ಪಿಲಿಪರ್ಬ: ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ಗೆ ಪ್ರಥಮ ಬಹುಮಾನ
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ಕುಡ್ಲದ ಪಿಲಿಪರ್ಬ-2026 ಸೀಸನ್-5 ಸ್ಪರ್ಧೆಯಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡವು ₹5 ಲಕ್ಷ ನಗದು ಬಹುಮಾನದೊಂದಿಗೆ ಪಿಲಿಪರ್ಬ- 2026ರ ಕಿರೀಟ ಮುಡಿಗೇರಿಸಿಕೊಂಡಿತು. ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ತಂಡವು ₹3 ಲಕ್ಷ ನಗದಿನೊಂದಿಗೆ ದ್ವಿತೀಯ, ರಾಜ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ಕುಡ್ಲದ ಪಿಲಿಪರ್ಬ-2026 ಸೀಸನ್-5 ಸ್ಪರ್ಧೆಯಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡವು ₹5 ಲಕ್ಷ ನಗದು ಬಹುಮಾನದೊಂದಿಗೆ ಪಿಲಿಪರ್ಬ- 2026ರ ಕಿರೀಟ ಮುಡಿಗೇರಿಸಿಕೊಂಡಿತು. ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ತಂಡವು ₹3 ಲಕ್ಷ ನಗದಿನೊಂದಿಗೆ ದ್ವಿತೀಯ, ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು ಮತ್ತು ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ತಂಡಗಳು ₹2 ಲಕ್ಷ ನಗದಿನೊಂದಿಗೆ ತೃತೀಯ ಸ್ಥಾನ ಹಂಚಿಕೊಂಡವು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿಪಿಲಿಪರ್ಬದ ವಿಶೇಷವಾದ ಕಪ್ಪು ಪಿಲಿ ಪ್ರಶಸ್ತಿಯನ್ನು ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು ತಂಡ ಪಡೆದುಕೊಂಡರೆ, ಮರಿ ಹುಲಿ ಪ್ರಶಸ್ತಿಯನ್ನು ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಜಂಟಿಯಾಗಿ ಪಡೆದುಕೊಂಡವು.'ಪರ್ಬದ ಪಿಲಿ'ಯನ್ನು ಫ್ರೆಂಡ್ಸ್ ಬಪ್ಪಲ್ ದುರ್ಗಾಪರಮೇಶ್ವರಿ ಹುಲಿ ಪಡೆದುಕೊಂಡಿತು.ಶಿಸ್ತಿನ ತಂಡವಾಗಿ ಪಾಂಡೇಶ್ವರ ಶಾರದಾ ಹುಲಿ ಹೊರ ಹೊಮ್ಮಿದರೆ, ತಾಸೆ ಹಿಮ್ಮೇಳ ವಿಭಾಗದಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ಬಣ್ಣಗಾರಿಕೆ ಹಾಗೂ ಮುಡಿ ವಿಭಾಗದಲ್ಲಿ ಫ್ರೆಂಡ್ಸ್ ಬಪ್ಪಲ್ ದುರ್ಗಾಪರಮೇಶ್ವರಿ ಹುಲಿ ಪ್ರಶಸ್ತಿ ಪಡೆದುಕೊಂಡಿತು. ಮೆರವಣಿಗೆ ವಿಭಾಗ ಮತ್ತು ಧರಣಿ ಮಂಡಲ ಪ್ರಶಸ್ತಿಯನ್ನು ಹನುಮಾನ್ ಟೈಗರ್ಸ್ ಉಪ್ಪಳ ಬಾಚಿಕೊಂಡಿತು.ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಚಲನಚಿತ್ರ ತಾರೆಯರಾದ ಶೈನ್ ಶೆಟ್ಟಿ, ಅರ್ಜುನ್ ದೇವ್, ತನ್ವಿ ರಾಮ್, ರೂಪಶ್ರೀ ವರ್ಕಾಡಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ನರೇಶ್ ಪ್ರಭು ಉಪಸ್ಥಿತರಿದ್ದರು.