ರಿಫೈನಿಂಗ್ನಲ್ಲಿ ಭಾರತ ಸೂಪರ್ ಪವರ್: ಮಾರ್ಕೊ ರುಬಿಯೊ
– ವೆನೆಜುವೆಲಾ ತೈಲ ಉತ್ಪಾದನೆ ಹೆಚ್ಚಿಸಲು ಭಾರತದ ನೆರವು ಕೋರಿದ ಅಮೆರಿಕ ನವದೆಹಲಿ: ಭಾರತವು ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದನ್ನು `ರಿಫೈನಿಂಗ್ ಸೂಪರ್ ಪವರ್’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಬಣ್ಣಿಸಿದ್ದಾರೆ. ವೆನೆಜುವೆಲಾದ ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತಕ್ಕೆ ಇ

– ವೆನೆಜುವೆಲಾ ತೈಲ ಉತ್ಪಾದನೆ ಹೆಚ್ಚಿಸಲು ಭಾರತದ ನೆರವು ಕೋರಿದ ಅಮೆರಿಕ ನವದೆಹಲಿ: ಭಾರತವು ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದನ್ನು `ರಿಫೈನಿಂಗ್ ಸೂಪರ್ ಪವರ್’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಬಣ್ಣಿಸಿದ್ದಾರೆ. ವೆನೆಜುವೆಲಾದ ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತಕ್ಕೆ ಇರುವ ಅವಕಾಶಗಳ ಕುರಿತು ರಿಲಯನ್ಸ್ ಸಂಸ್ಥೆಯೊಂದಿಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಮುಂಬೈನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೂಬಿಯೊ, ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವಲ್ಲಿ ಭಾರತಕ್ಕೆ ಉತ್ತಮ ಅನುಭವವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವೆನೆಜುವೆಲಾದ ತೈಲ ಲಭ್ಯತೆ ಹೆಚ್ಚಾದಂತೆ ಭಾರತ ಅದನ್ನು ಸಂಸ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ ಬಂಧನ ವಿಸ್ತರಣೆ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ದಾಸ್, ರಾಂಕಾ ಭಾರತವು ರಿಫೈನಿಂಗ್ ಸೂಪರ್ ಪವರ್. ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಭಾರತಕ್ಕಿದೆ. ಈ ಹಿಂದೆ ಭಾರತ ಇದನ್ನು ಮಾಡಿದೆ. ವೆನೆಜುವೆಲಾದ ತೈಲ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದ್ದಂತೆ ಭಾರತ ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ರೂಬಿಯೊ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ-ಯತ್ನಾಳ್ ಮುಖಾಮುಖಿ: ಮತ್ತೆ ಬಿಜೆಪಿಗೆ ವಾಪಸ್? ವೆನೆಜುವೆಲಾದಲ್ಲಿ ಭಾರತಕ್ಕೂ ತೈಲ ಹಕ್ಕುಗಳು: ವೆನೆಜುವೆಲಾದಲ್ಲಿ ಭಾರತವು ಈಗಾಗಲೇ ತೈಲ ಉತ್ಪಾದನೆಗೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಿದೆ ಎಂದು ರೂಬಿಯೊ ಹೇಳಿದ್ದಾರೆ. ಈ ಹಕ್ಕುಗಳ ಮೂಲಕ ಭಾರತ ತನ್ನ ತೈಲ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ | ಡಿಕೆಶಿಗಾಗಿ ಸಿದ್ಧವಾಯ್ತು ಅಜ್ಜಯ್ಯನ ಸುಂದರ ವಿಗ್ರಹ ಜಾಗತಿಕ ಇಂಧನ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವೆನೆಜುವೆಲಾದಲ್ಲಿ ತೈಲ ಉತ್ಪಾದನೆ ಹೆಚ್ಚಿಸುವುದು ಸಹಕಾರಿಯಾಗಬಹುದು ಎಂದು ಅಮೆರಿಕ ನಿರೀಕ್ಷಿಸಿದೆ. ಆದರೆ, ವಿಶ್ವದ ವಿವಿಧ ಭಾಗಗಳಲ್ಲಿ ಉಂಟಾಗುವ ಪೂರೈಕೆ ವ್ಯತ್ಯಯದಿಂದ ಸೃಷ್ಟಿಯಾಗುವ ಕೊರತೆಯನ್ನು ವೆನೆಜುವೆಲಾ ಒಂದೇ ದೇಶ ಸಂಪೂರ್ಣವಾಗಿ ನೀಗಿಸಲು ಸಾಧ್ಯವಿಲ್ಲ ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಆಯುಧ ಪೂಜೆ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು ವೆನೆಜುವೆಲಾ ಒಂದೇ ದೇಶವು ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಘಟನೆಗಳಿಂದ ಉಂಟಾಗಬಹುದಾದ ತೈಲ ಕೊರತೆಯನ್ನು ಸಂಪೂರ್ಣವಾಗಿ ತುಂಬುತ್ತದೆ ಎಂದು ನಾನು ಹೇಳುತ್ತಿಲ್ಲ. ಆದರೆ, ಕಾಲಕ್ರಮೇಣ ಅದು ಸಾಧ್ಯವಾಗಬಹುದು. ಅಲ್ಪಾವಧಿಯಲ್ಲಿಯೂ ತೈಲ ಪೂರೈಕೆಗೆ ನೆರವಾಗಬಹುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನನ್ನು ಕೊಂದು ಪದೇ ಪದೇ ಜಾಗ ಬದಲಿಸುತ್ತಿದ್ದ ಇನ್ಫ್ಲುಯೆನ್ಸರ್ ಕೊನೆಗೂ ಅರೆಸ್ಟ್ ನಿರ್ಬಂಧಗಳ ನಿವಾರಣೆಗೆ ಚರ್ಚೆ: ವೆನೆಜುವೆಲಾದ ತೈಲ ಉತ್ಪಾದನೆ ಹೆಚ್ಚಿಸುವ ಕುರಿತು ಭಾರತದೊಂದಿಗೆ ಈ ಹಿಂದೆಯೂ ಮಾತುಕತೆ ನಡೆಸಲಾಗಿದೆ ಎಂದು ರೂಬಿಯೊ ತಿಳಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳಲು ಭಾರತ ಆಸಕ್ತಿ ತೋರಿಸಿದೆ ಎಂದೂ ಅವರು ಹೇಳಿದ್ದಾರೆ. ಆದರೆ, ವೆನೆಜುವೆಲಾದ ಮೇಲಿನ ನಿರ್ಬಂಧಗಳು ಸೇರಿದಂತೆ ಕೆಲವು ಅಡೆತಡೆಗಳನ್ನು ನಿವಾರಿಸಬೇಕಿದೆ. ಈ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಭಾರತ ಮತ್ತು ಅಮೆರಿಕ ಚರ್ಚೆ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಶತ್ರುಗಳನ್ನು ಗುರುತಿಸಿ, ಸದೆಬಡಿಯಿರಿ: ದಸರಾ ವೇಳೆ ಮೋದಿ ಕರೆ ರಿಲಯನ್ಸ್ ಜೊತೆ ಮಾತುಕತೆ: ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ನಿಯೋಗವು ರಿಲಯನ್ಸ್ ಸಂಸ್ಥೆಯೊಂದಿಗೆ ವೆನೆಜುವೆಲಾದ ತೈಲ ಉತ್ಪಾದನೆ ಹೆಚ್ಚಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲಿದೆ ಎಂದು ರೂಬಿಯೊ ಖಚಿತಪಡಿಸಿದ್ದಾರೆ. ಭಾರತವು ತನ್ನ ಪೆಟ್ರೋಲಿಯಂ ಆಮದು ಮೂಲಗಳನ್ನು ವೈವಿಧ್ಯಗೊಳಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ. ವಿವಿಧ ದೇಶಗಳಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ನೀತಿಯನ್ನು ಅವರು ಸೂಕ್ತ ಕ್ರಮ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಟಿಎಂಸಿ ತೊರೆದ ಬೆನ್ನಲ್ಲೇ ಗುಜರಾತ್ ಸರ್ಕಾರದಿಂದ ಯೂಸೂಫ್ಗೆ ಜಮೀನು ʻಗಿಫ್ಟ್ʼ