ಸರ್ಕಾರ ಕಬ್ಬು ಬೆಳೆಗಾರರ ನೆರವಿಗೆ ಧಾವಿಸಲಿ|ತಜ್ಞರ ವರದಿ ನಂತರ ಕೇಂದ್ರದ ಕ್ರಮ–HDK
ಹಾಸನ: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಮುಖವ

ಹಾಸನ: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟದ ಬಗ್ಗೆ ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಮುಖವಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೇಡಿಕೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಕಬ್ಬಿನ ದರವನ್ನು ಏರಿಕೆ ಮಾಡಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಈಗ ಕಬ್ಬನ್ನು ಎಥೆನಾಲ್ ತಯಾರಿಕೆಗೆ ಉಪಯೋಗಿಸಲಾಗುತ್ತಿದೆ. ಪೆಟ್ರೋಲ್ ಜೊತೆ ಶೇ 20ರಷ್ಟು ಎಥೆನಾಲ್ ಬೆರೆಸಿ ಉಪಯೋಗ ಮಾಡಲಾಗುತ್ತಿದೆ. ಇನ್ನೊಂದು ಕಡೆ ಎಥೆನಾಲ್ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.ಎಂಎಸ್ಪಿ ದರವನ್ನು ಏರಿಕೆ ಮಾಡಬೇಕೆಂದು ಬೆಳೆಗಾರರ ಪ್ರಮುಖ ಬೇಡಿಕೆಯಾಗಿದೆ. ಹಲವು ದಿನಗಳಿಂದ ಈ ಬೇಡಿಕೆ ಕಾರ್ಯರೂಪಕ್ಕೆ ತರಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಮುಂದೆ ಧರಣಿ ನಡೆಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮಂತ್ರಿಗಳ ಜತೆ ಪ್ರಲ್ಹಾದ್ ಜೋಶಿ ಚರ್ಚೆ ಮಾಡಿದ್ದಾರೆ. ದೆಹಲಿಗೆ ರೈತ ಪ್ರತಿನಿಧಿಗಳನ್ನು ಬರಲು ಹೇಳಿದ್ದರು. ಅಲ್ಲಿ ನಡೆದ ಚರ್ಚೆಯಲ್ಲಿ ರೈತರ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ತಜ್ಞರ ಸಮಿತಿ ನೇಮಿಸಿದ್ದು, ರೈತರ ಬೇಡಿಕೆ ಈಡೇರಿಸಲು ಸಮಿತಿ ವರದಿ ಬಳಿಕ ತೀರ್ಮಾನ ಮಾಡಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹೀಗಾಗಿ ಕಬ್ಬು ಬೆಳೆಗಾರರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು.‘ರೈತರು ಅನ್ಯತಾ ಭಾವಿಸುವುದು ಬೇಡ. ಮುಖ್ಯಮಂತ್ರಿಗಳ ತಂತ್ರಗಾರಿಕೆ ಏನಿದೆ? ಅದರಂತೆ ಜನತೆಯ ಮುಂದೆ ಒಂದು ಸುದ್ದಿಯನ್ನು ಹೊರಡಿಸಿದ್ದಾರೆ. ಸ್ಟಿಂಗ್ ಅಪರೇಷನ್ ಬಗ್ಗೆ ಜೆಡಿಎಸ್ ಪ್ರಾಮುಖ್ಯತೆ ನೀಡುತ್ತಿದೆ ಎಂದಿದ್ದಾರೆ. ನನಗೆ ಉತ್ತರ ಕರ್ನಾಟಕ, ಹಳೇ ಕರ್ನಾಟಕದ ಪ್ರಶ್ನೆ ಇಲ್ಲ. ನಾನು ಅಧಿಕಾರಿದಲ್ಲಿದ್ದಾಗ, ಸಿಎಂ ಆಗಿದ್ದಾಗಲು ಎಲ್ಲಾ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ನಾನು ರೈತರಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಏನು ಮಾಡುತ್ತಾರೋ ಕಾದು ನೋಡೋಣ’ ಎಂದು ಹೇಳಿದರು.‘2006-2007ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿ ಅಧಿವೇಶನ ನಡೆಯಬೇಕಾದರೆ ಕಬ್ಬು ಬೆಳೆಗಾರರು ಬಂದಾಗ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆದು ಮಾತನಾಡಿದ್ದೇನೆ. ಅಂದು ಪ್ರತಿ ಹೆಕ್ಟೇರ್ಗೆ ₹25ಸಾವಿರ ಕೊಡುವ ನಿರ್ಧಾರ ಮಾಡಿದೆ. ತಕ್ಷಣವೇ ₹248 ಕೋಟಿ ಬಿಡುಗಡೆ ಮಾಡಿದೆ. ಈಗ ರೈತರು ಬೆಲೆ ಕಡಿಮೆಯಾಗಿದೆ, ಬರಗಾಲ ಇದೆ. ಹೆಕ್ಟೇರ್ಗೆ ₹50ಸಾವಿರ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ನಾನು ಸಿಎಂ ಆಗಿದ್ದಾಗ ₹35ಸಾವಿರ ಕೋಟಿ ಇದ್ದ ಬಜೆಟ್ ಗಾತ್ರ, ಇಂದು ₹4.75 ಲಕ್ಷ ಕೋಟಿ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.‘ನನ್ನದು ಒಂದು ಇತಿ ಮಿತಿ ಇದೆ. ರೈತರ ಪರವಾಗಿ ಮನವಿ ಸಲ್ಲಿಸಬಹುದು. ರೈತರ ಬೇಡಿಕೆ ಬಗೆಹರಿಸಲು ಪ್ರಯತ್ನ ಪಡುತ್ತೇನೆ’ ಎಂದು ಹೇಳಿದರು.ಶಾಸಕರಾದ ಎ.ಮಂಜು, ಸ್ವರೂಪ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದರು.‘ಸಿಹಿ ಸುದ್ದಿಗೆ ಕಾಯುತ್ತಿರುವೆ’‘ತಮಿಳುನಾಡಿನಲ್ಲಿ ₹700 ಕೊಡಲು ನಿರ್ಧಾರ ಮಾಡಿದ್ದಾರೆ. ಅದೇ ರೀತಿ ಇಲ್ಲಿಯೂ ರೈತರು ಟನ್ ಕಬ್ಬಿಗೆ ₹1000 ನೀಡಿದರೆ ಮುಖ್ಯಮಂತ್ರಿಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಸಿಹಿ ಸುದ್ದಿ ಕೊಡುವುದನ್ನು ರೈತರ ಪರವಾಗಿ ಕಾಯುತ್ತಿದ್ದೇನೆ. ನಾನು ಕೇಂದ್ರ ಕೃಷಿ ಸಚಿವರ ಜತೆ ರೈತರ, ಸಕ್ಕರೆ ಕಾರ್ಖಾನೆ ಮಾಲೀಕರ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದೇನೆ’ ಎಂದರು.‘ಸಾಮಾನ್ಯ ಜನರು ಬಳಸುವ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲೇ ಬರಗಾಲವಿದೆ. ಗ್ರಾಹಕರ ಮೇಲೆ ಹೊರೆಯಾಗುತ್ತಿದೆ. ರೈತರ ಹೋರಾಟದ ಬಗ್ಗೆ ಮಾಹಿತಿಯನ್ನು ಕೃಷಿ ಸಚಿವರಿಗೆ ಕೊಡುತ್ತಿದ್ದೇನೆ. ತಜ್ಞರ ಸಮಿತಿ ಏನು ಶಿಫಾರಸು ಮಾಡುತ್ತದೆ ಎಂಬುದನ್ನು ಕಾಯುತ್ತಿದ್ದೇನೆ. ನನ್ನ ಮೇಲೆ, ಪಕ್ಷದ ಮೇಲೆ ಅನುಮಾನ ಬೇಡ’ ಎಂದು ಹೇಳಿದರು.261019-36-1851956546