ಎಂ.ಬೈರೇಗೌಡ, ವಿ.ಎಲ್.ಪಾಟೀಲಗೆ ‘ಜಾನಪದ ತಜ್ಞ ಪ್ರಶಸ್ತಿ’
ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಜಾನಪದ ವಿದ್ವಾಂಸರಾದ ಎಂ.ಬೈರೇಗೌಡ ಮತ್ತು ವಿ.ಎಲ್.ಪಾಟೀಲ ಅವರು ‘ಜಾನಪದ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಜಾನಪದ ವಿದ್ವಾಂಸರಾದ ಎಂ.ಬೈರೇಗೌಡ ಮತ್ತು ವಿ.ಎಲ್.ಪಾಟೀಲ ಅವರು ‘ಜಾನಪದ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ₹50 ಸಾವಿರ ನಗದು ಒಳಗೊಂಡಿದ್ದು, ವಾರ್ಷಿಕ ಗೌರವ ಪ್ರಶಸ್ತಿಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಗೌರವ ಪ್ರಶಸ್ತಿ: ಬೆಂಗಳೂರಿನ ಎಸ್.ಎಂ.ರಾಜಣ್ಣ (ಜಾನಪದ ಗಾಯನ), ಬೆಂಗಳೂರು ಗ್ರಾಮಾಂತರದ ಶಂಕರ್ ಭಾರತೀಪುರ (ಜಾನಪದ ಗಾಯನ), ಬೆಂಗಳೂರು ದಕ್ಷಿಣದ ಮಾಯಣ್ಣ (ಪೂಜಾ ಕುಣಿತ), ಕೋಲಾರದ ಎ.ಎಲ್.ವೆಂಕಟೇಶ್ (ಬುರ್ರಕಥೆ), ಚಿಕ್ಕಬಳ್ಳಾಪುರದ ಸೋ.ಸು.ನಾಗೇಂದ್ರನಾಥ್ (ಜಾನಪದ ಗಾಯನ), ತುಮಕೂರಿನ ಸಿ.ವಿ.ವೀರೇಶ್ ಕುಮಾರ್ (ವೀರಗಾಸೆ), ದಾವಣಗೆರೆಯ ಎಚ್.ಬಿ.ಬಸವರಾಜ (ಕೀಲುಕುದುರೆ), ಚಿತ್ರದುರ್ಗದ ಕೋಲಾಟದ ನರಸಪ್ಪ (ಕೋಲಾಟ), ಶಿವಮೊಗ್ಗದ ಬಿ.ಟಿ.ಸುಮಿತ್ರಾ (ಡೊಳ್ಳು), ಮೈಸೂರಿನ ಕೆ.ಎನ್.ಮಹೇಶ್ (ವೀರಗಾಸೆ)ಮಂಡ್ಯದ ಟಿ.ತಿಮ್ಮೇಶ್ (ಜಾನಪದ ಗಾಯನ), ಹಾಸನದ ಎಸ್.ಎಸ್.ನಿಂಗಪ್ಪ (ಕೋಲಾಟ ಮತ್ತು ರಂಗ ಕುಣಿತ), ಚಿಕ್ಕಮಗಳೂರಿನ ಡಿ.ರಾಮಪ್ಪ (ಜಾನಪದ ಗಾಯನ), ಚಾಮರಾಜನಗರದ ಸಿ.ಎಂ.ನರಸಿಂಹಮೂರ್ತಿ (ಜಾನಪದ ಗಾಯನ), ದಕ್ಷಿಣ ಕನ್ನಡದ ಸುಬ್ಬಣ್ಣ ಪಂಡಿತ್ (ದೈವ ನರ್ತಕ), ಉಡುಪಿಯ ಬೈಲೂರು ಗೋವಿಂದರಾಜಶೆಟ್ಟಿ (ಭಜನೆ), ಕೊಡಗಿನ ಜಿ.ಬಿ.ರಮೇಶ (ಜಾನಪದ ನೃತ್ಯ), ಬೆಳಗಾವಿಯ ಹಣಮಂತ ಗೋವಿಂದಪ್ಪ ಹೂಗಾರ (ಸಂಬಾಳ ವಾದನ), ಧಾರವಾಡದ ಬಸಣ್ಣ ಶಿವಬಸಪ್ಪ ಮುಳಗುಂದ (ತಂಬೂರಿ ಪದ ಮತ್ತು ತತ್ವಪದ), ವಿಜಯಪುರದ ಭೀಮಬಾಯಿ ಗೌಡತಿ (ಸಂಪ್ರದಾಯದ ಪದ)ಬಾಗಲಕೋಟೆಯ ದಾನಯ್ಯ ಮಹಾಲಿಂಗಯ್ಯ ಮಠಪತಿ (ಕರಡಿ ಮೇಳ), ಉತ್ತರ ಕನ್ನಡದ ಪುರುಷೋತ್ತಮ ಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಹಾವೇರಿಯ ಕಲ್ಲಪ್ಪ ಜಿಜಪ್ಪ ಬಗರಿಕಾರ (ಚರ್ಮವಾದ್ಯ ತಯಾರಿಕೆ), ಗದಗದ ಗೌಡಪ್ಪ ವೆಂಕಪ್ಪ (ಜಾನಪದ ಸಂಗೀತ), ಕಲಬುರಗಿಯ ಸೂರ್ಯಕಾಂತ ಪೂಜಾರಿ (ಜಾನಪದ ಗಾಯನ), ಬೀದರ್ನ ದೇವದಾಸ ಚಿಮಕೋಡ (ಜಾನಪದ ಗಾಯನ), ರಾಯಚೂರಿನ ಸ.ಹುಲಿಗೆಪ್ಪ (ಜಾನಪದ ಗಾಯನ), ಕೊಪ್ಪಳದ ಮುದಕವ್ವ ಗಂಜಾಳ (ಗೀಗಿಪದ), ವಿಜಯನಗರದ ಎನ್.ಟಿ.ಹುಸೇನ್ ಬಾಷಾ (ತಾಷಾರಾಂ ಡೋಲು), ಯಾದಗಿರಿಯ ಶರಣಪ್ಪ (ಡೊಳ್ಳಿನ ಪದ) ಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಕೆಂಪಮ್ಮ, ಮಂಜೇಶ್ ಚೆನ್ನಾಪುರ, ಕೆಂಕೆರೆ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.ವಿ.ಎಲ್.ಪಾಟೀಲ