ದುಬಾರಿ ಮೌಲ್ಯದ ಲಂಗಾ ದಾವಣಿಯಲ್ಲಿ ಮಿಂಚಿದ ನಟಿ ಕಂಗನಾ ರನೌತ್
ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರನೌತ್ ನವರಾತ್ರಿ ಸಂಭ್ರಮದಲ್ಲಿದ್ದಾರೆ. ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿರುವ ನಟಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ.ನಟಿ ಕಂಗನಾ ರನೌತ್ಪ್ರಸಿದ್ಧ ಡಿಸೈನರ್ ಬ್ರ್ಯಾಂಡ್ ‘ತೊರಾಣಿ’ ವಿನ್ಯಾಸಗೊಳಿಸಿದ ಸುರ್ಖ್ ರಕ್ತಿಕಾ ಮಂಚಿತ್ರ ಎಂಬ ಹೆಸರಿನ ಕೆಂಪು ಹಾಗೂ ನೇರಳೆ ಬಣ್ಣ ಮಿಶ್ರಿತ

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರನೌತ್ ನವರಾತ್ರಿ ಸಂಭ್ರಮದಲ್ಲಿದ್ದಾರೆ. ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿರುವ ನಟಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆದಿವೆ.ನಟಿ ಕಂಗನಾ ರನೌತ್ಪ್ರಸಿದ್ಧ ಡಿಸೈನರ್ ಬ್ರ್ಯಾಂಡ್ ‘ತೊರಾಣಿ’ ವಿನ್ಯಾಸಗೊಳಿಸಿದ ಸುರ್ಖ್ ರಕ್ತಿಕಾ ಮಂಚಿತ್ರ ಎಂಬ ಹೆಸರಿನ ಕೆಂಪು ಹಾಗೂ ನೇರಳೆ ಬಣ್ಣ ಮಿಶ್ರಿತ ಆಕರ್ಷಕ ಲಂಗಾ ದಾವಣಿಯನ್ನು ಕಂಗನಾ ಧರಿಸಿದ್ದಾರೆ. ನಟಿಗೆ ರಾಯಲ್ ಲುಕ್ ನೀಡುತ್ತಿರುವ ಈ ಉಡುಪಿನ ಅಂದಾಜು ಮೌಲ್ಯ ಸುಮಾರು ₹2.1 ಲಕ್ಷ ಆಗಿದೆ.ನಟಿ ಕಂಗನಾ ರನೌತ್ಸಿಂಧೂ ಕಣಿವೆ ನಾಗರಿಕತೆ ಹಾಗೂ ಅಲೆಮಾರಿ ಸಂಸ್ಕೃತಿಯಿಂದ ಪ್ರೇರಿತಗೊಂಡು ಈ ಉಡುಪನ್ನು ವಿನ್ಯಾಸಗೊಳಿಸಲಾಗಿದೆ. ಕಡು ಕೆಂಪು ಬಣ್ಣದ ಲಂಗಾದ ಮೇಲೆ ವಿವಿಧ ವಿನ್ಯಾಸದ ಪ್ರಿಂಟ್ಗಳು ಹಾಗೂ ವಿಶೇಷವಾದ ಕುಚ್ಚುಗಳಿಂದ ಅಲಂಕರಿಸಲಾಗಿದೆ. ಭುಜದ ಮೇಲೆ ಅದಕ್ಕೆ ಹೊಂದುವ ಮುದ್ರಿತ ದುಪಟ್ಟಾವನ್ನು ಧರಿಸಿದ್ದರು. ನಟಿ ಕಂಗನಾ ರನೌತ್ಹಬ್ಬದ ಸಾಂಪ್ರದಾಯಿಕ ಸೌಂದರ್ಯಕ್ಕೆ ಮೆರುಗು ನೀಡಲು ಕಂಗನಾ ಅವರು ದೊಡ್ಡ ನೆಕ್ಲೇಸ್, ದೊಡ್ಡ ಗಾತ್ರದ ಬಳೆಗಳು, ಉಂಗುರ ಹಾಗೂ ಬಿಂದಿ ಧರಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. View this post on Instagram