ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ: ಯಾವ ವಲಯಗಳಿಗೆ ಲಾಭ?
ನವದೆಹಲಿ: ಜವಳಿ, ಚರ್ಮ ಉದ್ಯಮ ಸೇರಿದಂತೆ ಕಾರ್ಮಿಕ ವಲಯದ ಹಲವು ಭಾರತೀಯ ಉತ್ಪನ್ನಗಳಿಗೆ ಸುಂಕರಹಿತ ಮಾರುಕಟ್ಟೆ ಒದಗಿಸುವ ಮಹತ್ವದ ‘ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ’ (ಎಫ್ಟಿಎ) ಮಂಗಳವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.ಕಳೆದ ಏಪ್ರಿಲ್ 27ರಂದು ಉಭಯ ದೇಶಗಳು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದವು. ವಿಶೇಷವೆಂದರೆ, ಕಳೆದ ಐದು ವರ್ಷಗಳಲ್ಲಿ ಜಾರಿಗ

ನವದೆಹಲಿ: ಜವಳಿ, ಚರ್ಮ ಉದ್ಯಮ ಸೇರಿದಂತೆ ಕಾರ್ಮಿಕ ವಲಯದ ಹಲವು ಭಾರತೀಯ ಉತ್ಪನ್ನಗಳಿಗೆ ಸುಂಕರಹಿತ ಮಾರುಕಟ್ಟೆ ಒದಗಿಸುವ ಮಹತ್ವದ ‘ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ’ (ಎಫ್ಟಿಎ) ಮಂಗಳವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.ಕಳೆದ ಏಪ್ರಿಲ್ 27ರಂದು ಉಭಯ ದೇಶಗಳು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದವು. ವಿಶೇಷವೆಂದರೆ, ಕಳೆದ ಐದು ವರ್ಷಗಳಲ್ಲಿ ಜಾರಿಗೆ ಬಂದ ಏಳನೇ ವ್ಯಾಪಾರ ಒಪ್ಪಂದ ಇದಾಗಿದೆ. ಇದಕ್ಕೂ ಮುನ್ನ ಯುಎಇ, ಮಾರಿಷಸ್, ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆ (ಇಎಫ್ಟಿಎ), ಬ್ರಿಟನ್, ಒಮಾನ್ ಹಾಗೂ ಆಸ್ಟ್ರೇಲಿಯಾ ದೇಶಗಳೊಂದಿಗೆ ಭಾರತ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿತ್ತು.2010ರಲ್ಲಿ ಆರಂಭವಾಗಿದ್ದ ಈ ಒಪ್ಪಂದದ ಮಾತುಕತೆಗಳು 2015ರಲ್ಲಿ ಸ್ಥಗಿತಗೊಂಡಿದ್ದವು. ಬಳಿಕ 2025ರ ಮಾರ್ಚ್ನಲ್ಲಿ ಮಾತುಕತೆಗೆ ಮರುಜೀವ ತುಂಬಲಾಗಿತ್ತು. ಇದೀಗ ಜಾರಿಗೆ ಬಂದಿರುವ ಈ ಒಪ್ಪಂದವು ಭಾರತದ ಕಾರ್ಯಾಚರಣೆಯಲ್ಲಿರುವ 17ನೇ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.ಉಭಯ ದೇಶಗಳ ಆರ್ಥಿಕತೆಗೆ ಬಲ:ಒಪ್ಪಂದ ಜಾರಿಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್, ‘ಇಂದಿನಿಂದ ಭಾರತದೊಂದಿಗಿನ ನಮ್ಮ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಮೂಲಕ ಎರಡೂ ದೇಶಗಳ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಒಪ್ಪಂದವನ್ನು ರೂಪಿಸಿದ್ದೇವೆ’ ಎಂದು ತಿಳಿಸಿದ್ದಾರೆ.‘ಮಂಗಳವಾರದಿಂದಲೇ ನ್ಯೂಜಿಲೆಂಡ್ ಉದ್ಯಮಗಳು ಕಡಿಮೆ ಸುಂಕದೊಂದಿಗೆ ಶತಕೋಟಿಗೂ ಅಧಿಕ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಇದರಿಂದ ನಮ್ಮ ಉದ್ಯಮಗಳ ವಿಸ್ತರಣೆ, ಹೆಚ್ಚಿನ ಉದ್ಯೋಗ ಸೃಷ್ಟಿ ಹಾಗೂ ಉತ್ತಮ ವೇತನ ಲಭಿಸಲಿದ್ದು, ಆರ್ಥಿಕ ಮಟ್ಟ ಸುಧಾರಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.As of today, our historic Free Trade Agreement with India is in effect.Working closely with Prime Minister @narendramodi, we’ve delivered a deal that will help grow both of our economies.From today, Kiwi businesses can reach over a billion more customers with significantly… pic.twitter.com/4gK5YyVmea— Christopher Luxon (@chrisluxonmp) October 20, 2026 ಯಾವೆಲ್ಲಾ ವಲಯಗಳಿಗೆ ಲಾಭ?ಆರ್ಥಿಕ ತಜ್ಞರ ಪ್ರಕಾರ, ಈ ಒಪ್ಪಂದದಿಂದ ಜವಳಿ ಮತ್ತು ಸಿದ್ಧ ಉಡುಪು, ಚರ್ಮ ಮತ್ತು ಪಾದರಕ್ಷೆ, ಎಂಜಿನಿಯರಿಂಗ್ ಸರಕುಗಳು, ವಾಹನ ಬಿಡಿಭಾಗಗಳು, ರತ್ನ ಮತ್ತು ಆಭರಣ, ಕೃಷಿ ಹಾಗೂ ಸಂಸ್ಕರಿಸಿದ ಆಹಾರ, ಔಷಧೋದ್ಯಮ ಮತ್ತು ಇತರ ಉತ್ಪಾದನಾ ವಲಯಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಮೊದಲ ದಿನದಿಂದಲೇ ಭಾರತದ ಶೇಕಡ 100ರಷ್ಟು ರಫ್ತುಗಳಿಗೆ ನ್ಯೂಜಿಲೆಂಡ್ನಲ್ಲಿ ಸುಂಕರಹಿತ ಪ್ರವೇಶ ಸಿಗಲಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಇದು ದೊಡ್ಡ ಮಟ್ಟದ ಸ್ಪರ್ಧಾತ್ಮಕ ಬಲ ನೀಡಲಿದೆ.Big day for Kiwi exporters. Our Free Trade Agreement with India is now in force.That means goods leaving here at the Ports of Auckland can reach one of the world’s fastest-growing economies with lower tariffs.More orders, more money flowing back into Kiwi communities, more… pic.twitter.com/ZfKS5wkx0T— Christopher Luxon (@chrisluxonmp) October 20, 2026 20 ಶತಕೋಟಿ ಡಾಲರ್ ಹೂಡಿಕೆ ನಿರೀಕ್ಷೆ:ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 20 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ನ್ಯೂಜಿಲೆಂಡ್ ಬದ್ಧತೆ ತೋರಿದೆ.ಸೇವಾ ವಲಯ, ವಿದ್ಯಾರ್ಥಿಗಳಿಗೂ ಅನುಕೂಲ:‘ಜಾಗತಿಕ ವ್ಯಾಪಾರದ ಅನಿಶ್ಚಿತತೆಯ ನಡುವೆ, ಈ ಒಪ್ಪಂದವು ಮುಕ್ತ ಮಾರುಕಟ್ಟೆ ಮತ್ತು ಸ್ಥಿರ ವ್ಯಾಪಾರ ನಿಯಮಗಳಿಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಕೇವಲ ಸರಕುಗಳಿಗಷ್ಟೇ ಅಲ್ಲದೆ ಸೇವೆಗಳು, ಹೂಡಿಕೆ, ಕೌಶಲ ಮತ್ತು ವೃತ್ತಿಪರರ ಸಂಚಾರಕ್ಕೂ ಇದು ಅವಕಾಶ ಕಲ್ಪಿಸಲಿದೆ’ ಎಂದು ಆರ್ಥಿಕ ಚಿಂತಕರ ಚಾವಡಿ ‘ಚಿಂತನ್ ರಿಸರ್ಚ್ ಫೌಂಡೇಶನ್’ (ಸಿಆರ್ಎಫ್ ಇಂಡಿಯಾ) ಅಧ್ಯಕ್ಷ ಶಿಶಿರ್ ಪ್ರಿಯದರ್ಶಿ ಹೇಳಿದ್ದಾರೆ.ಭಾರತ–ನ್ಯೂಜಿಲೆಂಡ್ ಎಫ್ಟಿಎ: ಅಕ್ಟೋಬರ್ 20ರಿಂದ ಜಾರಿ: ಪೀಯೂಷ್ ಗೋಯಲ್ಭಾರತ–ಐರೋಪ್ಯ ಒಕ್ಕೂಟದ ಎಫ್ಟಿಎ ‘ಎಲ್ಲ ಒಪ್ಪಂದಗಳ ತಾಯಿ’: ಪೀಯೂಷ್ ಗೋಯಲ್