ಲೇಸರ್ ಮೀಟರ್, ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಆಸ್ತಿ ಸರ್ವೆಗೆ ಬೆಂಗಳೂರಿನ ದಕ್ಷಿಣ ಪಾಲಿಕೆ ಸಜ್ಜು
ಬೆಂಗಳೂರು: ಲೇಸರ್ ಮೀಟರ್ (Laser Meter) ಹಾಗೂ ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಆಸ್ತಿ ವಿಸ್ತೀರ್ಣ ಸರ್ವೆ ನಡೆಸಲು ದಕ್ಷಿಣ ನಗರ ಪಾಲಿಕೆ (South City Corporation) ಮುಂದಾಗಿದೆ. ಆಸ್ತಿ ಮಾಲೀಕರು ಸರಿಯಾದ ತೆರಿಗೆ ಪಾವತಿಸದೇ ನಿಯಮ ಉಲ್ಲಂಘಿಸುತ್ತಿರುವುದನ್ನು ತಡೆಗಟ್ಟಲು ಹಾಗೂ ನಿಖರ ಆಸ್ತಿ ವಿಸ್ತೀರ್ಣವನ್ನು ಪತ್ತೆಹಚ್ಚಲು ಲೇಸರ್ ಮೀಟರ್ ಮತ್ತು ಸ್ಯಾಟಲೈಟ್ (Sat

ಬೆಂಗಳೂರು: ಲೇಸರ್ ಮೀಟರ್ (Laser Meter) ಹಾಗೂ ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಆಸ್ತಿ ವಿಸ್ತೀರ್ಣ ಸರ್ವೆ ನಡೆಸಲು ದಕ್ಷಿಣ ನಗರ ಪಾಲಿಕೆ (South City Corporation) ಮುಂದಾಗಿದೆ. ಆಸ್ತಿ ಮಾಲೀಕರು ಸರಿಯಾದ ತೆರಿಗೆ ಪಾವತಿಸದೇ ನಿಯಮ ಉಲ್ಲಂಘಿಸುತ್ತಿರುವುದನ್ನು ತಡೆಗಟ್ಟಲು ಹಾಗೂ ನಿಖರ ಆಸ್ತಿ ವಿಸ್ತೀರ್ಣವನ್ನು ಪತ್ತೆಹಚ್ಚಲು ಲೇಸರ್ ಮೀಟರ್ ಮತ್ತು ಸ್ಯಾಟಲೈಟ್ (Satellite) ಡೇಟಾ ಆಧಾರಿತ ಪ್ರಾಯೋಗಿಕ ಸರ್ವೆ ನಡೆಸಲು ತೀರ್ಮಾನಿಸಲಾಗಿದೆ. ಕಟ್ಟಡದ ವಿಸ್ತೀರ್ಣ ಅಳೆಯಲು ಸಾಂಪ್ರದಾಯಿಕ ಟೇಪ್ ಅಥವಾ ವಿಡಿಯೋಗ್ರಫಿ ಬಳಸುವ ಬದಲು ಲೇಸರ್ ಉಪಕರಣವನ್ನು ಬಳಸಲಾಗುತ್ತಿದೆ. ಕಟ್ಟಡದ ಹೊರಭಾಗದಲ್ಲಿ ನಿಂತು ಕ್ಲಿಕ್ ಮಾಡಿದಾಗ ಲೇಸರ್ ಡಾಟ್ ಮೂಲಕ ಗೋಡೆ ಅಥವಾ ಜಾಗದ ನಿಖರ ದೂರ ಮತ್ತು ವಿಸ್ತೀರ್ಣವನ್ನು ತಕ್ಷಣವೇ ಲೆಕ್ಕಹಾಕಲು ಈ ಉಪಕರಣ ನೆರವಾಗಲಿದೆ. ಮೊಬೈಲ್ ಆಪ್ ಮೂಲಕ ಕಟ್ಟಡಗಳ ವಿವರಗಳನ್ನು ದಾಖಲಿಸುವ ಜೊತೆಗೆ ಗೂಗಲ್ ಸ್ಯಾಟಲೈಟ್ ಇಮೇಜ್ನಲ್ಲಿ ಪಾಲಿಗಾನ್ ರಚಿಸಿ ಕಟ್ಟಡದ ಹೊರಭಾಗದ ವಿಸ್ತೀರ್ಣವನ್ನು ಗುರುತಿಸಲಾಗುತ್ತದೆ. ನಂತರ ಒಳಭಾಗದ ಕೊಠಡಿಗಳು ಹಾಗೂ ಮಹಡಿಗಳ ವಿಸ್ತೀರ್ಣವನ್ನು ಲೇಸರ್ ಡಿವೈಸ್ ಮೂಲಕ ಅಳೆದು ಆಸ್ತಿಯ ಒಟ್ಟು ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಲಾಗುತ್ತದೆ. ಈ ವಿಧಾನವು ಸದ್ಯಕ್ಕೆ ಕೇವಲ ಪ್ರಾಯೋಗಿಕವಾಗಿದ್ದು, ಇದರ ಕುರಿತು ಪಾಲಿಕೆಯಿಂದ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.