‘ಒರಿಜಿನಲ್ ಮಾನ್ಸ್ಟರ್’ ಚಿತ್ರಕ್ಕೆ ವಸಿಷ್ಠ ಸಿಂಹ ಸೇರ್ಪಡೆ
ಆರ್. ಚಂದ್ರು ನಿರ್ದೇಶನದಲ್ಲಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್ಸ್ಟರ್’ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ. ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ಮಾಣ ಸಂಸ್ಥೆ ‘ಆರ್ಸಿ ಸ್ಟುಡಿಯೋಸ್’, ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ.‘ಕಬ

ಆರ್. ಚಂದ್ರು ನಿರ್ದೇಶನದಲ್ಲಿ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್ಸ್ಟರ್’ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ. ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ಮಾಣ ಸಂಸ್ಥೆ ‘ಆರ್ಸಿ ಸ್ಟುಡಿಯೋಸ್’, ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ.‘ಕಬ್ಜ’ ಚಿತ್ರದ ಯಶಸ್ಸಿನ ನಂತರ ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ‘ಆರ್ಸಿ ಸ್ಟುಡಿಯೋಸ್’ ಲಾಂಛನದಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿರುವ ಈ ಸಿನಿಮಾ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಒರಿಜಿನಲ್ ಮಾನ್ಸ್ಟರ್;ಕನ್ನಡದಲ್ಲಿ ಶಿವರಾಜ್ಕುಮಾರ್, ತೆಲುಗಿನಲ್ಲಿ ಸುನಿಲ್ ನಾಯಕವಿಜಯ್ಗೆ ಸಿಎಂ ಆಗುವ ಮುನ್ಸೂಚನೆ ಮೊದಲೇ ಇತ್ತಾ? ಕಾರಿನ ಈ ನಂಬರ್ ಪ್ಲೇಟ್ ನೋಡಿ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೇ ತಿಂಗಳ 25ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ. ಈ ಹಂತದಲ್ಲಿ ಶಿವರಾಜಕುಮಾರ್, ತೆಲುಗು ನಟ ಸುನೀಲ್ ಹಾಗೂ ವಸಿಷ್ಠ ಸಿಂಹ ಭಾಗವಹಿಸಲಿದ್ದಾರೆ.ಈ ಹಿಂದೆ ಶಿವಣ್ಣ ಹಾಗೂ ವಸಿಷ್ಠ ಸಿಂಹ ಸಂಯೋಜನೆಯಲ್ಲಿ ಮೂಡಿಬಂದಿದ್ದ ‘ಮಫ್ತಿ’, ‘ಟಗರು’ ಹಾಗೂ ‘ಕವಚ’ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿದ್ದವು. ಇದೀಗ ‘ಒಎಂ’ ಚಿತ್ರದಲ್ಲೂ ಇವರಿಬ್ಬರು ಒಂದಾಗುತ್ತಿದ್ದು, ವಸಿಷ್ಠ ಸಿಂಹ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.‘ಆರ್. ಚಂದ್ರು ಅವರ ನಿರ್ದೇಶನದಲ್ಲಿ ಅಭಿನಯಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಈಗ ಆ ಅವಕಾಶ ಸಿಕ್ಕಿದೆ. ಚಂದ್ರು ಅವರ ಜೊತೆ ಕೆಲಸ ಮಾಡುತ್ತಿರುವುದು ಹಾಗೂ ಶಿವಣ್ಣ ಅವರೊಂದಿಗೆ ಮತ್ತೆ ನಟಿಸುತ್ತಿರುವುದು ಬಹಳ ಖುಷಿಕೊಟ್ಟಿದೆ’ ಎಂದು ನಟ ವಸಿಷ್ಠ ಸಿಂಹ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಎ.ಜೆ. ಶೆಟ್ಟಿ ಛಾಯಾಗ್ರಹಣವಿದೆ. ವಿವಿಧ ಭಾಷೆಗಳ ಪ್ರಸಿದ್ಧ ನಟ-ನಟಿಯರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಅವರ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ನಿರ್ದೇಶಕ ಆರ್. ಚಂದ್ರು ತಿಳಿಸಿದ್ದಾರೆ.