ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್ – ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯನ ಭವಿಷ್ಯ
ಹಿಂಗಾರು ಮಳೆ ಉತ್ತಮ, ಸಾಧು ಸಂತರು ದೇಶದ ಚುಕ್ಕಾಣಿ ಹಿಡಿಯುವ ಮುನ್ಸೂಚನೆ ಹಾವೇರಿ: ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ (Devaragudda Karnika) ನವರಾತ್ರಿ ಪ್ರಯುಕ್ತ ಮಾಲತೇಶ ದೇವರ (Malatesha Swami) ಕಾರ್ಣಿಕೋತ್ಸವ ನಡೆಯಿತು. ಈ ಬಾರಿ ಗೊರವಯ್ಯ ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ನುಡಿದಿದ್ದಾರೆ. ಪ್ರತಿವರ್ಷವೂ ನವರಾತ್ರ

ಹಿಂಗಾರು ಮಳೆ ಉತ್ತಮ, ಸಾಧು ಸಂತರು ದೇಶದ ಚುಕ್ಕಾಣಿ ಹಿಡಿಯುವ ಮುನ್ಸೂಚನೆ ಹಾವೇರಿ: ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ (Devaragudda Karnika) ನವರಾತ್ರಿ ಪ್ರಯುಕ್ತ ಮಾಲತೇಶ ದೇವರ (Malatesha Swami) ಕಾರ್ಣಿಕೋತ್ಸವ ನಡೆಯಿತು. ಈ ಬಾರಿ ಗೊರವಯ್ಯ ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ದೈವವಾಣಿ ನುಡಿದಿದ್ದಾರೆ. ಪ್ರತಿವರ್ಷವೂ ನವರಾತ್ರಿ ಹಬ್ಬದಲ್ಲಿ ಐತಿಹಾಸಿಕ ಮಾಲತೇಶ ಕಾರ್ಣಿಕೋತ್ಸವ ನಡೆಯುತ್ತದೆ. ಈ ಬಾರಿ ದೇವರಗುಡ್ಡದ ಕರಿಯಾಲ್ ಕಟ್ಟಿಯಲ್ಲಿ ನಾಗಪ್ಪ ಅಜ್ಜ ಉರ್ಮಿ ನುಡಿದ ಕಾರ್ಣಿಕ ನುಡಿ ಭಕ್ತರ ಗಮನ ಸೆಳೆದಿದೆ. ಗೊರವಯ್ಯ ಸ್ವಾಮಿ ಒಂಬತ್ತು ದಿನಗಳ ಕಾಲ ಉಪವಾಸ ವೃತ ಕೈಗೊಂಡು 15 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ನುಡಿದಿದ್ದಾರೆ. ಇದನ್ನೂ ಓದಿ: ಒಂದೇ ನವರಾತ್ರಿ, ಹಲವು ಆಚರಣೆಗಳು – ಭಾರತದ ಯಾವ ರಾಜ್ಯದಲ್ಲಿ ಹೇಗೆ ಹಬ್ಬ ಆಚರಿಸುತ್ತಾರೆ? ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಅನ್ನೋ ದೈವವಾಣಿಯನ್ನು ಗೊರವಯ್ಯ ನುಡಿದಿದ್ದಾರೆ. ಈ ನುಡಿಯ ಪ್ರಕಾರ, ಈ ಬಾರಿ ಮುಂಗಾರು ಮಳೆಯ ಕೊರತೆಯಾಗಿದ್ದು, ಮಳೆಯನ್ನೇ ನಂಬಿ ಕೃಷಿ ಮಾಡಿದ್ದ ಅನ್ನದಾತರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆಯ ಅಭಾವದಿಂದ ಆತಂಕವಾಗಿದೆ. ಆದರೆ ಮುಂಬರುವ ಹಿಂಗಾರು ಮಳೆ ಉತ್ತಮವಾಗುವ ಮತ್ತು ರೈತರು ಸಮೃದ್ಧವಾಗಿ ಬೆಳೆ ಬೆಳೆಯುವ ಆಶಯ ವ್ಯಕ್ತವಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಕಂಗಾಲಾಗಿರುವ ರೈತರಿಗೆ ಹಿಂಗಾರು ಮಳೆಯಾದರೂ ಕೈಹಿಡಿಯಬಹುದೆಂಬ ನಿರೀಕ್ಷೆ. ಮಳೆ ಉತ್ತಮವಾಗಿ ಸುರಿದು, ಬೆಳೆಗಳು ಸಮೃದ್ಧವಾಗಿ ಬೆಳೆದರೆ ರೈತರ ಸಂಕಷ್ಟಗಳು ದೂರವಾಗಬಹುದು ಎಂಬ ಆಶಾಭಾವನೆ ಮೂಡಿದೆ. ರಾಜಕೀಯವಾಗಿ ಸಹ ಕಾರ್ಣಿಕ ಕುತೂಹಲ ಮೂಡಿಸಿದೆ. ರಾಜಕೀಯದ ದೃಷ್ಟಿಯಿಂದ ವಿಶ್ಲೇಷಿಸಿರುವ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ, ಕೆಂಪುಕೋಟೆಯ ಮೇಲೆ ಸಾಧು-ಸಂತರು ಧ್ವಜ ಹಾರಿಸುವ ಕಾಲ ಬರಬಹುದು. ಮುಂದಿನ ದಿನಗಳಲ್ಲಿ ಸಾಧು-ಸಂತರಿಗೆ ದೇಶದ ಆಡಳಿತದಲ್ಲಿ ಪ್ರಮುಖ ಪಾತ್ರ ಸಿಗಬಹುದು. ಸಾಧು-ಸಂತರು ಪ್ರಧಾನಿಯಾಗುವ ಸಾಧ್ಯತೆಯ ಕುರಿತ ಮುನ್ಸೂಚನೆ ಇದರಲ್ಲಿ ಅಡಗಿದೆ ಎಂಬ ವಿಶ್ಲೇಷಣೆ ಮಾಡಿದ್ದಾರೆ. ದೇವರಗುಡ್ಡದ ಕಾರ್ಣಿಕ ಕೇವಲ ಧಾರ್ಮಿಕ ನಂಬಿಕೆಗೆ ಸೀಮಿತವಾಗದೆ, ರೈತರ ಭವಿಷ್ಯ ಮತ್ತು ದೇಶದ ರಾಜಕೀಯದ ಬೆಳೆವಣಿಗಳ ಮುನ್ಸೂಚನೆ ನೀಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದು, ಮಾಲತೇಶ ಕೃಪೆಯಿಂದ ಹಿಂಗಾರು ಮಳೆ ಉತ್ತಮವಾಗಿ ಉತ್ತಮ ಫಸಲು ಬಂದರೆ ಸಾಕು ಎನ್ನುತ್ತಿದ್ದಾರೆ ಭಕ್ತರು. ಇದನ್ನೂ ಓದಿ: ಆಯುಧ ಪೂಜೆ | ಗಗನಕ್ಕೇರಿದ ಹೂವು, ಹಣ್ಣು ಬೆಲೆ – ಖರೀದಿಗೆ ಮುಗಿಬಿದ್ದ ಜನ