ಪ್ರಥಮ ಸ್ತ್ರೀ ಸ್ವಾತಂತ್ರ್ಯ, ಅನುಭವ ಮಂಟಪದ ಶಿವಶರಣೆಯರು
12ನೇ ಶತಮಾನದಲ್ಲಿ ಹಿಂದಿನ ಅನಿಷ್ಟ ಪದ್ಧತಿಗಳಿಂದ ಜರ್ಜರಿತರಾದ ಸ್ತ್ರೀಗೆ,ಕೇವಲ ಮನೆಯೊಳಗೆ ಮಾತ್ರ ಮೀಸಲಿದ್ದ ಸ್ತ್ರೀ ಸ್ವಾತಂತ್ರ.ಮಹಾಮನೆಯ ಅನುಭವ ಮಂಟಪದಲ್ಲಿ ಅನುಭಾವ ಗೋಷ್ಠಿಯವರೆಗಿನ ಮರೆಯಲಾಗದ ಮಹಾ ಯುಗದ ಸವಿನೆನಪು, ಕಾಯಕದಲ್ಲಿ ಶ್ರದ್ಧೆ, ಲಿಂಗದಲ್ಲಿ ನಿಷ್ಠೆ, ದಾಸೋಹ ಭಾವನೆ, ವಚನ ರಚನೆ, ಅಲ್ಲದೆ ಮುಕ್ತಿಗೂ ಸ್ತ್ರೀ ಅರ್ಹಳಾದ ಅಲ್ಲದೆ ಅದನ್ನು ಸಾಧಿಸಿದ ಶಿವ ಶರ

12ನೇ ಶತಮಾನದಲ್ಲಿ ಹಿಂದಿನ ಅನಿಷ್ಟ ಪದ್ಧತಿಗಳಿಂದ ಜರ್ಜರಿತರಾದ ಸ್ತ್ರೀಗೆ,ಕೇವಲ ಮನೆಯೊಳಗೆ ಮಾತ್ರ ಮೀಸಲಿದ್ದ ಸ್ತ್ರೀ ಸ್ವಾತಂತ್ರ.ಮಹಾಮನೆಯ ಅನುಭವ ಮಂಟಪದಲ್ಲಿ ಅನುಭಾವ ಗೋಷ್ಠಿಯವರೆಗಿನ ಮರೆಯಲಾಗದ ಮಹಾ ಯುಗದ ಸವಿನೆನಪು, ಕಾಯಕದಲ್ಲಿ ಶ್ರದ್ಧೆ, ಲಿಂಗದಲ್ಲಿ ನಿಷ್ಠೆ, ದಾಸೋಹ ಭಾವನೆ, ವಚನ ರಚನೆ, ಅಲ್ಲದೆ ಮುಕ್ತಿಗೂ ಸ್ತ್ರೀ ಅರ್ಹಳಾದ ಅಲ್ಲದೆ ಅದನ್ನು ಸಾಧಿಸಿದ ಶಿವ ಶರಣೆಯಾದ ಮಹಾಯುಗ ಬಸವಣ್ಣನವರ ಯುಗ.12ನೇ ಶತಮಾನದ ಕಲ್ಯಾಣ ಚಾಲುಕ್ಯರು ಮತ್ತು ಕಳಚುರಿಗಳ ಕಾಲ ಮುಖ್ಯವಾಗಿ ಬಸವಣ್ಣನವರ ನೇತೃತ್ವದ ವಚನ ಚಳವಳಿಯ ಕಾಲ ಕನ್ನಡ ನಾಡಿನ ಇತಿಹಾಸದಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸುವರ್ಣ ಯುಗ ಎನ್ನಬಹುದು. ಅಂದಿನ ಸಮಾಜದಲ್ಲಿದ್ದ ಲಿಂಗ ತಾರತಮ್ಯ, ಮೂಢನಂಬಿಕೆ ಮತ್ತು ಪುರುಷ ಪ್ರಧಾನ ವ್ಯವಸ್ಥೆಯನ್ನು ವಿರೋಧಿಸಿ, ಮಹಿಳೆಯರಿಗೆ ಧಾರ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೆಗ್ಗಳಿಕೆ ವಚನ ಚಳವಳಿಗೆ ಸಲ್ಲುತ್ತದೆ.* ಅನುಭವ ಮಂಟಪದಲ್ಲಿ ಸಮಾನ ಅವಕಾಶಬಸವಣ್ಣನವರು ಸ್ಥಾಪಿಸಿದ 'ಅನುಭವ ಮಂಟಪ' ಜಗತ್ತಿನ ಮೊದಲ ಸಂಸತ್ತು ಎನ್ನಬಹುದು. ಇಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರಿಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳಲ್ಲಿ ಭಾಗವಹಿಸುವ ಹಕ್ಕಿತ್ತು. ಜಾತಿ, ವರ್ಗ ಮತ್ತು ಲಿಂಗದ ಬೇಧವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. * ವೈಚಾರಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗದೆ, ತಮ್ಮ ಆಲೋಚನೆಗಳನ್ನು ವಚನಗಳ ಮೂಲಕ ಮುಕ್ತವಾಗಿ ಅಭಿವ್ಯಕ್ತಪಡಿಸಿದರು. ಅಕ್ಕಮಹಾದೇವಿ, ಅಲ್ಲಮಪ್ರಭು ಮತ್ತು ಬಸವಣ್ಣನವರಂತಹ ಘಟಾನುಘಟಿಗಳ ಜೊತೆ ಆಧ್ಯಾತ್ಮಿಕ ಸಂವಾದ ನಡೆಸಿ ತನ್ನ ವೈಚಾರಿಕ ಉನ್ನತಿಯನ್ನು ಸಾಬೀತುಪಡಿಸಿದಳು.* ಕಾಯಕ ಮತ್ತು ಸ್ವಾವಲಂಬನೆ"ಕಾಯಕವೇ ಕೈಲಾಸ" ಎಂಬ ತತ್ವ ಸ್ತ್ರೀಯರಿಗೂ ಅನ್ವಯಿಸುತ್ತಿತ್ತು. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿದ್ದರು.ಆಯ್ದಕ್ಕಿ ಲಕ್ಕಮ್ಮ: ಭತ್ತ ನೆಲ್ಲುವ ಕಾಯಕ ಮಾಡುತ್ತಿದ್ದಳು.ಸೊಮ್ಮವ್ವೆ: ನೂಲುವ ಕಾಯಕ ಮಾಡುತ್ತಿದ್ದಳು.ಮೊಳಿಗೆ ಮಹಾದೇವಿ: ಕಟ್ಟಿಗೆ ಮಾರುವ ಕಾಯಕದಲ್ಲಿ ಪತಿಗೆ ಹೆಗಲಾಗಿ ನಿಂತಿದ್ದಳು.* ಧಾರ್ಮಿಕ ಹಕ್ಕು (ಲಿಂಗದೀಕ್ಷೆ)ಅಲ್ಲಿಯವರೆಗೆ ಮಹಿಳೆಯರಿಗೆ ವೇದೋಪನಿಷತ್ತುಗಳ ಅಧ್ಯಯನ ಅಥವಾ ಧಾರ್ಮಿಕ ಆಚರಣೆಗಳಲ್ಲಿ ಕಟ್ಟುಪಾಡುಗಳಿದ್ದವು. ಆದರೆ ಶರಣ ಚಳವಳಿಯು ಮಹಿಳೆಯರಿಗೆ 'ಲಿಂಗದೀಕ್ಷೆ' ನೀಡುವ ಮೂಲಕ ಪುರುಷರಷ್ಟೇ ಸಮಾನವಾದ ಧಾರ್ಮಿಕ ಹಕ್ಕನ್ನು ನೀಡಿತು. ಮುಟ್ಟು ಅಥವಾ ಸೂತಕದ ನೆಪದಲ್ಲಿ ಹೆಣ್ಣನ್ನು ಅಪವಿತ್ರ ಎಂದು ದೂರವಿಡುವುದನ್ನು ವಚನಕಾರರು ತೀವ್ರವಾಗಿ ವಿರೋಧಿಸಿದರು.* ವಿವಾಹ ಮತ್ತು ದಾಂಪತ್ಯದಲ್ಲಿ ಸ್ವಾತಂತ್ರ್ಯದಾಂಪತ್ಯದಲ್ಲಿ ಹೆಣ್ಣು ಗಂಡಿಗೆ ಅಧೀನಳಲ್ಲ, ಅವಳು ಸಮಾನ ಪಾಲುದಾರೆ ಎಂಬುದನ್ನು ವಚನಕಾರ್ತಿಯರು ತೋರ್ಪಡಿಸಿದರು.ಆಯ್ದಕ್ಕಿ ಲಕ್ಕಮ್ಮ ತನ್ನ ಪತಿ ಆಯ್ದಕ್ಕಿ ಮಾರಯ್ಯ ತಪ್ಪು ಮಾಡಿದಾಗ ಮುಖಾಮುಖಿಯಾಗಿ ಖಂಡಿಸಿ, ಸನ್ಮಾರ್ಗ ತೋರಿದಳು.ಇಷ್ಟವಿಲ್ಲದ ಲೌಕಿಕ ವಿವಾಹವನ್ನು ನಿರಾಕರಿಸಿ, ತನ್ನಿಷ್ಟದಂತೆ ಚೆನ್ನಮಲ್ಲಿಕಾರ್ಜುನನನ್ನು ಒಲಿದು ಅಕ್ಕಮಹಾದೇವಿ ಸಾಮಾಜಿಕ ಚೌಕಟ್ಟುಗಳನ್ನು ಮುರಿದು ಹೊರಬಂದಳು.ವಿಶ್ವದ ಇತಿಹಾಸದಲ್ಲಿ ಮೊಟ್ಟ ಮೊದಲ ಸ್ತ್ರೀ ಸ್ವಾತಂತ್ರ್ಯದ, ಅಚ್ಚಳಿಯದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಮಹಾ ಶಿವಶರಣೆಯರು,ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಮುಕ್ತಿಯ ಹಾದಿಯಲ್ಲಿ "ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು" ಎಂಬ ಶರಣ ವಚನದಂತೆ. ಕಾಯಕ ನಿರತರಾಗಿ ಶಿವಯೋಗದಿಂದ ಸರ್ವ ಸಮಾನತೆ ಜ್ಞಾನಕ್ಕೆ ತಮ್ಮ ಅಂತಃಕರಣ ದೊಂದಿಗೆ ದಾಸೋಹ ತತ್ವವನ್ನು ಅನುಸರಿಸಿ ವಚನ ರಚನೆ ಹಾಗೂ ಅನುಭಾವ ಗೋಷ್ಠಿಯಲ್ಲಿ ತಮ್ಮ ವ್ಯಯಕ್ತಿಕ ಸಾಧನೆಯನ್ನು ಮುಕ್ತವಾಗಿ ಹಂಚಿಕೊಂಡದ್ದು ನಿಜಕ್ಕೂ ೧೨ನೇಯ ಶತಮಾನದ ಮಹಾ ಕ್ರಾಂತಿ ಎಂದರೆ ಅತಿಶಯೋಕ್ತಿಯಲ್ಲಾ. ಇಲ್ಲಿ ಆಶ್ಚರ್ಯ ಸಂಗತಿಯೆಂದರೆ ಇಲ್ಲಿನ ಸ್ತ್ರೀಯರಿಗೆ ಲಿಂಗವನ್ನು ಧರಿಸಿ, ಶಿವಶರಣೆಯರನ್ನಾಗಿಸಿ ಅಷ್ಟಾವರಣ, ಪಂಚಾಚಾರ, ಶಟಸ್ಥಲವನ್ನು ಅರಿತು ಆಚರಿಸಲು ಮುಕ್ತ ಅವಕಾಶವನ್ನು ಬಸವಣ್ಣವರು ಮಾಡಿಕೊಟ್ಟದ್ದು, ಇಲ್ಲಿ ಹೆಣ್ಣು ಮಾಯೆಯಲ್ಲಾ ಮಹಾಶಕ್ತಿ, ಅಲ್ಲದೆ ಮುಕ್ತಿಯನ್ನು ಹೊಂದಲು ಅವರಿಗೆ ಎಲ್ಲಾ ರೀತಿಯಲ್ಲೂ ಹರ್ಹರುಎಂಬುದನ್ನು ವಿಶ್ವಕ್ಕೆ ಅರಿತು ಆಚರಿಸಿ ಸಾಧಿಸಿ ತೋರಿದ ಬಸವಾದಿ ಶರಣರ ಯುಗ, ಇಂದಿನ ಪೀಳಿಗೆಗೆ ಮುಖ್ಯ ಸ್ತ್ರೀ ಸ್ವಾತಂತ್ರದ ಅಡಿಪಾಯವನ್ನು ೯೦೦ ವರ್ಷಗಳ ಹಿಂದೆಯೇ ಹಾಕಿಕೊಟ್ಟದ್ದು ಅಲ್ಲಿನ ಯುಗಪುರುಷ ಬಸವಣ್ಣನವರ ಘನತೆಯನ್ನು ಹಿಮ್ಮಡಿಗೊಳಿಸಿತು. ಅದರಂತೆ ನಾವಿಂದು ಎಲ್ಲಾ ಕ್ಷೇತ್ರದಲ್ಲೂ ಸ್ತ್ರೀ ಸ್ವಾತಂತ್ರವನ್ನು ನೋಡುತ್ತಿದ್ದೇವೆ.ಪ್ರತಿಯೊಂದು ಕಾಯಕದಲ್ಲೂ ಮೇಲು ಕೀಳೆಂಬ ಭಾವನೆಯನ್ನು ತೊರೆದು, ಎಲ್ಲಾ ಕಾಯಕದಲ್ಲೂ ಶ್ರದ್ಧೆಯನ್ನಿಟ್ಟು ಪತಿಗೆ ಲೌಕಿಕ ಆಡಂಬರದ ಬಗ್ಗೆ ಕಿಂಚಿತ್ತು ಮೋಹವನ್ನು ತೋರದೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿಯನ್ನು ಹಸನುಗೊಳಿಸಿದ ಕೀರ್ತಿ ಶಿವಶರಣೆಯರಿಗೆ ಸಲ್ಲುತ್ತದೆ.ವೈರಾಗ್ಯದ ನಿಧಿ ಅಕ್ಕಮಹಾದೇವಿಯಿಂದ ಇಡಿದು ಶರಣೆ ಸೂಳೆ ಸಂಕವ್ವೆಯರ ವರೆಗೂ ಭಕ್ತಿಯ ಘನ ವೈಭವವನ್ನು ಮುಕ್ತಿಯ ಪಥವನ್ನು ನಾವೆಲ್ಲರೂ ಸ್ಮರಿಸಲೇಬೇಕು.ಮೇಲ್ಕಂಡ ಚಿತ್ರದಲ್ಲಿನ ಶಿವಶರಣೆಯರ ಹೆಸರುಗಳು ಕಾಯಕದೊಂದಿಗೆ ಈ ಕೆಳಕಂಡಂತಿವೆ.*ಶಿವಶರಣೆ ಮುಕ್ತಾಯಕ್ಕ*ಶಿವಶರಣೆ ಬಸವಣ್ಣನವರ ಅಕ್ಕ,ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ*ಶಿವಶರಣೆ ವೈರಾಗ್ಯ ನಿಧಿ ಅಕ್ಕಮಹಾದೇವಿ*ಶಿವಶರಣೆ ಆಯ್ದಕ್ಕಿ ಲಕ್ಕಮ್ಮ*ಶಿವಶರಣೆ ಕಲ್ಯಾಣಮ್ಮ*ಶಿವಶರಣೆ ಹಡಪದ ಲಿಂಗಮ್ಮ*ಶಿವಶರಣೆ ಕೊಟ್ಟದ ಸುಮೌವ್ವ*ಶಿವಶರಣೆ ಮೋಳಿಗೆ ಮಹಾದೇವಿ*ಶಿವಶರಣೆ ಸತ್ಯಕ್ಕ*ಶಿವಶರಣೆ ಬಸವಣ್ಣನವರ, ಧರ್ಮಪತ್ನಿ ನೀಲಾಂಬಿಕೆ*ಶಿವಶರಣೆ ಹೂಗಾರ ಮಾದೇವಿ*ಶಿವಶರಣೆ ಅಮುಗೆ ರಾಯಮ್ಮ*ಸ್ತ್ರೀ ಸಮಾನತೆಯ ಅಕ್ಕ ನಾಗಲಾಂಬಿಕೆ ತಾಯಿ ಲಿಂಗ ದೀಕ್ಷೆಯನ್ನು ನೀಡುತ್ತಿರುವುದು.ಡಾ. ಎಂ.ಎಂ. ಕಲಬುರ್ಗಿಯವರು ಸಂಪಾದಿಸಿರುವ 'ಸಮಗ್ರ ವಚನ ಸಂಪುಟ'ಗಳ ಆಧಾರದ ಪ್ರಕಾರ, ೩೩ ಪ್ರಸಿದ್ಧ ಶಿವಶರಣೆಯರು ವಚನಗಳನ್ನು ರಚಿಸಿದ್ದಾರೆ. ಇದಲ್ಲದೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಕೆಲವು ಅಪ್ರಸಿದ್ಧ ಅಥವಾ 'ಗೌಪ್ಯ ವಚನಕಾರ್ತಿಯರು' ಸೇರಿ ಈ ಸಂಖ್ಯೆ ೩೬ಕ್ಕೂ ಹೆಚ್ಚು ಎಂದು ಗುರುತಿಸಲಾಗಿದೆ.೧೨ನೇ ಶತಮಾನದ ಶಿವಶರಣರ ಚಳುವಳಿಯಲ್ಲಿ ಸುಮಾರು ೩೦ ರಿಂದ ೩೫ಕ್ಕೂ ಹೆಚ್ಚು ಮಹಿಳಾ ವಚನಕಾರ್ತಿಯರು ಸಕ್ರಿಯವಾಗಿ ಪಾಲ್ಗೊಂಡು ವಚನಗಳನ್ನು ರಚಿಸಿದ್ದಾರೆ. ಇವರಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ನೀಲಾಂಬಿಕೆ, ಮತ್ತು ಅಮುಗೆ ರಾಯಮ್ಮ ಪ್ರಮುಖರಾಗಿದ್ದಾರೆ.ಪ್ರಮುಖ ವಚನಕಾರ್ತಿಯರು ಮತ್ತು ಅವರ ವಚನಗಳ ವಿವರ:• ಅಕ್ಕಮಹಾದೇವಿ: ವಚನಕಾರ್ತಿಯರಲ್ಲೇ ಅತಿ ಹೆಚ್ಚು ವಚನಗಳನ್ನು ರಚಿಸಿದವರು ಅಕ್ಕಮಹಾದೇವಿ. ಇವರ ಸುಮಾರು ೩೫೦ ರಿಂದ ೪೩೦ಕ್ಕೂ ಹೆಚ್ಚು ವಚನಗಳು ಲಭ್ಯವಿವೆ (ಅಂಕಿತನಾಮ: ಚನ್ನಮಲ್ಲಿಕಾರ್ಜುನ).• ಇತರ ಶರಣೆಯರು: ಉಳಿದ ೩೦ಕ್ಕೂ ಹೆಚ್ಚು ವಚನಕಾರ್ತಿಯರು (ಗೌಪ್ಯ ವಚನಕಾರ್ತಿಯರು ಸೇರಿದಂತೆ) ಒಟ್ಟಾಗಿ ಉಳಿದ ವಚನಗಳನ್ನು ರಚಿಸಿದ್ದಾರೆ.ಒಟ್ಟಾರೆಯಾಗಿ, ಕರ್ನಾಟಕ ಸರ್ಕಾರ ಪ್ರಕಟಿಸಿರುವ 'ಸಮಗ್ರ ವಚನ ಸಂಪುಟ' ಹಾಗೂ ಡಾ. ಎಂ.ಎಂ. ಕಲಬುರ್ಗಿಯವರ ಸಂಶೋಧನೆಗಳ ಪ್ರಕಾರ, ಶರಣೆಯರ ಒಟ್ಟು ವಚನಗಳ ಸಂಖ್ಯೆ ಸಾವಿರದ ಗಡಿಯನ್ನು ದಾಟುತ್ತದೆ.೧೨ನೇ ಶತಮಾನದ ಸ್ತ್ರೀ ಸ್ವಾತಂತ್ರ್ಯವು ಕೇವಲ ಬಾಯಿಮಾತಿನ ಸೌಲಭ್ಯವಾಗಿರಲಿಲ್ಲ. ಅದು ಮಹಿಳೆಯರಿಗೆ ಆತ್ಮಗೌರವ, ಆರ್ಥಿಕ ಸ್ವಾವಲಂಬನೆ ಮತ್ತು ಸಮಾನ ಸಾಮಾಜಿಕ ಸ್ಥಾನಮಾನವನ್ನು ನೀಡಿದ ನೈಜ ಕ್ರಾಂತಿಯಾಗಿತ್ತು. ಇಂದಿನ ಆಧುನಿಕ ಜಗತ್ತಿನ ಸ್ತ್ರೀವಾದಿ ಚಿಂತನೆಗಳಿಗೆ ೧೨ನೇ ಶತಮಾನದ ಶರಣರ ಆಲೋಚನೆಗಳೇ ಭದ್ರ ಬುನಾದಿಯಾಗಿವೆ.