3D-ಮುದ್ರಿತ ಕೃತಕ ಕೊಕ್ಕುಗಳನ್ನು ಪಡೆದ ವಿಶ್ವದ ಮೊದಲ ಪಕ್ಷಿ 'ಹಾರ್ನ್ಬಿಲ್'
3D-ಮುದ್ರಿತ ಕೃತಕ ಕೊಕ್ಕುಗಳನ್ನು ಪಡೆದ ವಿಶ್ವದ ಮೊದಲ ಪಕ್ಷಿ ಎಂಬ ಹೆಗ್ಗಳಿಕೆಗೆ ಸದರ್ನ್ ಗ್ರೌಂಡ್ ಹಾರ್ನ್ಬಿಲ್’ ತಳಿಯ ಅಪರೂಪದ ಹಕ್ಕಿ ಸಾಕ್ಷಿಯಾಗಿದೆ. ದಿನ ಕಳೆದಂತೆ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದುತ್ತಲೇ ಇದೆ. ಎಐ ಯುಗದಲ್ಲಿ ಪ್ರತಿಯೊಂದು ಕೆಲಸಕ್ಕೂ ತಂತ್ರಜ್ಞಾನ ಸಹಕಾರಿಯಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಗಾಯಗೊಂಡು ಕೊಕ್ಕು ಕಳೆದುಕೊಂಡಿದ್ದ&

3D-ಮುದ್ರಿತ ಕೃತಕ ಕೊಕ್ಕುಗಳನ್ನು ಪಡೆದ ವಿಶ್ವದ ಮೊದಲ ಪಕ್ಷಿ ಎಂಬ ಹೆಗ್ಗಳಿಕೆಗೆ ಸದರ್ನ್ ಗ್ರೌಂಡ್ ಹಾರ್ನ್ಬಿಲ್’ ತಳಿಯ ಅಪರೂಪದ ಹಕ್ಕಿ ಸಾಕ್ಷಿಯಾಗಿದೆ. ದಿನ ಕಳೆದಂತೆ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದುತ್ತಲೇ ಇದೆ. ಎಐ ಯುಗದಲ್ಲಿ ಪ್ರತಿಯೊಂದು ಕೆಲಸಕ್ಕೂ ತಂತ್ರಜ್ಞಾನ ಸಹಕಾರಿಯಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಗಾಯಗೊಂಡು ಕೊಕ್ಕು ಕಳೆದುಕೊಂಡಿದ್ದ ಹಕ್ಕಿಯೊಂದಕ್ಕೆ 3D ಪ್ರಿಂಟೆಡ್ ತಂತ್ರಜ್ಞಾನದ ಮೂಲಕ ಕೃತಕ ಕೊಕ್ಕುಗಳನ್ನು ಯಶಸ್ವಿಯಾಗಿ ಜೋಡಿಸಿರುವುದು ಎಲ್ಲರ ಗಮನ ಸೆಳೆದಿದೆ.ನೆದರ್ಲ್ಯಾಂಡ್ನ ಆರ್ಟಿಸ್ ಮೃಗಾಲಯದಲ್ಲಿ ‘ಹಾರ್ನ್ಬಿಲ್’ ಎಂಬ ಹಕ್ಕಿಗೆ ಗಾಯವಾಗಿ ಅದರ ಕೊಕ್ಕಿನ ಮೇಲ್ಭಾಗ ಹಾಗೂ ಕೆಳಭಾಗ ಎರಡೂ ಕಡೆಯೂ ಹಾನಿಯಾಗಿತ್ತು. ಕೊಕ್ಕುಗಳನ್ನು ಕಳೆದುಕೊಂಡ ಆ ಹಕ್ಕಿ ಪ್ರತಿನಿತ್ಯ ಆಹಾರ ಸೇವನೆಗೆ ಕಷ್ಟಪಡುವುದನ್ನು ಗಮನಿಸಿ ಅದಕ್ಕೆ ಚಿಕಿತ್ಸೆ ಕೊಡಿಸಬೇಕೆಂದು ನಿರ್ಧಾರ ಮಾಡಲಾಯಿತು ಎಂದು ಮೃಗಾಲಯ ಹೇಳಿದೆ.ಅಟ್ರೆಕ್ಟ್ ವಿಶ್ವವಿದ್ಯಾಲಯ, ಪಶುವೈದ್ಯಕೀಯ ವಿಭಾಗ ಸಹಭಾಗಿತ್ವದಲ್ಲಿ ಆ ಹಕ್ಕಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಕೊನೆಗೂ ಆ ಹಕ್ಕಿಗೆ ಕೊಕ್ಕು ಜೋಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಶಸ್ತ್ರಚಿಕಿತ್ಸೆಯ ಕೆಲವೇ ದಿನಗಳಲ್ಲಿ ಹಕ್ಕಿಯು ಕೃತಕ ಕೊಕ್ಕುಗಳ ಮೂಲಕ ಆಹಾರ ಸೇವಿಸಲು ಆರಂಭಿಸಿತು. ಇದು ವೈದ್ಯಕೀಯ ಕ್ಷೇತ್ರದ ಮತ್ತೊಂದು ಮೈಲಿಗಲ್ಲಿಗೆ ‘ಹಾರ್ನ್ಬಿಲ್’ ಸಾಕ್ಷಿಯಾಯಿತು ಎಂದು ಮೃಗಾಲಯ ಪೋಸ್ಟ್ ಹಂಚಿಕೊಂಡಿದೆ. View this post on Instagram