ಮೈಸೂರು ಕಂಬಳ: ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡ ‘ವಿಜಯ– ದಶಮಿ ಜೋಡುಕರೆ ಕಂಬಳ’ವು ಸೋಮವಾರ ರಾತ್ರಿ ಸಂಪನ್ನಗೊಂಡಿತು. ಕ್ವಾರ್ಟರ್ಫೈನಲ್, ಸೆಮಿಫೈನಲ್, ಫೈನಲ್ನ ರೋಚಕ ಓಟಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಜಮಾಯಿಸಿದ್ದರು. ಕೋಣಗಳನ್ನು ಬಿಡಲು ಸಮಯ ಮಿತಿ ಅಳವಡಿಕೆ ನಡುವೆಯೂ, ನಿಗದಿತ ಸಮಯಕ್ಕಿಂತ ಐದು ಗಂಟೆ ತಡವಾಗಿ ಕಂಬಳ ಮುಕ್ತಾಯ

ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡ ‘ವಿಜಯ– ದಶಮಿ ಜೋಡುಕರೆ ಕಂಬಳ’ವು ಸೋಮವಾರ ರಾತ್ರಿ ಸಂಪನ್ನಗೊಂಡಿತು. ಕ್ವಾರ್ಟರ್ಫೈನಲ್, ಸೆಮಿಫೈನಲ್, ಫೈನಲ್ನ ರೋಚಕ ಓಟಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಜಮಾಯಿಸಿದ್ದರು. ಕೋಣಗಳನ್ನು ಬಿಡಲು ಸಮಯ ಮಿತಿ ಅಳವಡಿಕೆ ನಡುವೆಯೂ, ನಿಗದಿತ ಸಮಯಕ್ಕಿಂತ ಐದು ಗಂಟೆ ತಡವಾಗಿ ಕಂಬಳ ಮುಕ್ತಾಯವಾಯಿತು.ಕಂಬಳದ ವಿಜೇತರಿಗೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಬಹುಮಾನ ವಿತರಿಸಿದರು.ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ, ತೃತೀಯ ಹಾಗೂ ಚತುರ್ಥ ಸ್ಥಾನಕ್ಕೆ ನಗದು ಬಹುಮಾನ ನೀಡಿದರು.ವಿಜೇತರ ವಿವರ– ನೇಗಿಲು ಕಿರಿಯ: ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ (ಓಡಿಸಿದವರು– ಬೈಂದೂರು ವಿಶ್ವನಾಥ ದೇವಾಡಿಗ)–1, ಮುನಿಯಾಲ್ ಉದಯಕುಮಾರ್ ಶೆಟ್ಟಿ (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)– 2, ಉಳೆಪಾಡಿ ಪುಲ್ಲೊಟ್ಟು ಬೀಡು ಉದಯ ಶೆಟ್ಟಿ ‘ಬಿ’ (ಪಣಪೀಲು ಪ್ರವೀಣ್ ಕೋಟ್ಯಾನ್)– 3, ಉಳೆಪಾಡಿ ಪುಲ್ಲೊಟ್ಟು ಬೀಡು ಉದಯ ಶೆಟ್ಟಿ ‘ಎ’ (ಪುತ್ತಿಲ ಹೊಸಮನೆ ಚರಣ್ ಪೂಜಾರಿ)– 4.ನೇಗಿಲು ಹಿರಿಯ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕಾ ಸುದೀಪ್ ಶೆಟ್ಟಿ (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)– 1, ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (ಕಕ್ಕೆಪದವು ಹೃತಿಕ್ ಗೌಡ)– 2, ಮಾಣಿ ನಾಗರಾಜ್ ಶೆಟ್ಟಿ (ಬಜೆಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)– 3, ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟು (ಬಂಬ್ರಾನ ಬೈಲು ವಂದಿತ್ ಶೆಟ್ಟಿ)– 4.ಹಗ್ಗ ಕಿರಿಯ: ಪದವು ಕಾನಡ್ಕ ಪ್ಲೇವಿ ಡಿಸೋಜ ‘ಬಿ’ (ಕಾವೂರು ದೋಟ ಸುದರ್ಶನ್)– 1, ಎರ್ಮಾಳ್ ರೋಹಿತ್ ಹೆಗ್ಡೆ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)– 2, ಶಿಬರೂರು ಮುಟ್ಟಿಕಲ್ಲು ಕೀರ್ತನ ರಾಜೇಶ್ ಪಾಣಾರ (ಕಡಂದಲೆ ಮೂಡಾಯಿಬೆಟ್ಟು ರೋಹಿತ್ ಪಾಣಾರಾ)–3, ಸುರತ್ಕಲ್ ಪಾಂಜಚನ್ಯ ಯೋಗೀಶ್ ಕರಿಯ ಪೂಜಾರು (ಭಟ್ಕಳ ಶಂಕರ)– 4.ಹಗ್ಗ ಹಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕಕ್ಕೆಪದವು ಪೆಂರ್ಗಾಲ್ ಕೃತಿಕ್ ಗೌಡ)– 1, ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ (ಪಡು ಸಾಂತೂರು ಪೃಥ್ವಿರಾಜ್ ಪೂಜಾರಿ)– 2, ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ (ಉಜಿರೆ ಸ್ಪಂದನ್ ಶೆಟ್ಟಿ)– 3, ನಂದಳಿಕೆ ಶ್ರೀಕಾಂತ್ ಭಟ್ (ಬಂಬ್ರಾಣ ಬೈಲು ವಂದಿತ್ ಶೆಟ್ಟಿ)– 4.ಅಡ್ಡಹಲಗೆ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ‘ಎ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)–1, ವಿಟ್ಲ ಕುಂಡಡ್ಕ ಮರುವಾಲ ಜಯಂತದಾಸ್ (ಉಲ್ಲೂರು ಕಂದಾವರ ಗಣೇಶ್)–2, ಬೋಳಾರ ತ್ರಿಶಾಲ್ ಕೆ. ಪೂಜಾರಿ (ಭಟ್ಕಳ ಹರೀಶ್ ನಾಯ್ಕ್) –3, ಇರುವೈಲು ದೊಡ್ಡಗುತ್ತು ಜಗದೀಶ್ ಎಂ ಶೆಟ್ಟಿ ‘ಬಿ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)–4ಕನೆಹಲಗೆ: ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ (ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ (ಬೈಂದೂರು ಭಾಸ್ಕರ ದೇವಾಡಿಗ) ಅವರ ಕೋಣಗಳು ಆರುವರೆ ಕೋಲು ನಿಶಾನೆಗೆ ನೀರು ಹಾಯಿಸಿ ಪ್ರಥಮ ಸ್ಥಾನ ಪಡೆದವು.