ಹೇಮಗುಡ್ಡ: ಸಂಭ್ರಮದ ಅಂಬಾರಿ ಮೆರವಣಿಗೆ
ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ಆಯುಧ ಪೂಜೆ ನಿಮಿತ್ತ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅಂಬಾರಿ ಮೆರವಣಿಗೆ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಈ ವರ್ಷವೂ ಅದ್ದೂರಿಯಾಗಿ ನೆರವೇರಿತು.ಪ್ರತಿವರ್ಷ ನಾಡಹಬ್ಬ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಹೇಮಗುಡ್ಡದ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳವಾರ ಆಯುಧ ಪೂಜೆ ನಿಮಿತ್ತ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅಂಬಾರಿ ಮೆರವಣಿಗೆ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಈ ವರ್ಷವೂ ಅದ್ದೂರಿಯಾಗಿ ನೆರವೇರಿತು.ಪ್ರತಿವರ್ಷ ನಾಡಹಬ್ಬ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುವ ಒಂದು ದಿನ ಮೊದಲೇ ಐತಿಹಾಸಿಕ ಹೇಮಗುಡ್ಡದಲ್ಲಿ ಜಂಬುಸವಾರಿ ನಡೆಯುವುದು ಸಂಪ್ರದಾಯ.ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿನ ದುರ್ಗಾದೇವಿಗೆ ಪ್ರತಿದಿನ ಪಂಚಾಮೃತ ಅಭಿಷೇಕ, ಸಹಸ್ರ ಕುಂಕುಮಾರ್ಚನೆ, ದುರ್ಗಾ ಸಪ್ತಶೃತಿ ಪಾರಾಯಣ, ಹೋಮ, ಶತಚಂಡಿ ಪೂರ್ಣಹುತಿ, ಮಹಾಮಂಗಳಾರತಿ, ಪಲ್ಲಕ್ಕಿ ಸೇವೆ, ರಥೋ ತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.ಆಯುಧ ಪೂಜೆಯ ದಿನ ಬೆಳಿಗ್ಗೆ ದುರ್ಗಾದೇವಿಗೆ ವಿವಿಧ ಪೂಜೆಗಳು ನೆರವೇರಿಸಿ, ಪ್ರತಿ ವರ್ಷದಂತೆ ಈ ವರ್ಷ ಕೂಡ 60ಕ್ಕೂ ಹೆಚ್ಚು ಜೋಡಿ ಸಾಮೂಹಿಕ ವಿವಾಹ ನೆರವೇರಿದವು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಮಹಿಳೆಯರು ಕುಟುಂಬ ಸಮೇತ ಬಂದು ದೇವಿ ದರ್ಶನ ಪಡೆದು ಪ್ರಸಾದ ಸೇವಿಸಿದರು.ರಾಣಿ ಆನೆಯಿಂದ ವಿಜೃಂಭಣೆಯ ಮೆರವಣಿಗೆ: ಸಂಜೆ 5ರ ನಂತರ ದುರ್ಗಾದೇವಿ ಮೂರ್ತಿ ಹೊತ್ತ ರಾಣಿ ಆನೆಯು ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ಮುಖ್ಯರಸ್ತೆ ಮೂಲಕ ಅಪಾರ ಜನಸ್ತೋಮದಲ್ಲಿ ಸಂಚರಿಸಿ, ದೇವಸ್ಥಾ ನಕ್ಕೆ ಬಂದು ಸಮಾರೋಪವಾಯಿತು. ಮೆರವಣಿಗೆಯಲ್ಲಿ ನಂದಿಕೋಲು, ಡೊಳ್ಳುಕುಣಿತ, ತಾಷ ಕಳಹೆ ಕಲಾ ತಂಡಗಳ ಮೆರಗು ಮೆರವಣಿಗೆಗೆ ಅಂದ ಹೆಚ್ಚಿಸಿತು. ಮೆರವಣಿಗೆಯುದ್ದಕ್ಕೂ ಯುವಕರು, ಯುವತಿಯರು, ಚಿಣ್ಣರು ಸೆಲ್ಫಿ ಕ್ಲಿಕ್ಕಿಸಿಕೊಂಡರೇ, ಕೆಲವರು ವಿಡಿಯೊಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟರು.ಕೆಲ ಹವ್ಯಾಸಿ ಡ್ರೋನ್ ಆಪರೇಟರ್ ಗಳು ಡ್ರೋನ್ ಹಾರಿಸಿ, ಮೆರವಣಿಗೆಯ ಸಾಲು, ಜನಸಮೂಹ, ಪ್ರಕೃತಿಯನ್ನು ಸೆರೆಹಿಡಿದ ದೃಶ್ಯಗಳು ಕಂಡು ಬಂದವು.ಮಾಜಿ ಸಂಸದ ಎಚ್.ಜಿ ರಾಮುಲು ಅವರು ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಶಾಸಕ ಜಿ. ಜನಾರ್ದನ ರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಜೋಗದ ನಾರಾಯಣಪ್ಪ ನಾಯಕ ಸೇರಿ ಎಚ್.ಜಿ ರಾಮುಲು ಮನೆಯವರು ಪಾಲ್ಗೊಂಡಿದ್ದರುಬಡಜನರಿಗೆ ಆರ್ಥಿಕ ಹೊರೆ ತಪ್ಪಿಸಲೆಂದು ಪ್ರತಿವರ್ಷದಂತೆ ಈ ವರ್ಷವು ಸಾಮೂಹಿಕ ವಿವಾಹ ನಡೆಸಲಾಗಿದೆ. ನವರಾತ್ರಿ ಸಮಯದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆಗಳು ಸಲ್ಲಿಸಲಾಗಿದೆ ಎಂದು ಹೇಮಗುಡ್ಡ ದೇವಸ್ಥಾನದ ಕಾರ್ಯಕ್ರಮ ಪ್ರಮುಖರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ತಿಳಿಸಿದರು.