ಸಿದ್ದರಾಮಯ್ಯ ಇಲ್ಲದೇ ಹೋಗಿದ್ರೆ ಕಾಂಗ್ರೆಸ್ ಯಾವತ್ತೋ ಮುಗಿದು ಹೋಗ್ತಿತ್ತು: ಹೆಚ್ಡಿಕೆ
2028ಕ್ಕೆ ನನ್ನ ಇನ್ನೊಂದು ಮುಖ ತೋರಿಸ್ತೀನಿ – ಹೆಚ್ಡಿಕೆ ಗುಡುಗು ಹಾಸನ: ಸಿದ್ದರಾಮಯ್ಯ (Siddaramaiah) ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ (Congress) ಯಾವತ್ತೋ ಮುಗಿದು ಹೋಗುತ್ತಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಹಾಸನದಲ್ಲಿ (Hassan) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ವಿರುದ್ಧ

2028ಕ್ಕೆ ನನ್ನ ಇನ್ನೊಂದು ಮುಖ ತೋರಿಸ್ತೀನಿ – ಹೆಚ್ಡಿಕೆ ಗುಡುಗು ಹಾಸನ: ಸಿದ್ದರಾಮಯ್ಯ (Siddaramaiah) ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ (Congress) ಯಾವತ್ತೋ ಮುಗಿದು ಹೋಗುತ್ತಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಹಾಸನದಲ್ಲಿ (Hassan) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಿದ್ದೇನೆ. ಆದರೆ ಈಗ ಅವರನ್ನು ಮುಗಿಸಲು ಏನೆಲ್ಲಾ ನಡೆದಿದೆ ಎಂದು ನೋಡುತ್ತಿದ್ದೀರಿ. ಸಿದ್ದರಾಮಯ್ಯ ಇಲ್ಲದೇ ಹೋಗಿದ್ದರೆ ಕಾಂಗ್ರೆಸ್ ಯಾವತ್ತೋ ಮುಗಿದು ಹೋಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ನನ್ನ ಆರೋಗ್ಯ ಚೆನ್ನಾಗಿದೆ.. ಗೃಹ ಸಚಿವರು ನನ್ನ ಹೃದಯದ ಕಾಳಜಿ ವಹಿಸೋದು ಬೇಡ: ಹೆಚ್ಡಿಕೆ ಟಾಂಗ್ ಪ್ರಿಯಾಂಕ್ ಖರ್ಗೆ ನಡೆಯಿಂದ ಹುನ್ನಾರದ ಶಂಕೆ ಸ್ಟಿಂಗ್ ಆಪರೇಷನ್ (Sting Operation) ವಿಚಾರವಾಗಿ ಡಿಜಿಪಿ ಭೇಟಿ ಮಾಡಿ ಮನವಿ ಕೊಡಲಾಗಿದೆ. ಗೃಹ ಸಚಿವರ ನಡೆ ನೋಡಿದ್ರೆ ಏನೋ ಹುನ್ನಾರ ನಡೆದಿದೆ ಎನ್ನಿಸುತ್ತಿದೆ. ನನ್ನನ್ನ ಉದ್ರೇಕಿಸಲು ಸಿಎಂರಿಂದ ನಿರ್ದೇಶನ ತೆಗೆದುಕೊಂಡು ಗೃಹ ಸಚಿವರು ಹೀಗೆ ಮಾತಾಡ್ತಾ ಇದ್ದಾರೆ. ನನ್ನನ್ನು ಉತ್ತರಕುಮಾರ ಅಂತಾರೆ. ಕೆಪಿಎಸ್ಸಿ ಹಗರಣದ ಬಗ್ಗೆ ಎಲ್ಲಾ ಮಾಹಿತಿ ಇಟ್ಟರೂ ಮಾಹಿತಿ ಎಲ್ಲಿದೆ ಅಂತಾರೆ. ಅವರಿಂದ ಈ ಬಗ್ಗೆ ಉತ್ತರವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ ಎಂದ ಮೇಲೆ ಇನ್ನೇನು ದಾಖಲೆ ಬೇಕು? ಪಕ್ಷದ ಕಾರ್ಯಕರ್ತೆಯೊಬ್ಬರನ್ನ ಕೂರಿಸಿಕೊಂಡು ಸಿದ್ದರಾಮಯ್ಯ ಹೆಸರು ಹೇಳು ಹೇಳು ಅಂತಾರೆ. ಸಿದ್ದರಾಮಯ್ಯ ಎಷ್ಟೋತ್ತಿದ್ದರು? ಅವರ ದೇಹದ ಏನಾದ್ರು ಗುರುತು ಇದೆಯಾ ಅಂತಾ ಕೇಳ್ತಾರೆ. ಆ ವ್ಯಕ್ತಿಯನ್ನ ಟಚ್ ಮಾಡೋಕೆ ಆಗ್ತಿಲ್ಲ. ಯಾಕೆ ಮಾಡೋಕೆ ಆಗ್ತಿಲ್ಲ? ಸಾಕಷ್ಟು ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಆಪರೇಷನ್ ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಹಲವು ರಾಜಕೀಯ ನಾಯಕರ ಸ್ಟಿಂಗ್ ಆಗಿದೆ ಎಂದು ರಾಜಣ್ಣ ಅವರೇ ಹೇಳಿದ್ದರು. ಅವರ ಬಾಯನ್ನೇ ಮುಚ್ಚಿಸಿದ್ದಾರೆ. ಈ ಸರ್ಕಾರ ಎಲ್ಲಿಗೆ ಹೋಗ್ತಿದೆ? ಸಿದ್ದರಾಮಯ್ಯ ಯಾಕೆ ಬಾಯಿ ಬಿಡುತ್ತಿಲ್ಲ ಎನ್ನೋದೇ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ. 2028ಕ್ಕೆ ನನ್ನ ಇನ್ನೊಂದು ಮುಖ ತೋರಿಸ್ತೀನಿ ಒಂದು ವರ್ಷ ಕಳೆಯಲಿ ಏನಾಗುತ್ತೆ ಎಂದು ಗೊತ್ತಾಗಲಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಏನೇನು ಮಾಡಿದ್ದಾರೆ. ಜನಾರ್ದನರೆಡ್ಡಿಯಿಂದ ನನ್ನ ಮೇಲೆ ಆರೋಪ ಮಾಡಿಸಿದ್ದರು. ಆಗಲೂ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ಮುಗಿಸಲು ಹೊರಟಿದ್ದೀರಾ? ಹಾಸನಾನಾಂಬೆ ದೇಗುಲ ಬಾಗಿಲು ಶೀಘ್ರವಾಗಿ ತೆರೆಯಲಿದೆ. ಇಲ್ಲಿ ಕುಳಿತು ಮಾತಾಡುತ್ತಿದ್ದೇನೆ. 2028ಕ್ಕೆ ಸಮ್ಮಿಶ್ತ ಸರ್ಕಾರ ಬರೋದು ಶತ ಸಿದ್ದ. ಆಗ ಕುಮಾರಸ್ವಾಮಿಯ ಇನ್ನೊಂದು ಮುಖ ತೋರಿಸ್ತಿನಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸ್ಟಿಂಗ್ ರೂವಾರಿಗಳ ಬಂಧನಕ್ಕೆ ಆಗ್ರಹ – ಡಿಜಿಪಿ ಸಲೀಂಗೆ ದೂರು ನೀಡಿದ ಹೆಚ್ಡಿಕೆ