ನಾಡಹಬ್ಬಕ್ಕೆ ಮುದ್ದುಪ್ರಾಣಿಗಳ ಮೆರುಗು: 700ಕ್ಕೂ ಹೆಚ್ಚು ತಳಿ ಪ್ರದರ್ಶನ
ಮೈಸೂರು: ಕಾರಿನೊಳಗೆ ಹಸ್ಕಿಗೆ ರಾಜಾತಿಥ್ಯ, ನಾಜೂಕಾಗಿ ಕೂದಲು ಬಾಚಿಸಿಕೊಳ್ಳುತ್ತಿದ್ದ ‘ಶಿಟ್ಜು’, ಮಾಲೀಕನ ‘ಕಮ್ ಜಂಪ್’ ಸೂಚನೆ ಕಿವಿಗೆ ಬೀಳುತ್ತಿದ್ದಂತೆಯೇ ಬೇಟೆಗಾರನ ಗತ್ತಿನಲ್ಲಿ ಹಾರಿ ನಿಲ್ಲುತ್ತಿದ್ದ ಮುಧೋಳ್, ನೀರು ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಿದ್ದ ಜರ್ಮನ್ ಶೆಫರ್ಡ್.ನಗರದ ಜೆ.ಕೆ. ಮೈದಾನದಲ್ಲಿ ಭಾನುವಾರ ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪಸ

ಮೈಸೂರು: ಕಾರಿನೊಳಗೆ ಹಸ್ಕಿಗೆ ರಾಜಾತಿಥ್ಯ, ನಾಜೂಕಾಗಿ ಕೂದಲು ಬಾಚಿಸಿಕೊಳ್ಳುತ್ತಿದ್ದ ‘ಶಿಟ್ಜು’, ಮಾಲೀಕನ ‘ಕಮ್ ಜಂಪ್’ ಸೂಚನೆ ಕಿವಿಗೆ ಬೀಳುತ್ತಿದ್ದಂತೆಯೇ ಬೇಟೆಗಾರನ ಗತ್ತಿನಲ್ಲಿ ಹಾರಿ ನಿಲ್ಲುತ್ತಿದ್ದ ಮುಧೋಳ್, ನೀರು ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಿದ್ದ ಜರ್ಮನ್ ಶೆಫರ್ಡ್.ನಗರದ ಜೆ.ಕೆ. ಮೈದಾನದಲ್ಲಿ ಭಾನುವಾರ ದಸರಾ ಮಹೋತ್ಸವ ಅಂಗವಾಗಿ ರೈತ ದಸರಾ ಉಪಸಮಿತಿ ಹಾಗೂ ಪಶುಪಾಲನಾ ಪಶು ಸೇವಾ ಇಲಾಖೆಯಿಂದ ಆಯೋಜಿಸಿದ್ದ ಶ್ವಾನ, ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳಿವು.ಮೈದಾನದ ತುಂಬೆಲ್ಲಾ ಒಂದೊಂದು ಶ್ವಾನವೂ ತನ್ನದೇ ಆದ ಗಾಂಭೀರ್ಯ, ಶೈಲಿ ಹಾಗೂ ಚಾಕಚಕ್ಯತೆಯಿಂದ ನೋಡುಗರ ಕಣ್ಮನ ಸೆಳೆಯಿತು. ಬಗೆಬಗೆಯ ಗಾತ್ರ, ಬಣ್ಣ ಹಾಗೂ ಆಕರ್ಷಕ ರೂಪದ ಶ್ವಾನಗಳು ಆಕರ್ಷಿಸಿದವು. ಒಂದಕ್ಕಿಂತ ಒಂದು ಸುಂದರವಾಗಿ ಕಾಣುತ್ತಿದ್ದ ಶ್ವಾನಗಳನ್ನು ಕಂಡು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದರು.ನೆಚ್ಚಿನ ಶ್ವಾನಗಳೊಂದಿಗೆ ಆಗಮಿಸಿದ್ದ ಮಾಲೀಕರು ಅವುಗಳನ್ನು ಮುದ್ದಾಡುತ್ತಾ, ಕಂಕುಳಲ್ಲಿ ನಾಯಿಮರಿಗಳನ್ನು ಹೊತ್ತುಕೊಂಡು ಪ್ರದರ್ಶನದಲ್ಲಿ ಪಾಲ್ಗೊಂಡ ದೃಶ್ಯಗಳು ಮನಸೂರೆಗೊಂಡವು.ಪ್ರದರ್ಶನದಲ್ಲಿ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರದಿಂದ 700ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಪ್ರಾಣಿಪ್ರಿಯರಿಗೆ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.ರಿಂಗ್ 1, 2 ಎಂಬ ಎರಡು ಅಂಕಣಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ವಾನಗಳ ವಯಸ್ಸಿಗೆ ಅನುಗುಣವಾಗಿ ಎರಡು ಹಂತದ ಸ್ಪರ್ಧೆ ನಡೆಯಿತು. 55 ಶ್ವಾನ ತಳಿಯ ಶ್ವಾನಗಳು ಪಾಲ್ಗೊಂಡಿದ್ದು ಗಮನಸೆಳೆಯಿತು.ಮುದ್ದಿನ ಶ್ವಾನಗಳಿಗೆ ವಿಶೇಷ ಸಿದ್ಧತೆ: ಪ್ರದರ್ಶನದಲ್ಲಿ ಭಾಗವಹಿಸಲು ಪ್ರೀತಿಯ ಶ್ವಾನಗಳನ್ನು ಸಜ್ಜುಗೊಳಿಸುವಲ್ಲಿ ಮಾಲೀಕರು ತಲ್ಲೀನರಾಗಿದ್ದರು. ಅವುಗಳ ಅಂದ ಹೆಚ್ಚಿಸಲು ಅಲಂಕಾರ, ಅವುಗಳ ನಡಿಗೆ ಹಾಗೂ ಪ್ರದರ್ಶನದ ಸಿದ್ಧತೆಗಳಿಗೆ ವಿಶೇಷ ಗಮನ ನೀಡುತ್ತಿದ್ದರು. ಕೆಲವರು ತರಬೇತಿ ನೀಡುತ್ತಿದ್ದರು.ಕೆಲವರು ಮುದ್ದಿನ ಶ್ವಾನಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಾ ಅವುಗಳೊಂದಿಗೆ ಸಮಯ ಕಳೆದರು. ಶ್ವಾನಗಳ ವಿಶೇಷ ಭಂಗಿಗಳನ್ನು ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯುವಲ್ಲಿ ಕೆಲವರು ನಿರತರಾಗಿದ್ದರು.ಬೆಕ್ಕು, ಮೊಲ ಹಾಗೂ ಆಮೆಗಳನ್ನೂ ಕೆಲವರು ತಂದಿದ್ದರು. ಮುದ್ದು ಪ್ರಾಣಿಗಳೊಂದಿಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಇದು ನೋಡುಗರಿಗೆ, ವಿಶೇಷ ಅನುಭವ ನೀಡಿತು.ಕಣ್ತುಂಬಿಕೊಂಡ ಪ್ರೇಕ್ಷಕರು: ಶ್ವಾನಗಳ ಓಡಾಟ, ಬುದ್ಧಿವಂತಿಕೆಯನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.ಒಂಟಿತನ ಹೋಗಲಾಡಿಸುತ್ತವೆಮೈಸೂರು: ಶ್ವಾನಗಳು ಮತ್ತು ಸಾಕು ಪ್ರಾಣಿಗಳು ಮನುಷ್ಯನ ಒಂಟಿತನ ಹೋಗಲಾಡಿಸುತ್ತವೆ. ಮನುಷ್ಯನಿಗೆ ಅತ್ಯಂತ ನಂಬಿಕಸ್ಥ ಪ್ರಾಣಿಗಳಾಗಿವೆ ಎಂದು ಪಶುಸಂಗೋಪನೆ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಶ್ವಾನಗಳ ಸೇವೆ ಹಾಗೂ ಅವುಗಳ ಕಾರ್ಯಕ್ಷಮತೆ ಶ್ಲಾಘನೀಯವಾದುದು ಎಂದರು.ನಾಯಿ ಮತ್ತು ಬೆಕ್ಕುಗಳನ್ನು ಪ್ರಾಣಿಪ್ರಿಯರು ಅತ್ಯಂತ ಪ್ರೀತಿಯಿಂದ ಮನೆಯಲ್ಲಿ ಸಾಕುತ್ತಾರೆ. ಅವುಗಳೊಂದಿಗೆ ಒಡನಾಟ ಮನುಷ್ಯರಿಗಿಂತ ಹೆಚ್ಚಿರುತ್ತದೆ. ಶ್ವಾನಗಳಿಂದ ಕಚ್ಚಿಸಿಕೊಂಡರೆ ರೇಬಿಸ್ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕಚ್ಚಿದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚುಚ್ಚುಮದ್ದು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದರಾಮು, ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಂಜೇಶ್, ಪ್ರಸನ್ನ ಬಿ.ವಿ. ಹಾಗೂ ಮಾದೇಶ ಇದ್ದರು. ಜರ್ಮನ್ ಶೆಫರ್ಡ್ ಪ್ರಥಮಮೈಸೂರು: ಸ್ಪರ್ಧೆಯಲ್ಲಿ ಅತ್ಯಂತ ಶಿಸ್ತು ಮತ್ತು ಮೈಕಟ್ಟು ಪ್ರದರ್ಶಿಸಿದ ಶ್ವಾನಗಳಿಗೆ ಬಹುಮಾನ ನೀಡಲಾಯಿತು. ಜರ್ಮನ್ ಶೆಫರ್ಡ್ ತಳಿಯ ಗಂಡು ಶ್ವಾನ ಪ್ರಥಮ ಸ್ಥಾನ ಪಡೆದರೆ, ಹೆಣ್ಣು ಶ್ವಾನ ಮೂರನೇ ಸ್ಥಾನಕ್ಕೆ ಭಾಜನವಾಯಿತು. ಲ್ಯಾಬ್ರಡೂಡಲ್ ತಳಿಯ ಗಂಡು ಶ್ವಾನ ಎರಡನೇ ಸ್ಥಾನ ಗಿಟ್ಟಿಸಿಕೊಂಡಿತು. ವಿಜೇತ ಶ್ವಾನಗಳ ಮಾಲೀಕರಿಗೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಬಹುಮಾನ ವಿತರಿಸಿದರು.ಪಶುಸಂಗೋಪನೆ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಸಿದ್ದರಾಮು, ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಂಜೇಶ್, ಪ್ರಸನ್ನ ಬಿ.ವಿ. ಹಾಗೂ ಮಾದೇಶ ಇದ್ದರು.261019-39-620915741