ಗುಲ್ಶಾನ್ to ಟೈಗರ್: ಗುಂಡಿನ ದಾಳಿಗೆ ಗುರಿಯಾದ ಬಾಲಿವುಡ್ ತಾರೆಯರಿವರು
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಅವರಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಭಾನುವಾರ ನಾಲ್ಕು ಸುತ್ತು ಗುಂಡು ಹಾರಿಸಿದ್ದರು.ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಟೈಗರ್ ಶ್ರಾಫ್ ಅವರು ನಟ ಸಲ್ಮಾನ್ ಖಾನ್ ಜೊತೆ ಗುರುತಿಸ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಅವರಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಭಾನುವಾರ ನಾಲ್ಕು ಸುತ್ತು ಗುಂಡು ಹಾರಿಸಿದ್ದರು.ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಟೈಗರ್ ಶ್ರಾಫ್ ಅವರು ನಟ ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಂಡಿದ್ದೇ ಕಾರಣ ಎನ್ನಲಾಗಿದೆ.ಈ ಪ್ರಕರಣವು ಬಾಲಿವುಡ್ನಲ್ಲಿ ಆತಂಕ ಸೃಷ್ಟಿಸಿದೆ.ಅಂದಹಾಗೆ, ಬಾಲಿವುಡ್ ತಾರೆಯರ ಪೈಕಿ ಗುಂಡಿನ ದಾಳಿಗೆ ಗುರಿಯಾದ ಮೊದಲಿಗರೇನಲ್ಲ ಟೈಗರ್. ಈ ಹಿಂದೆಯೂ ಹಲವರ ಹತ್ಯೆಗೆ ಇಂತಹ ಪ್ರಯತ್ನಗಳು ನಡೆದಿವೆ.ಮ್ಯೂಸಿಕ್ ಕಂಪನಿ ‘ಟಿ–ಸಿರೀಸ್’ ಸಂಸ್ಥಾಪಕ ಗುಲ್ಶಾನ್ ಕುಮಾರ್ ಅವರನ್ನು 1997ರ ಆಗಸ್ಟ್ನಲ್ಲಿ ಹತ್ಯೆ ಮಾಡಲಾಗಿತ್ತು. ಮುಂಬೈನ ಅಂಧೇರಿಯಲ್ಲಿರುವ ಜಿತೇಶ್ವರ ಮಹಾದೇವ ದೇವಸ್ಥಾನದ ಅವರ ಮೇಲೆ 16 ಬಾರಿ ಗುಂಡು ಹಾರಿಸಲಾಗಿತ್ತು.ನಟ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರ ಮೇಲೆ ಸಾಂತಾಕ್ರೂಜ್ ಪ್ರದೇಶದಲ್ಲಿ 2000ನೇ ಇಸವಿಯ ಜನವರಿಯಲ್ಲಿ ಗುಂಡಿನ ದಾಳಿ ನಡೆದಿತ್ತು. ರಾಕೇಶ್ ಅವರೇ ನಿರ್ದೇಶಿಸಿ, ನಿರ್ಮಿಸಿದ್ದ ಹಾಗೂ ಹೃತಿಕ್ ನಟಿಸಿದ್ದ ‘ಕಹೋ ನಾ ಪ್ಯಾರ್ ಹೈ’ ಸಿನಿಮಾ ಬಿಡುಗಡೆಯಾದ ಒಂದು ವಾರದ ನಂತರ ಅವರ ಮೇಲೆ ದಾಳಿ ನಡೆದಿತ್ತು. ‘ಕಹೋ ನಾ ಪ್ಯಾರ್ ಹೈ’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಸಾಧಿಸಿತ್ತು.ದಾಳಿಕೋರರಿಬ್ಬರು ನಡೆಸಿದ ಗುಂಡಿನ ದಾಳಿ ವೇಳೆ ಒಂದು ಗುಂಡು ರಾಕೇಶ್ ಅವರ ಎಡಗೈಗೆ ಬಡಿದಿತ್ತು. ಇನ್ನೊಂದು ಗುಂಡು ಎದೆ ಭಾಗಕ್ಕೆ ತಾಗಿತ್ತು.ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಅಪಾಯದಿಂದ ಪಾರುಸಲ್ಮಾನ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ದಾಳಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್2024ರ ಏಪ್ರಿಲ್ನಲ್ಲಿ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಐದು ಸುತ್ತು ಗುಂಡು ಹಾರಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು ಹೊಂದಿದ್ದಾರೆ ಎನ್ನಲಾದ ಹಲವು ಶಂಕಿತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಾದ ವಿಕ್ಕಿ ಗುಪ್ತಾ, ಸಾಗರ್ ಪಾಲ್, ಹರಪಾಲ್ ಸಿಂಗ್, ಸೋನುಕುಮಾರ್ ಬಿಷ್ಣೋಯಿ ಮತ್ತು ಮೊಹಮ್ಮದ್ ರಫೀಕ್ ಚೌಧರಿ ವಿಚಾರಣೆ ಪ್ರಗತಿಯಲ್ಲಿದೆ. ಪ್ರಕರಣದ ಆರನೇ ಆರೋಪಿ ಅನೂಜ್ ಕುಮಾರ್ ಥಾಪನ್ ಎಂಬಾತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ (2024ರ ಮೇ ತಿಂಗಳಲ್ಲಿ) ಮೃತಪಟ್ಟಿದ್ದಾನೆ.ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ, ಹಾನ್ಯನಟ ಕಪಿಲ್ ಶರ್ಮಾ ಒಡೆತನದ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ಕಳೆದ ವರ್ಷ ಜುಲೈನಿಂದ ಅಕ್ಟೋಬರ್ ನಡುವೆ ಮೂರು ಬಾರಿ ಗುಂಡಿನ ದಾಳಿ ನಡೆದಿತ್ತು.ಇದೇ ವರ್ಷ ಫೆಬ್ರುವರಿಯಲ್ಲಿ ಸಿನಿಮಾ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ಐದು ಸುತ್ತು ಗುಂಡು ಹಾರಿಸಲಾಗಿತ್ತು. ಆ ದಾಳಿಯ ಹೊಣೆಯನ್ನೂ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು.ನಿಭಾಯಿಸಲು ಆಗದಿದ್ದರೆ ಗೃಹ ಖಾತೆಯನ್ನು ಸಮರ್ಥರಿಗೆ ನೀಡಿ: ಫಡಣವೀಸ್ಗೆ NCP-SPಸಲ್ಮಾನ್ ಮನೆ ಬಳಿ ಗುಂಡಿನ ದಾಳಿ:ಕೋರ್ಟ್ ಎದುರು ಶರಣಾಗಲು ಅನುಮತಿ ಕೋರಿದ ಅನ್ಮೋಲ್