ನವರಾತ್ರಿ ಸಂಭ್ರಮದಲ್ಲಿದ್ದ ಗುಂಪಿನೊಳಗೆ ನುಗ್ಗಿದ ಟ್ರಕ್: 15 ಮಂದಿ ಸಾವು
15 killed as truck mows down devotees outside Gwalior temple; CM orders probe, action against 9 copsಗ್ವಾಲಿಯರ್: ದೇವಾಲಯದ ಹೊರಗೆ ನವರಾತ್ರಿ ಸಂಭ್ರಮದಲ್ಲಿದ್ದ ಗುಂಪಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡದ ಪರಿಣಾಮ 15 ಮಂದಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.ಈ ದುರ್ಘಟನೆಯಲ್ಲಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ

15 killed as truck mows down devotees outside Gwalior temple; CM orders probe, action against 9 copsಗ್ವಾಲಿಯರ್: ದೇವಾಲಯದ ಹೊರಗೆ ನವರಾತ್ರಿ ಸಂಭ್ರಮದಲ್ಲಿದ್ದ ಗುಂಪಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡದ ಪರಿಣಾಮ 15 ಮಂದಿ ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.ಈ ದುರ್ಘಟನೆಯಲ್ಲಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದೂ ಪೊಲೀಸರು ತಿಳಿಸಿದ್ಧಾರೆ.ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ಭತ್ತ ತುಂಬಿಕೊಂಡು ಬರುತ್ತಿದ್ದ ಟ್ರಕ್, ಪ್ರವೇಶ ನಿರ್ಬಂಧಿತ ವಲಯವಾದ ಚಿನಾರ್ ರಸ್ತೆಯನ್ನು ಪ್ರವೇಶಿಸಿತ್ತು. ಅಲ್ಲಿ ದೇವಾಲಯದ ಹೊರಗೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ಹಾಗೂ ರಸ್ತೆ ಬದಿಯ ಅಂಗಡಿಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ, ಶೀತಲಾ ಮಾತಾ ಮಂದಿರದ ಪ್ರವೇಶ ದ್ವಾರಕ್ಕೂ ನುಗ್ಗಿದೆ ಎಂದು ಅವರು ಹೇಳಿದ್ದಾರೆ.ಪರಿಣಾಮ, ದೇವಾಲಯದ ಒಂದು ಗೋಡೆ ಕುಸಿದು ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಟ್ರಕ್ ಚಾಲಕ ನಾಪತ್ತೆಯಾಗಿದ್ದು, ಅವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಪಂಜಾಬ್ ನೋಂದಣಿಯ ಟ್ರಕ್ ಈ ಅಪಘಾತ ಎಸಗಿದ್ದು, ಅದರ ಬ್ರೇಕ್ ಫೇಲ್ ಆಗಿತ್ತು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಟ್ರಕ್ ಅನ್ನು ನಿಯಂತ್ರಿಸಲು ಎಡಬದಿಗೆ ತಿರುಗಿಸಿದಾಗ ಈ ಅವಘಡ ಸಂಭವಿಸಿದೆ. ಇಲ್ಲವಾದರೆ, ಟ್ರಕ್ ಮುಂದಕ್ಕೆ ಚಲಿಸಿ 600–700 ಜನರ ಗುಂಪಿನೊಳಗೆ ನುಗ್ಗುವ ಮೂಲಕ ದೊಡ್ಡ ಅಪಘಾತದ ಸಾಧ್ಯತೆ ಇತ್ತು ಎಂದು ಅವರು ಹೇಳಿದ್ದಾರೆ. ಘಟನೆ ಕುರಿತಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರ ಘೋಷಿಸಿದ್ದಾರೆ.ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಹ ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ, ಈ ದುರ್ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ಧಾರೆ.