ನೆಲಮಂಗಲ | ಅನುಮಾನಾಸ್ಪದ ರೀತಿಯಲ್ಲಿ ಮಂಗಳಮುಖಿ ಸಾವು
ನೆಲಮಂಗಲ: ಅನುಮಾನ್ಪದ ರೀತಿಯಲ್ಲಿ ಮಂಗಳಮುಖಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬಾಡಿಗೆ ಮನೆಯ ರೂಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಬೆತ್ತಲೆಯಾಗಿ ಶವ ಪತ್ತೆಯಾಗಿದೆ. ಕುಳ್ಳಯ್ಯ @ ಬೆಳ್ಳಿ (40) ಮಂಗಳಮುಖಿ ಸಾವಿಗೀಡಾಗಿದ್ದು, ಅವರ ಪೋನ್ ನಾಪತ್ತೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಮೂಲತಃ ಮಂಡ್ಯ ಜಿಲ್ಲೆಯ ಹಲಗೂರು ಗ್ರಾಮದ ನಿವಾಸಿಯಾಗಿದ್ದರು. ಕಳೆದ ಐದಾರ

ನೆಲಮಂಗಲ: ಅನುಮಾನ್ಪದ ರೀತಿಯಲ್ಲಿ ಮಂಗಳಮುಖಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬಾಡಿಗೆ ಮನೆಯ ರೂಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಬೆತ್ತಲೆಯಾಗಿ ಶವ ಪತ್ತೆಯಾಗಿದೆ. ಕುಳ್ಳಯ್ಯ @ ಬೆಳ್ಳಿ (40) ಮಂಗಳಮುಖಿ ಸಾವಿಗೀಡಾಗಿದ್ದು, ಅವರ ಪೋನ್ ನಾಪತ್ತೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಮೂಲತಃ ಮಂಡ್ಯ ಜಿಲ್ಲೆಯ ಹಲಗೂರು ಗ್ರಾಮದ ನಿವಾಸಿಯಾಗಿದ್ದರು. ಕಳೆದ ಐದಾರು ವರ್ಷಗಳಿಂದ ಮಂಗಳಮುಖಿಯರ ಜೊತೆಗೆ ವಾಸವಿದ್ದರು. ನೆಲಮಂಗಲ ನಗರದ ಟಿಬಿ ಬಸ್ ನಿಲ್ದಾಣದ ವಿಜಯನಗರ ಬಾಡಿಗೆ ಮನೆಯಲ್ಲಿ ಇದ್ದರು. ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕಷ್ಟು ಅನುಮಾನ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
Read the complete story at Public TV Kannada