ಜಂಬೂಸವಾರಿ ಮೆರವಣಿಗೆ ತಾಲೀಮು: ಅಧಿಕಾರಿಗಳಿಂದ ಪುಷ್ಪಾರ್ಚನೆ
ಮೈಸೂರು: ದಸರಾ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಜಂಬೂಸವಾರಿ ಮೆರವಣಿಗೆಯ ತಾಲೀಮು’ ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ, ಅ.21ರಂದು ಜರುಗಲಿರುವ ಮೆರವಣಿಗೆಗೆ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಅಂಬಾರಿ ಆನೆ ಪ್ರಶಾಂತ, ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ, ಅಶ್ವರೋಹಿ ದಳದ ಕುದುರೆಗಳು, ಪ

ಮೈಸೂರು: ದಸರಾ ಅಂಗವಾಗಿ ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ‘ಜಂಬೂಸವಾರಿ ಮೆರವಣಿಗೆಯ ತಾಲೀಮು’ ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ, ಅ.21ರಂದು ಜರುಗಲಿರುವ ಮೆರವಣಿಗೆಗೆ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಅಂಬಾರಿ ಆನೆ ಪ್ರಶಾಂತ, ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ, ಅಶ್ವರೋಹಿ ದಳದ ಕುದುರೆಗಳು, ಪೊಲೀಸ್ ಬ್ಯಾಂಡ್ ಪಾಲ್ಗೊಂಡಿದ್ದವು. ನಿಶಾನೆ ಆನೆ ಅಭಿಮನ್ಯು ಮುಂದೆ ಸಾಗಿದರೆ, ನೌಫತ್ ಆನೆ ಗೋಪಿ ಹಿಂದೆ ಆಗಮಿಸಿತು. ನಂತರ ಸಾಲಾನೆಗಳಾಗಿ ಮಹೇಂದ್ರ, ಲಕ್ಷ್ಮೀ, ಶ್ರೀರಾಮ, ಚೈತ್ರಾ, ಸುಗ್ರೀವ, ಧನಂಜಯ, ಶ್ರೀಕಂಠ ಮತ್ತು ಏಕಲವ್ಯ ಆನೆಗಳು ಪಾಲ್ಗೊಂಡವು.ಕುದುರೆಗಳು ಖಾಸ್ ಅರಮನೆ ಕಡೆಯಿಂದ ಆಗಮಿಸಿ ನಿಲ್ಲುತ್ತಿ ದ್ದಂತೆ ಅಂಬಾರಿ ಆನೆ ಪ್ರಶಾಂತ, ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಆನೆಗಳೊಂದಿಗೆ ಅರಮನೆ ಮುಂಭಾಗದ ವೇದಿಕೆಯ ಎದುರು ಆಗಮಿಸಿತು. ಮುಖ್ಯ ಅರಣ್ಯಾಧಿಕಾರಿ ಎಸ್. ರವಿಶಂಕರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಡಾ. ಹರ್ಷಾ ಪ್ರಿಯಂವದಾ, ಕೆ.ಎಸ್. ಸುಂದರ್ ರಾಜ್, ಮಾರುತಿ ಪುಷ್ಪಾರ್ಚನೆ ಮಾಡಿದರು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿತು. ಅದೇ ಸಮಯಕ್ಕೆ ಅರಮನೆಯ ಹೊರ ಆವರಣದಲ್ಲಿ 7 ಫಿರಂಗಿಗಳನ್ನು ಬಳಸಿ ಒಟ್ಟು 21 ಕುಶಾಲತೋಪುಗಳನ್ನು ಫಿರಂಗಿದಳದ ಸಿಬ್ಬಂದಿ ಸಿಡಿಸಿದರು.ನಂತರ ಕುದುರೆಗಳು ಮುಂದೆ ಸಾಗುತ್ತಿದ್ದಂತೆ ಅಂಬಾರಿ ಆನೆ ಕುಮ್ಕಿ ಆನೆಗಳೊಂದಿಗೆ ಸಾಗಿ ಬಂತು. ಬಲರಾಮ ದ್ವಾರದ ಬಳಿ ತಾಲೀಮು ಅಂತ್ಯವಾಯಿತು.ಜಂಬೂಸವಾರಿ ಸಿದ್ಧತೆ: ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಜಂಬೂಸವಾರಿಯಂದು ಪುಷ್ಪಾರ್ಚನೆ ವೇಳೆ ಕುದುರೆಗಳು ಎಲ್ಲೆಲ್ಲಿ ನಿಲ್ಲಬೇಕು, ಆನೆಗಳು ಬರುವಾಗ ಪುಷ್ಪಾರ್ಚನೆ ಹೇಗೆ ಮಾಡಬೇಕು ಎಂಬುದರ ಕುರಿತು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ಬಂದೋಬಸ್ತ್ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಡಿಸಿಪಿಗಳೊಂದಿಗೆ ಚರ್ಚಿಸಿದರು.261019-39-100585604