ʼಟೈಗರ್ ಶ್ರಾಫ್ʼ ಹೆಸರಿನ ಹಿಂದಿದೆ ಸ್ವಾರಸ್ಯಕರ ಘಟನೆ: ನಟ ಹೇಳಿದ್ದೇನು?
ಮುಂಬೈನಲ್ಲಿ ನಿನ್ನೆ ರಾತ್ರಿ (ಅ.18) ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದ ಬಾಲಿವುಡ್ ನಟ ಟೈಗರ್ ಶ್ರಾಫ್ ಗಾಯಗೊಂಡಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ನಟ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಸರ್ಕಾರದ ವೈಫಲ್ಯ ಬ

ಮುಂಬೈನಲ್ಲಿ ನಿನ್ನೆ ರಾತ್ರಿ (ಅ.18) ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದ ಬಾಲಿವುಡ್ ನಟ ಟೈಗರ್ ಶ್ರಾಫ್ ಗಾಯಗೊಂಡಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ನಟ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಸರ್ಕಾರದ ವೈಫಲ್ಯ ಬೊಟ್ಟು ಮಾಡಿದ ರಾವುತ್ಆ್ಯಕ್ಷನ್ ದೃಶ್ಯಗಳು, ಸಮರ ಕಲೆ ಹಾಗೂ ನೃತ್ಯಕ್ಕೆ ಹೆಸರುವಾಸಿಯಾಗಿರುವ ನಟ ಟೈಗರ್ ಶ್ರಾಫ್ ಅವರು 2014ರಲ್ಲಿ ಕೃತಿ ಸನೂನ್ ಅವರೊಂದಿಗೆ ʼಹೀರೋಪಂತಿʼ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.ಟೈಗರ್ ಶ್ರಾಫ್ ಅವರ ನಿಜವಾದ ಹೆಸರೇನು?ಟೈಗರ್ ಶ್ರಾಫ್ ಅವರ ಬಾಲ್ಯದ ಹೆಸರು ಜೈ ಹೇಮಂತ್ ಶ್ರಾಫ್ ಎಂದಿತ್ತು. ಇವರು 1990ರ ಮಾರ್ಚ್ 2ರಂದು ನಟ ಜಾಕಿ ಶ್ರಾಫ್ ಮತ್ತು ಆಯೇಷಾ ಶ್ರಾಫ್ ದಂಪತಿಗೆ ಜನಿಸಿದರು. ಬಾಲ್ಯದಲ್ಲಿದ್ದಾಗ ಕಚ್ಚುತ್ತಿದ್ದೆ ಎನ್ನುವ ಕಾರಣಕ್ಕೆ 'ಟೈಗರ್ ಶ್ರಾಫ್' ಎನ್ನುವ ಹೆಸರು ಬಂತು ಎಂದು ಸ್ವತಃ ಟೈಗರ್ ಶ್ರಾಫ್ ಅವರೇ ಈ ಹಿಂದೆ ಹೇಳಿಕೊಂಡಿದ್ದರು.ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ: ರಾಜಸ್ಥಾನದ ಕೋಟಾದಲ್ಲಿ ಮೂವರು ಶೂಟರ್ಗಳ ಬಂಧನಈ ಕುರಿತು ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ʼನಾನು ಚಿಕ್ಕವನಿದ್ದಾಗ ಎಲ್ಲರನ್ನೂ ಕಚ್ಚುತ್ತಿದ್ದೆ. ಇದು ಅಭ್ಯಾಸವಾಗಿ ಶಾಲೆಯಲ್ಲಿ ನನ್ನ ಶಿಕ್ಷಕನನ್ನೂ ಕಚ್ಚಿದೆ. ಅದಕ್ಕಾಗಿ ಶಿಕ್ಷೆಯನ್ನೂ ಅನುಭವಿಸಿದ್ದೆʼ ಎಂದು ನೆನಪಿಸಿಕೊಂಡಿದ್ದರು.ತಮ್ಮ ಹೆಸರು ಬದಲಾಯಿಸಿಕೊಂಡಿದ್ದು ಹೇಗೆ ಎಂಬುದನ್ನು ವಿವರಿಸುತ್ತಾ, ʼನನ್ನ ಮೂಲ ಹೆಸರು ಜೈ ಹೇಮಂತ್. ನನ್ನ ತಂದೆಯ ಹೆಸರು ಜೈ ಕಿಶನ್. ಸಿನಿಮಾದಿಂದಾಗಿ ಅವರಿಗೆ ಜಾಕಿ ಎಂಬ ಹೆಸರು ಬಳುವಳಿಯಾಗಿ ಬಂತು. ನನ್ನ ಚಿಕ್ಕಪ್ಪನ ಹೆಸರು ಹೇಮಂತ್. ಈ ಎರಡೂ ಹೆಸರುಗಳನ್ನು ಸೇರಿಸಿ, ಜೈ ಹೇಮಂತ್ ಶ್ರಾಫ್ ಎಂದು ನಾಮಕರಣ ಮಾಡಲಾಗಿತ್ತು. ಸಿನಿಮಾಗೆ ಬಂದ ಮೇಲೆ ನನ್ನ ಹೆಸರನ್ನು ಟೈಗರ್ ಶ್ರಾಫ್ ಎಂದೇ ಬದಲಾಯಿಸಿಕೊಂಡೆʼ ಎಂದು ಹೇಳಿಕೊಂಡಿದ್ದರು.