ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಪ್ಯಾರಿಸ್ (ಎಎಫ್ಪಿ/ಎಪಿ): ಪ್ರತಿಭಟನ ಕಾರರೊಬ್ಬರ ಸಾವು, ಧ್ವಂಸಗೊಂಡ ಅಂಗಡಿಗಳು, ನೂರಾರು ಪೊಲೀಸರಿಗೆ ಗಾಯ ಮತ್ತು ಸುಮಾರು 1800 ಜನರ ಬಂಧನ.ಬೆಲೆ ಏರಿಕೆ ಖಂಡಿಸಿ ಫ್ರಾನ್ಸ್ದಾದ್ಯಂತ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ನಡೆದ ಘಟನೆಗಳಿವು.ಶನಿವಾರ ಭುಗಿಲೆದ್ದ ಪ್ರತಿಭಟನೆಯು ಹಿಂಸಾ ಸ್ವರೂಪ ಪಡೆಯಿತು. ಟೌನ್ಹಾಲ್ಗೆ ಬೆಂಕಿ ಹಚ್

ಪ್ಯಾರಿಸ್ (ಎಎಫ್ಪಿ/ಎಪಿ): ಪ್ರತಿಭಟನ ಕಾರರೊಬ್ಬರ ಸಾವು, ಧ್ವಂಸಗೊಂಡ ಅಂಗಡಿಗಳು, ನೂರಾರು ಪೊಲೀಸರಿಗೆ ಗಾಯ ಮತ್ತು ಸುಮಾರು 1800 ಜನರ ಬಂಧನ.ಬೆಲೆ ಏರಿಕೆ ಖಂಡಿಸಿ ಫ್ರಾನ್ಸ್ದಾದ್ಯಂತ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ನಡೆದ ಘಟನೆಗಳಿವು.ಶನಿವಾರ ಭುಗಿಲೆದ್ದ ಪ್ರತಿಭಟನೆಯು ಹಿಂಸಾ ಸ್ವರೂಪ ಪಡೆಯಿತು. ಟೌನ್ಹಾಲ್ಗೆ ಬೆಂಕಿ ಹಚ್ಚಲಾಯಿತು. ಅಂಗಡಿಗಳನ್ನು ಧ್ವಂಸ ಮಾಡಲಾಯಿತು. ದೇಶದಾದ್ಯಂತ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆಯಿತು.ಲಕ್ಷಾಂತರ ಜನರು ಶಾಂತಿಯುತವಾಗಿ ಶನಿವಾರ ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಬದಲಾಯಿತು. ಉದ್ರಿಕ್ತರ ಗುಂಪುಗಳು ಸಾರ್ವಜನಿಕ ಕಟ್ಟಡಗಳನ್ನು ಧ್ವಂಸ ಗೊಳಿಸಿದವು, ಐಷಾರಾಮಿ ಅಂಗಡಿ ಮತ್ತು ಸೂಪರ್ ಮಾರ್ಕೆಟ್ಗಳನ್ನು ಲೂಟಿ ಮಾಡಿದವು ಹಾಗೂ ಪೊಲೀಸ್ ವಾಹನ ಮತ್ತು ಅಧಿಕಾರಿಗಳ ಮೇಲೆ ದಾಳಿ ನಡೆಸಿತು.‘ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟರು. ಪ್ಯಾರಿಸ್ನಲ್ಲಿ 855 ಮಂದಿ ಸೇರಿದಂತೆ ಫ್ರಾನ್ಸ್ನಾದ್ಯಂತ ಸುಮಾರು 1800 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 500ಕ್ಕೂ ಹೆಚ್ಚು ಅಧಿಕಾರಿಗಳು ಗಾಯಗೊಂಡಿದ್ದಾರೆ’ ಎಂದು ಅಲ್ಲಿನ ಗೃಹ ಸಚಿವರು ತಿಳಿಸಿದ್ದಾರೆ.ಸುಮಾರು 1500 ಅಂಗಡಿಗಳಿಗೆ ಹಾನಿಯಾಗಿದೆ. ಹಲವೆಡೆ ಲೂಟಿ ಮಾಡಲಾಗಿದೆ ಎಂದು ವರ್ತಕರ ವಲಯದ ಪ್ರಮುಖರು ಭಾನುವಾರ ತಿಳಿಸಿದ್ದಾರೆ.ಫ್ರಾನ್ಸ್ದಾದ್ಯಂತ ನಡೆದ ಪ್ರತಿಭಟನೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ 8 ಲಕ್ಷ ಜನ ಭಾಗವಹಿಸಿದ್ದರು ಎಂದು ಸಂಘಟಕರು ಹೇಳಿದ್ದಾರೆ.ಪ್ಯಾರಿಸ್ನಲ್ಲಿ ಅಂಗಡಿಗಳ ಕಿಟಕಿ ಗಾಜುಗಳನ್ನು ಪುಡಿ ಮಾಡಲಾಗಿದೆ, ಸೈಕಲ್ಗಳಿಗೆ ಬೆಂಕಿ ಹಚ್ಚಲಾಗಿದೆ, ಗೋಡೆಗಳ ಮೇಲೆ ಘೋಷಣೆಗಳನ್ನು ಬರೆಯಲಾಗಿದೆ. ಲಿಮೋಗೆಸ್ ನಗರದಲ್ಲಿ 143 ವರ್ಷ ಹಳೆಯದಾದ ನಗರ ಸಭಾಂಗಣಕ್ಕೆ ಬೆಂಕಿ ಹಚ್ಚಿ ಭಾಗಶಃ ಹಾನಿ ಮಾಡಲಾಗಿದೆ.‘ಹಿಂಸಾಚಾರಕ್ಕೆ ಜಾಗವಿಲ್ಲ’‘ನಮ್ಮ ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ. ಅಂಗಡಿಗಳ ಮೇಲೆ ದಾಳಿ ಮಾಡಿದವರು, ಟೌನ್ ಹಾಲ್ಗಳನ್ನು ಲೂಟಿ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ವಿಶ್ವದ ವಿವಿಧೆಡೆಗಳಿಂದ ವಲಸೆ ಬಂದಿರುವವರು, ದ್ವೇಷ ತುಂಬಿದ ಜನರು ಒಂದು ಕಾಲದಲ್ಲಿ ಶ್ರೇಷ್ಠವಾಗಿದ್ದ ದೇಶವನ್ನು ಛಿದ್ರಗೊಳಿಸಿದ್ದಾರೆ. ವಿಳಂಬ ಮಾಡುವ ಬದಲು ಗಡಿಯನ್ನು ಮುಚ್ಚಿ, ನಿಯಂತ್ರಣ ಮಾಡಿ ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ261019-51-809801896