ತೇರದಾಳದಲ್ಲಿ ಹಾಡಹಗಲೇ ಪಡಿತರ ಅಕ್ಕಿ ಖರೀದಿ ದಂಧೆ – ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ
ಬಾಗಲಕೋಟೆ: ಬಡವರಿಗಾಗಿ ಸರ್ಕಾರ ವಿತರಿಸುವ ಅನ್ನಭಾಗ್ಯದ(Anna Bhagya) ಪಡಿತರ ಅಕ್ಕಿ ಅಕ್ರಮ ದಂಧೆಕೋರರ ಪಾಲಾಗುತ್ತಿದ್ದು, ಬಾಗಲಕೋಟೆ(Bagalkote) ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಹಾಡಹಗಲೇ ಅಕ್ರಮವಾಗಿ ಅಕ್ಕಿ(Rice) ಖರೀದಿಸುವ ಜಾಲ ಸಕ್ರಿಯವಾಗಿದೆ. ಪಟ್ಟಣದ ಪ್ರತಿಯೊಂದು ಬೀದಿ-ಬೀದಿಗಳಲ್ಲಿ ಬೈಕ್ನಲ್ಲಿ ಸಂಚರಿಸುವ ದಂಧೆಕೋರರು, “ಅಕ್ಕಿ ಅದಾವೇನ್ರಿ… ಅಕ್ಕಿ…” ಎಂದ

ಬಾಗಲಕೋಟೆ: ಬಡವರಿಗಾಗಿ ಸರ್ಕಾರ ವಿತರಿಸುವ ಅನ್ನಭಾಗ್ಯದ(Anna Bhagya) ಪಡಿತರ ಅಕ್ಕಿ ಅಕ್ರಮ ದಂಧೆಕೋರರ ಪಾಲಾಗುತ್ತಿದ್ದು, ಬಾಗಲಕೋಟೆ(Bagalkote) ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಹಾಡಹಗಲೇ ಅಕ್ರಮವಾಗಿ ಅಕ್ಕಿ(Rice) ಖರೀದಿಸುವ ಜಾಲ ಸಕ್ರಿಯವಾಗಿದೆ. ಪಟ್ಟಣದ ಪ್ರತಿಯೊಂದು ಬೀದಿ-ಬೀದಿಗಳಲ್ಲಿ ಬೈಕ್ನಲ್ಲಿ ಸಂಚರಿಸುವ ದಂಧೆಕೋರರು, “ಅಕ್ಕಿ ಅದಾವೇನ್ರಿ… ಅಕ್ಕಿ…” ಎಂದು ಬಹಿರಂಗವಾಗಿಯೇ ಕೂಗುತ್ತಾ ಜನರ ಬಳಿ ಇರುವ ಪಡಿತರ ಅಕ್ಕಿಯನ್ನು ಅಗ್ಗದ ದರಕ್ಕೆ ಖರೀದಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಈ ಕಳ್ಳದಂಧೆಗೆ ಅಪ್ರಾಪ್ತ ಬಾಲಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಈ ಅಕ್ರಮ ಕೃತ್ಯದ ದೃಶ್ಯಗಳು ಸ್ಥಳೀಯವಾಗಿ ಸಾಕ್ಷಿಯೊಂದಿಗೆ ಸೆರೆಯಾಗಿವೆ. ಹೀಗೆ ಸಂಗ್ರಹವಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟೆಲ್ಲಾ ಬಹಿರಂಗವಾಗಿ ನಡೆಯುತ್ತಿದ್ದರೂ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ದಂಧೆಕೋರರಿಂದ ತಿಂಗಳ ಮಾಮೂಲಿ ಪಡೆಯುತ್ತಿರುವುದರಿಂದಲೇ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರಾ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಪಡಿತರ ಅಕ್ಕಿ ಅಕ್ರಮ ದಂಧೆಗೆ ಶಾಶ್ವತವಾಗಿ ಕಡಿವಾಣ ಹಾಕಬೇಕೆಂದು ಸ್ಥಳೀಯರು ಬಲವಾಗಿ ಆಗ್ರಹಿಸಿದ್ದಾರೆ.