ಪ್ರಧಾನಿ ರಾಜೀನಾಮೆಗೆ ಪಟ್ಟು; ಅಲ್ಬೇನಿಯಾದಲ್ಲಿ 6ನೇ ದಿನವೂ ಮುಂದುವರಿದ ಪ್ರತಿಭಟನೆ
ತಿರಾನಾ (ಅಲ್ಬೇನಿಯಾ): ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಧಾನಿ ಇದಿ ರಾಮಾ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರತ್ತ ಜಲಫಿರಂಗಿ ಮತ್ತು ಅಶ್ರುವಾಯು ಶೆಲ್ ಸಿಡಿಸಿದ್ದಾರೆ.ವಿಶ್ವವಿದ್ಯಾಲಯಗಳಲ್ಲಿನ ಕಳಪೆ ವ್ಯವಸ್ಥೆ, ದುಬಾರಿ ಬೋಧನಾ ಶುಲ್ಕ, ವ್ಯಾಪಕ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ

ತಿರಾನಾ (ಅಲ್ಬೇನಿಯಾ): ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಧಾನಿ ಇದಿ ರಾಮಾ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರತ್ತ ಜಲಫಿರಂಗಿ ಮತ್ತು ಅಶ್ರುವಾಯು ಶೆಲ್ ಸಿಡಿಸಿದ್ದಾರೆ.ವಿಶ್ವವಿದ್ಯಾಲಯಗಳಲ್ಲಿನ ಕಳಪೆ ವ್ಯವಸ್ಥೆ, ದುಬಾರಿ ಬೋಧನಾ ಶುಲ್ಕ, ವ್ಯಾಪಕ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಟಿರಾನಾದಲ್ಲಿ ಮಂಗಳವಾರದಿಂದಲೇ (ಅಕ್ಟೋಬರ್ 13) ತೀವ್ರಗೊಂಡಿದೆ.ಪೊಲೀಸರೊಂದಿಗೆ ಘರ್ಷಣೆ ನಡೆಸಿರುವ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಸಚಿವಾಲಯದ ಎದುರು ಜಮಾಯಿಸಿ, ‘ರಾಮಾ ರಾಜೀನಾಮೆ ನೀಡಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.ಪೊಲೀಸರು, ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಆದರೆ, ನಗರದ ವಿವಿಧ ಭಾಗಗಳಿಗೆ ಹೋರಾಟ ವ್ಯಾಪಿಸಿದ್ದು, ಹಿಂಸಾಚಾರಕ್ಕೆ ತಿರುಗಿದೆ.ಆಡಳಿತಾರೂಢ ಸೋಶಿಯಲಿಷ್ಟ್ ಪಾರ್ಟಿ ಆಫ್ ಅಲ್ಬೇನಿಯಾದ ಪ್ರಧಾನ ಕಚೇರಿ ಕಿಟಕಿಗಳಿಗೆ ಕಲ್ಲು ತೂರಿರುವ ಪ್ರತಿಭಟನಾಕಾರರು, ರಸ್ತೆ ಬದಿಯ ಕಸದ ತೊಟ್ಟಿಗಳು, ಪೊಲೀಸ್ ಠಾಣೆ ಮತ್ತು ಆಂತರಿಕ ಸಚಿವಾಲಯದ ಪ್ರವೇಶದ್ವಾರಕ್ಕೆ ಬೆಂಕಿ ಹಚ್ಚಿದ್ದಾರೆ.ಘರ್ಷಣೆ ಹೆಚ್ಚಾದಂತೆ ಪ್ರತಿಭಟನಾಕಾರರು ಸಿಕ್ಕಸಿಕ್ಕ ವಸ್ತುಗಳನ್ನು ಭದ್ರತಾ ಸಿಬ್ಬಂದಿಯತ್ತ ಎಸೆದಿದ್ದಾರೆ. ಪೊಲೀಸರು ರಬ್ಬರ್ ಗುಂಡುಗಳು, ಅಶ್ರುವಾಯು ಶೆಲ್ ಪ್ರಯೋಗಿಸಿದ್ದಾರೆ.ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿವೆ.ಈವರೆಗೆ 16 ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ 14 ಮಂದಿ ಪೊಲೀಸ್ ಠಾಣೆ ಮೇಲಿನ ದಾಳಿ ವೇಳೆ ಪೆಟ್ಟು ತಿಂದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. Albania: fifth day of student-led protests; Reuters says 500 detained and about 120 police injured as clashes continue in TiranaThousands of young Albanians gathered outside the Education Ministry in Tirana on Oct. 17, the fifth day of a student-led movement demanding… pic.twitter.com/DgoTo9PZ6J— The Informant (@theinformant_x) October 17, 2026