ಉಡುಪಿ ಉಚ್ಚಿಲಕ್ಕೆ ಜನ ಸಾಗರ: ಭಕ್ತಿಭಾವ ಚಿಮ್ಮಿಸಿದ ಕುಣಿತ ಭಜನೆ
ಪಡುಬಿದ್ರಿ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ 8ನೇ ದಿನವಾದ ಭಾನುವಾರ ಭಾನುವಾರ ಭಕ್ತರು ತಂಡೋಪತಂಡವಾಗಿ ಬಂದು ದೇವಿಯ ದರ್ಶನ ಪಡೆದರು.ದಸರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ದೇವಸ್ಥಾನದ ಆವರಣದ ಅಲಂಕಾರ ಹಾಗೂ ವಸ್ತುಪ್ರದರ್ಶನ ವೀಕ್ಷಿಸಿ ಖುಷಿಪಟ್ಟರು.ಭಾನುವಾರ ಮಹಾಗೌರಿ ದೇವಿ

ಪಡುಬಿದ್ರಿ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ 8ನೇ ದಿನವಾದ ಭಾನುವಾರ ಭಾನುವಾರ ಭಕ್ತರು ತಂಡೋಪತಂಡವಾಗಿ ಬಂದು ದೇವಿಯ ದರ್ಶನ ಪಡೆದರು.ದಸರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಿಸಿದವು. ದೇವಸ್ಥಾನದ ಆವರಣದ ಅಲಂಕಾರ ಹಾಗೂ ವಸ್ತುಪ್ರದರ್ಶನ ವೀಕ್ಷಿಸಿ ಖುಷಿಪಟ್ಟರು.ಭಾನುವಾರ ಮಹಾಗೌರಿ ದೇವಿಯ ಆರಾಧನೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ ರಾಘವೇಂದ್ರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಉದಯಪೂಜೆ, ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ ಹಾಗೂ ಮಹಾಪೂಜೆ ನೆರವೇರಿತು. ರಾತ್ರಿ ನವದುರ್ಗೆಯರಿಗೆ ಮಹಾಪೂಜೆ ಹಾಗೂ ಸರಸ್ವತಿ ಕಲ್ಪೋಕ್ತ ಪೂಜೆ ನಡೆಯಿತು. ದಸರಾ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ಭಜನಾ ಸಂಕೀರ್ತನೆ, ಸಂಜೆ ಧಾರ್ಮಿಕ ಪ್ರವಚನ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.ಕುಣಿತ ಭಜನೆ: ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಜನಾ ತಂಡಗಳು ಭಾಗವಹಿಸಿದ್ದು ರಥಬೀದಿಯ ಸುತ್ತ ಸಾಮೂಹಿಕ ಕುಣಿತ ಭಜನೆಯಲ್ಲಿ ಪಾಲ್ಗೊಂಡರು.ದಸರಾ ರೂವಾರಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ಉದ್ಘಾಟಿಸಿದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ ಹಾಗೂ ಪ್ರಮುಖರಾದ ವಾಸುದೇವ ಸಾಲ್ಯಾನ್, ಗುಂಡು ಅಮೀನ್ ಇದ್ದರು.ಇಂದಿನ ಕಾರ್ಯಕ್ರಮ: 9ನೇ ದಿನವಾದ ಸೋಮವಾರ ಸಿದ್ಧಿಧಾತ್ರಿ ದೇವಿಯ ಆರಾಧನೆ ನಡೆಯಲಿದ್ದು ಉದಯಪೂಜೆ, ಬೆಳಿಗ್ಗೆ 9ಕ್ಕೆ ಚಂಡಿಕಾ ಹೋಮ, 12ಕ್ಕೆ ನವದುರ್ಗೆಯರಿಗೆ ಮಹಾಮಂಗಳಾರತಿ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30ರಿಂದ ಪ್ರಸಾದ ವಿತರಣೆ, 7.30ಕ್ಕೆ ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, 8.30ಕ್ಕೆ ವಾಗೀಶ್ವರಿ ಕಲ್ಪೋಕ್ತ ಪೂಜೆ ನೆರವೇರಲಿದೆ. ದಸರಾ ಮುಖ್ಯ ವೇದಿಕೆಯಲ್ಲಿ 9.30ರಿಂದ ಭಜನಾ ಸಂಕೀರ್ತನೆ, 12.30ರಿಂದ ಭಕ್ತಿಗಾನ ಸುಧೆ, 2.30ರಿಂದ ಭಜನಾ ಸಂಕೀರ್ತನೆ, 4ರಿಂದ ಕೊಳಲು ವಾದನ, 5ರಿಂದ ಧಾರ್ಮಿಕ ಪ್ರವಚನ, 5.45ರಿಂದ ಸಾಮೂಹಿಕ ಕುಂಕುಮಾರ್ಚನೆ, 6.30ರಿಂದ ನೃತ್ಯ ಕಾರ್ಯಕ್ರಮ, 8ರಿಂದ ಮ್ಯೂಸಿಕಲ್ ನೈಟ್ ನಡೆಯಲಿದೆ.ಮುದ ನೀಡಿದ ಪಿಲಿಪಂಥಪಡುಬಿದ್ರಿ: ಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಮೊದಲ ಬಾರಿ ಪುರುಷರ ಹುಲಿವೇಷ ಸ್ಪರ್ಧೆಗೆ ಅವಕಾಶ ನೀಡಿದ್ದು ಇಲ್ಲಿನ ಸಂಸ್ಕೃತಿ ಉಳಿಸಿ ಬೆಳೆಸಲು ಇದು ನೆರವಾಗಬೇಕು ಎಂದು ಜಿ ಶಂಕರ್ ಹೇಳಿದರು.ಉಡುಪಿ ಉಚ್ಚಿಲ ದಸರಾ ಅಂಗವಾಗಿ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಪಿಲಿಪಂಥ ಉದ್ಘಾಟಿಸಿ ಅವರು ಮಾತನಾಡಿದರು. ಮಹಾಜನ ಸಂಘ ಅಧ್ಯಕ್ಷ ಜಯ ಸಿ ಕೋಟ್ಯಾನ್, ಸಮಿತಿಗಳ ವಿನಯ್ ಕರ್ಕೇರ, ಸಂಧ್ಯಾದೀಪ ಸುನಿಲ್, ಸುಗುಣ ಕರ್ಕೇರ, ನಟಿ ಚಿರಶ್ರೀ ಅಂಚನ್, ಸಂಘಟಕ ವಿಶ್ವಾಸ್ ಅಮೀನ್, ಕಿರಣ್ಕುಮಾರ್, ರಚನ್ ಸಾಲ್ಯಾನ್ ಪಾಲ್ಗೊಂಡಿದ್ದರು.ಮುಂಬೈ ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮೊಗವೀರ ಮಾಸ ಪತ್ರಿಕೆಯ ವತಿಯಿಂದ ಮೊಗವೀರ ಕನ್ನಡ ಮಾಸಿಕದ 87ನೇ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ದಸರಾ ಕವಿಗೋಷ್ಠಿಯನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಉದ್ಘಾಟಿಸಿದರು.ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಅಧ್ಯಕ್ಷ ಅಜಿತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಶ್ರೀ ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ರಚಿಸಿದ ಭಕ್ತಿ ಭಾವ ಬದುಕು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ, ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಯಜ್ಞೇಶ್ ಕರ್ಕೇರ ಮಿತ್ರಪಟ್ಣ, ದಿನೇಶ್ ಎರ್ಮಾಳು, ಮುಂಬಯಿ ಸಮಿತಿಯ ಪದಾಧಿಕಾರಿಗಳಾದ ರಾಜೇಶ್ ಪುತ್ರನ್, ಪ್ರೀತಿ ಎಚ್.ಶ್ರೀಯಾನ್, ಪ್ರಮೋದ್ ಪುತ್ರನ್, ದಯಾವತಿ ಸುವರ್ಣ, ಜಿ.ಕೆ.ರಮೇಶ್, ಭರತ್ ಕುಮಾರ್ ಎರ್ಮಾಳು, ಲಕ್ಷö್ಮಣ ಕುಂದರ್, ದೇವರಾಜ್ ಬಂಗೇರ ಇದ್ದರು.ಕವಿಗೋಷ್ಠಿಯಲ್ಲಿ ಕಾವ್ಯದ ಲಹರಿಕವಿ ಹಾಗೂ ಪತ್ರಕರ್ತ ಯಶವಂತ್ ಭೋಳೂರು ಅಧ್ಯಕ್ಷತೆ ವಹಿಸಿದ್ದ ಗೋಷ್ಠಿಯಲ್ಲಿ ಗುರುಪ್ರಸಾದ್ ಪಡುಬಿದ್ರಿ, ರಮೇಶ್ ಉಳಾಯ ಪುತ್ತೂರು, ರವಿ ಕೊಟ್ಟಾರಗಸ್ತಿ ಬೆಳಗಾವಿ, ಪ್ರಸಾದ್ ಕುಮಾರ್ ಮೊಗಬೆಟ್ಟು, ದೀಪಕ್ ಎನ್.ದುರ್ಗಾ ಕಾರ್ಕಳ, ವಸಂತಿ ಅಂಬಲಪಾಡಿ, ಚಂದ್ರಹಾಸ ಕಣಂತೂರು ಉಳ್ಳಾಲ, ವಿಂದ್ಯಾ ಎಸ್.ರೈ ಬಂಟ್ವಾಳ, ಸತೀಶ್ ಅಮೀನ್ ಪಡುಕರೆ, ಐಕಳ ಕೃಷ್ಣಾನಂದ ಶೆಟ್ಟಿ ಕಿನ್ನಿಗೊಳಿ, ಪ್ರೇಮಾ ಆರ್.ಶೆಟ್ಟಿ ಮೂಲ್ಕಿ, ಶುಭಲಕ್ಷಿö್ಮÃ ನಾಯಕ್ ಪಲಿಮಾರು, ಶಂಕರ್ ಪಡಂಗ ಮೂಲ್ಕಿ, ಅಶೋಕ್ ತೆಕ್ಕಟ್ಟೆ ಕವನ ವಾಚಿಸಿದರು. ಸಂಶೋಧಕ ವಿ.ಕೆ ಯಾದವ್ ನಿರ್ವಹಿಸಿದರು.261019-28-50122482