90 ದಿನಗಳ ಮುಂಚೆಯೇ ಪಾಸ್ಗೆ ಅರ್ಜಿ ಸಲ್ಲಿಸಿ – ಅಯೋಧ್ಯೆ ಬಾಲ ರಾಮನ ದರ್ಶನಕ್ಕೆ ಹೊಸ ರೂಲ್ಸ್!
– ದಿನಕ್ಕೆ ವಿತರಿಸುವ ಆನ್ಲೈನ್ ಪಾಸ್ಗಳ ಸಂಖ್ಯೆ 2,000ಕ್ಕೆ ಹೆಚ್ಚಳ ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ (ಬಾಲರಾಮ – Ram Lalla) ದರ್ಶನದ ವ್ಯವಸ್ಥೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ಭಕ್ತರು 90 ದಿನಗಳ ಮುಂಚಿತವಾಗಿಯೇ ಸುಗಮ ದರ್ಶನ ಪಾಸ್ಗೆ ಅರ್ಜಿ ಸಲ್ಲಿಸಲು ಅವಕ

– ದಿನಕ್ಕೆ ವಿತರಿಸುವ ಆನ್ಲೈನ್ ಪಾಸ್ಗಳ ಸಂಖ್ಯೆ 2,000ಕ್ಕೆ ಹೆಚ್ಚಳ ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ (ಬಾಲರಾಮ – Ram Lalla) ದರ್ಶನದ ವ್ಯವಸ್ಥೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ಭಕ್ತರು 90 ದಿನಗಳ ಮುಂಚಿತವಾಗಿಯೇ ಸುಗಮ ದರ್ಶನ ಪಾಸ್ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಕೇವಲ 15 ದಿನಗಳ ಮುಂಚಿತವಾಗಿ ಮಾತ್ರ ಪಾಸ್ (Pass) ಪಡೆಯಲು ಅವಕಾಶವಿತ್ತು. ಇದನ್ನೂ ಓದಿ: Kolkata Stampede | ಸಾವಿನ ಸಂಖ್ಯೆ 19ಕ್ಕೆ ಏರಿಕೆ – ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ದಿನಕ್ಕೆ ಆನ್ಲೈನ್ ಮೂಲಕ ವಿತರಿಸುವ ಪಾಸ್ಗಳ ಸಂಖ್ಯೆಯನ್ನು 975 ರಿಂದ 2,000 ರೂ.ಗೆ ಹೆಚ್ಚಿಸಲಾಗಿದೆ. 90, 62, 30, 14, 7, 3 ಮತ್ತು 1 ದಿನಗಳ ಮುಂಚಿತವಾಗಿ ಒಟ್ಟು 7 ಹಂತಗಳಲ್ಲಿ ಪಾಸ್ಗಳನ್ನ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ದರ್ಶನದ ದಿನವೇ ತುರ್ತು ಪಾಸ್ ಪಡೆಯುವ ಸೌಲಭ್ಯವೂ ಲಭ್ಯವಿರಲಿದೆ. ಮುಂಗಡ ಅರ್ಜಿಗಳ ಪರಿಶೀಲನೆ ಬಳಿಕ 24 ರಿಂದ 48 ಗಂಟೆಗಳ ಒಳಗಾಗಿ ಪಾಸ್ ದೃಢೀಕರಣದ ಮಾಹಿತಿ ನೀಡಲಾಗುತ್ತದೆ. ಸುಗಮ ದರ್ಶನ ಪಾಸ್ ಸಂಪೂರ್ಣ ಉಚಿತವಾಗಿದ್ದು, ಇದಕ್ಕಾಗಿ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ. ಇದನ್ನೂ ಓದಿ: Public TV Explainer | ದುರ್ಗಾ ಪೆಂಡಾಲ್ ದುರಂತಕ್ಕೆ 19 ಬಲಿ – ಜನದಟ್ಟಣೆ, ಕಾಲ್ತುಳಿತ ಸಂಭವಿಸುವುದೇಕೆ? ತಡೆಯುವುದು ಹೇಗೆ?