ಮಾಧ್ಯಮಗಳ ಜೊತೆ ನಾನು ಮಾತನಾಡಲ್ಲ: ಸಿದ್ದರಾಮಯ್ಯ
– ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್ ಪ್ರದಾನ – ಜಾಲಪ್ಪ ಭವಿಷ್ಯ ನಿಜವಾಯ್ತು ಕೋಲಾರ: ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗಳ ಕುರಿತು ಮಾಧ್ಯಮಗಳ ಜೊತೆ ನಾನು ಮಾತನಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕೋಲಾರದಲ್ಲಿ (Kolar) ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮಕ

– ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್ ಪ್ರದಾನ – ಜಾಲಪ್ಪ ಭವಿಷ್ಯ ನಿಜವಾಯ್ತು ಕೋಲಾರ: ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗಳ ಕುರಿತು ಮಾಧ್ಯಮಗಳ ಜೊತೆ ನಾನು ಮಾತನಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಕೋಲಾರದಲ್ಲಿ (Kolar) ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೀಡಿಯಾ ಜೊತೆ ನಾನು ಏನು ಮಾತನಾಡುವುದಿಲ್ಲ ಎಂದರು. ಇದನ್ನೂ ಓದಿ: ನನ್ನ ಆರೋಗ್ಯ ಚೆನ್ನಾಗಿದೆ.. ಗೃಹ ಸಚಿವರು ನನ್ನ ಹೃದಯದ ಕಾಳಜಿ ವಹಿಸೋದು ಬೇಡ: ಹೆಚ್ಡಿಕೆ ಟಾಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜ್ ಅರಸು ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಅರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಸೋಧನಾ ಸಂಸ್ಥೆಗೆ ನಾನು ಕೂಡ ಸಂಸ್ಥಾಪಕ ಟ್ರಸ್ಟಿ ಆಗಿದ್ದೆ. ನಾನು ಒಂದು ಬಾರಿ ಸಹ ಸಭೆಗೆ ಬಂದಿಲ್ಲ. ಹಾಗಾಗಿ ಫೋನ್ ಮಾಡಿ ನಿನ್ನನ್ನ ತೆಗೆದು ಬಿಡ್ತೀನಿ ಅಂದಿದ್ರು. ಹಾಗೆ ತೆಗೆದು ಹಾಕಿದ್ದಾರೆ, ಈಗ ನಾನು ಟ್ರಸ್ಟಿ ಅಲ್ಲ. ಜಿ.ಹೆಚ್.ನಾಗರಾಜ್ ನನ್ನ ಮಗನನ್ನ ಟ್ರಸ್ಟಿ ಮಾಡಿಕೊಂಡಿದ್ದಾರೆ. ಅವನೂ ಬರುತ್ತಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದರು. ಈ ಡೀಮ್ಡ್ ಯೂನಿವರ್ಸಿಟಿಯವರು ನನಗೆ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. ನನಗೆ ಗೊತ್ತೇ ಇಲ್ಲ, ಬೇಡ ಅಂತ ಹೇಳಿದ್ದೆ. ರಾಜ್ಯದ 17 ಬಜೆಟ್ ಮಂಡಿಸಿದ್ದೇನೆ, 8 ವರ್ಷ ಸಿಎಂ ಆಗಿದ್ದೆ. ದೇವರಾಜ ಅರಸು ಅವರನ್ನ ಹಿಂದಾಕಿದ್ದೇನೆ, ಬಹುಶಃ ಆ ಕಾರಣಕ್ಕೆ ನನಗೆ ಡಾಕ್ಟರೇಟ್ ಕೊಟ್ಟಿರಬೇಕು. ಆದ್ರೆ ನಾನು ಡಾಕ್ಟರ್ ಅಲ್ಲ, ನಾನು ಲಾಯರ್ ಅಷ್ಟೇ. ಜಿ.ಎಚ್.ನಾಗರಾಜ್ ಒತ್ತಡದಿಂದ ನನಗೆ ಡಾಕ್ಟರೇಟ್ ಸಿಕ್ಕಿದೆ ಅನ್ಸುತ್ತೆ. ಹಾಗಂತ ಇನ್ಮೇಲೆ ನನ್ನ ಡಾಕ್ಟರ್ ಸಿದ್ದರಾಮಯ್ಯ ಅಂತ ಕರೆಯಬೇಡಿ, ಸಿದ್ದರಾಮಯ್ಯ ಅಂತಾನೆ ಕರೆಯಿರಿ ಎಂದು ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದರು. ನಾನು ಸಿಎಂ ಆಗ್ಬೇಕು ಅಂತ ಮೊದಲು ಹೇಳಿದ್ದು ಜಾಲಪ್ಪ 1983 ರಲ್ಲಿ ಮೊದಲ ಬಾರಿಗೆ ನಾನು ಜಾಲಪ್ಪ ಅವರು ಶಾಸಕರಾದೆವು. ಅದಕ್ಕೂ ಮುಂಚೆ ಅವರು ಎಂಎಲ್ಸಿ ಆಗಿದ್ರು. ನಾನು ಮೊದಲು ಅಹಿಂದ ಸಮಾವೇಶ ಮಾಡಿದ್ದು ಕೋಲಾರದಲ್ಲಿ. 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದರು. ಆಗ ಇಬ್ಬರು ಮಿನಿಸ್ಟರ್ ಆಗಿದ್ವಿ. ಜಾಲಪ್ಪನವರು ಕಂದಾಯ ಬೇಕು ಎಂದ್ರು, ಆಗ ನಾನು ಹಣಕಾಸು ಸಚಿವನಾದೆ. ನಾನು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ ಮೊದಲಿಗ ಜಾಲಪ್ಪ. ಯಾಕಂದ್ರೆ ನಾನು ಸಿಎಂ ಆದರೆ ಅವರೇ ಸಿಎಂ ಆದಷ್ಟು ಖುಷಿ. ನನಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಅವರ ನನ್ನ ಒಡನಾಟ ಬಹಳ ಚನ್ನಾಗಿತ್ತು. ಆಗ ನಾನು ಕುಡಿಯೋದನ್ನ ಬಿಟ್ಟಿದ್ದೆ. ಆಗ ಔಷಧ ರೂಪದಲ್ಲಿ ಸ್ವಲ್ಪ ತಗೋಬೇಕು ಎಂದು ಹೇಳಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಆಗಿದೆ – ಹೆಚ್ಡಿಕೆ ಹೊಸ ಬಾಂಬ್