ದುರ್ಗಾ ಪೂಜೆ ಪೆಂಡಾಲ್ ದುರಂತ – 7 ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
ಕೋಲ್ಕತ್ತಾ: ಚೋರ್ಬಾಗನ್ನ (Chorbagan) ದುರ್ಗಾ ಪೂಜಾ (Durga Puja) ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತ (Stampede) ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು ಆಯೋಜಕರು ಸೇರಿದಂತೆ ಏಳು ಮಂದಿಯನ್ನು ಬಂದಿಸಿದ್ದಾರೆ. ಬಂಧಿತ ಎಲ್ಲಾ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ (Court) 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತರಲ್ಲಿ ಆಯೋಜಕ ಸಮಿ

ಕೋಲ್ಕತ್ತಾ: ಚೋರ್ಬಾಗನ್ನ (Chorbagan) ದುರ್ಗಾ ಪೂಜಾ (Durga Puja) ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತ (Stampede) ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳ ಪೊಲೀಸರು ಆಯೋಜಕರು ಸೇರಿದಂತೆ ಏಳು ಮಂದಿಯನ್ನು ಬಂದಿಸಿದ್ದಾರೆ. ಬಂಧಿತ ಎಲ್ಲಾ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ (Court) 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಬಂಧಿತರಲ್ಲಿ ಆಯೋಜಕ ಸಮಿತಿಯ ಸದಸ್ಯ ‘ಚೋರ್ಬಗಾನ್ ಸರ್ವಜನೀನ್ ದುರ್ಗೋತ್ಸವ ಸಮಿತಿ’ಯ ಕಾರ್ಯದರ್ಶಿ ರಾಜ್ ಕುಮಾರ್ ಮತ್ತು ಉಪಾಧ್ಯಕ್ಷ ಶಾಂತನು ದುಬೆ, ಪೆಂಡಾಲ್ ರಚನೆಯನ್ನು ನಿರ್ಮಿಸಿದ ಬಿಪ್ಲಬ್ ಮುಖರ್ಜಿ, ಜನಸಂದಣಿಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿದ್ದ ಕೌಶಿಕ್ ಸಹಾ ಮತ್ತು ಪಿಂಟು ಡೇ ಹಾಗೂ ಖಾಸಗಿ ಭದ್ರತೆಯ ಉಸ್ತುವಾರಿ ವಹಿಸಿದ್ದ ಸುಮನ್ ಚಕ್ರವರ್ತಿ ಮತ್ತು ರಾಜೇಶ್ ಪಾಲ್ ಸೇರಿದ್ದಾರೆ. ಇದನ್ನೂ ಓದಿ: Kolkata Stampede | ದುರ್ಗಾ ಪೆಂಡಾಲ್ ಆಯೋಜಕರು ಸೇರಿದಂತೆ 7 ಮಂದಿ ಅರೆಸ್ಟ್ ಶನಿವಾರ (ಅ.17) ಸಂಜೆ ಸುಮಾರು 7:40ರ ಸುಮಾರಿಗೆ ಭಾರೀ ಮಳೆಯ ನಡುವೆ ಈ ನೂಕುನುಗ್ಗಲು ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ‘ಕೊಲೆಗೆ ಸಮನಲ್ಲದ ನರಹತ್ಯೆ’ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಇಂದು (ಅ.18) ಏಳು ಮಂದಿಯನ್ನು ಬ್ಯಾಂಕ್ಶಾಲ್ನಲ್ಲಿರುವ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (Chief Judicial Magistrate) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವ್ಯಕ್ತಿಗಳ ನಿರ್ಲಕ್ಷ್ಯದ ಕ್ರಮಗಳಿಂದಾಗಿ 19 ಜೀವಗಳು ಬಲಿಯಾಗಿವೆ. ಇದರಿಂದ ಅನೇಕ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ವಿವರಿಸಿ, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆರೋಪಿಗಳ ಪರವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರು ವಾಸ್ತವವಾಗಿ ರಕ್ಷಣಾ ಕಾರ್ಯಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ ಅವರನ್ನು ಬಂಧಿಸಲಾಗಿದೆ. ತಮ್ಮ ಕಕ್ಷಿದಾರರಿಗೆ ಕಾರ್ಯಕ್ರಮದ ಆಯೋಜಕರೊಂದಿಗೆ ಯಾವುದೇ ಸಂಬಂಧವಿಲ್ಲ. ಕೇವಲ ಪೂಜೆಯನ್ನು ವೀಕ್ಷಿಸಲು ಅಲ್ಲಿಗೆ ಹೋಗಿದ್ದವರನ್ನು ಬಂಧಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದುರ್ಗಾಪೂಜೆ ವೇಳೆ ದುರಂತ | ಮನೇಲಿ ಮದ್ವೆ ತಯಾರಿ ನಡೀತಿತ್ತು, ಕಣ್ಣೆದುರೇ ಅಮ್ಮನನ್ನ ಕಳೆದುಕೊಂಡೆ – ಗೋಳಾಡಿದ ಯುವತಿ