಣೆಯ ಸಮಯದಲ್ಲೂ ಬಿಜೆಪಿ ಇಂತಹ ಅಹಂಕಾರ ಪ್ರದರ್ಶಿಸಿತ್ತು. ತಮ್ಮ ಪಕ್ಷ ಟಿಕೆಟ್ ನೀಡಿದರೆ ನಾಯಿ ಅಥವಾ ಬೆಕ್ಕು ಕೂಡ ಗೆಲ್ಲುತ್ತದೆ ಎಂದು ಗರ್ವದಿಂದ ಹೇಳಿತ್ತುʼ ಎಂದು ಸ್ಮರಿಸಿರುವ ಜನ ಸುರಾಜ್ ನಾಯಕ, ʼಈ ದುರಹಂಕಾರಕ್ಕೆ ಕಡಿವಾಣ ಹಾಕಬೇಕಿದೆ. ಅದಕ್ಕಾಗಿ, ಬಿಹಾರದಲ್ಲಿ ವಿಧಾನಪರಿಷತ್ನ ಎಂಟು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿʼ ಎಂದು ಕೋರಿದ್ದಾರೆ.ವಿಧಾನಪರಿಷತ್ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ ಮತ್ತು ಜೆಡಿಯು ತಲಾ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಪ್ರಶಾಂತ್ ಕಿಶೋರ್ ಪಕ್ಷ ಎಲ್ಲ ಕಡೆ ಸ್ಪರ್ಧೆಗೆ ಇಳಿದಿದೆ.ಬಿಜೆಪಿ ಕೋಟೆಯಲ್ಲಿ ಪ್ರಶಾಂತ್ಗೆ ಜಯಬಾಂಕೀಪುರ ಕ್ಷೇತ್ರದ ಶಾಸಕರಾಗಿದ್ದ ನಿತಿನ್ ನವೀನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಅವರು ಬಾಂಕೀಪುರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಉಪಚುನಾವಣೆ ನಡೆದಿತ್ತು. ದಶಕಗಳಿಂದ ಬಿಜೆಪಿ ಹಾಗೂ ನಿತಿನ್ ನವೀನ್ ಅವರ ಭದ್ರಕೋಟೆ ಎನಿಸಿದ್ದ ಇಲ್ಲಿ ಪ್ರಶಾಂತ್ ಕಿಶೋರ್ ಜಯ ಸಾಧಿಸಿದ್ದಾರೆ.ಮೋದಿ@25: ‘ಅಜೇಯ’ ನಾಯಕ ಎನಿಸಿದ ಪ್ರಧಾನಿ ಸವಾಲುಗಳನ್ನು ಮೆಟ್ಟಿ ನಿಲ್ಲುವರೇ?ಪ್ರಶಾಂತ್ಗೆ ಗೆಲುವು ಮಾತ್ರವಲ್ಲದೇ, ಬಾಂಕೀಪುರ ಅತ್ಯಂತ ಪ್ರಮುಖವೆನಿಸಿದ್ದೇಕೆ?ರಾಜಕೀಯ ತಂತ್ರಗಾರಿಕೆಯಿಂದ ಶಾಸಕತ್ವದವರೆಗೆ: ಪಿಕೆಯ ಜನ ಸುರಾಜ್ಗೆ ರಾಜಕೀಯ ನೆಲೆ BJP ಭದ್ರಕೋಟೆಯಲ್ಲಿ ಜಯ: ಬಿಹಾರ ರಾಜಕೀಯ ಚಿತ್ರಣ ಬದಲಿಸಲಿದೆಯೇ ಪ್ರಶಾಂತ್ ಗೆಲುವು?