ದೀಪಾವಳಿ ತನಕ ಪ್ರತಿಭಟನೆ ಬೇಡ, ಕುಟುಂಬದೊಂದಿಗೆ ಇರಿ: ಕಾಕ್ರೋಚ್ಗಳಿಗೆ ದೀಪ್ಕೆ
ನವದೆಹಲಿ: ಕಾರ್ಯಕರ್ತರ ಬಂಧನದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಅವರು ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದು, ದೀಪಾವಳಿಯವರೆಗೆ ಪ್ರತಿಭಟನೆಗಳನ್ನು ಸ್ಥಗಿತಗೊಳಿಸಿ ಕುಟುಂಬದೊಂದಿಗೆ ಸಮಯ ಕಳೆಯುವಂತೆ ಮನವಿ ಮಾಡಿದ್ದಾರೆ.ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸೇರಿದಂತೆ ಹಲವು ಕಾರ್ಯಕರ್ತರ ಬಂಧನದ ಹಿನ್ನೆಲೆ

ನವದೆಹಲಿ: ಕಾರ್ಯಕರ್ತರ ಬಂಧನದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಅವರು ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದು, ದೀಪಾವಳಿಯವರೆಗೆ ಪ್ರತಿಭಟನೆಗಳನ್ನು ಸ್ಥಗಿತಗೊಳಿಸಿ ಕುಟುಂಬದೊಂದಿಗೆ ಸಮಯ ಕಳೆಯುವಂತೆ ಮನವಿ ಮಾಡಿದ್ದಾರೆ.ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸೇರಿದಂತೆ ಹಲವು ಕಾರ್ಯಕರ್ತರ ಬಂಧನದ ಹಿನ್ನೆಲೆಯಲ್ಲಿ, ದೀಪ್ಕೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ಈ ಸಂದೇಶದಲ್ಲಿ ದೀಪಾವಳಿಯವರೆಗೆ ಯಾವುದೇ ಪ್ರತಿಭಟನೆ ನಡೆಸದಂತೆ ಬೆಂಬಲಿಗರಿಗೆ ಸೂಚಿಸಿದ್ದಾರೆ.‘ಕಳೆದ ಕೆಲವು ದಿನಗಳು ನಮಗೆ ಸುಲಭವಾಗಿರಲಿಲ್ಲ. ನಿಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಅವರ ಜೊತೆಯಲ್ಲಿ ಇರಿ’ ಎಂದು ದೀಪ್ಕೆ ಹೇಳಿದ್ದಾರೆ.ಮುಂದುವರಿದು, ‘ನಮ್ಮ ಕುಟುಂಬಗಳಿಗೆ ಈ ದಿನಗಳು ಇನ್ನೂ ಹೆಚ್ಚು ಕಷ್ಟಕರವಾಗಿವೆ. ಏಕೆಂದರೆ, ಇದು ಅವರ ಆಯ್ಕೆಯಾಗಿರಲಿಲ್ಲ. ಹೋರಾಟ ಮಾಡುವ ನಿರ್ಧಾರ ನಮ್ಮದಾಗಿತ್ತು. ಆದರೆ, ಅದರ ಪರಿಣಾಮಗಳನ್ನು ನಮ್ಮ ಕುಟುಂಬದವರೂ ಎದುರಿಸಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.Message to all cockroaches https://t.co/9e5yI9Nst0— Abhijeet Dipke (@abhijeet_dipke) October 20, 2026 ಪ್ರತಿಭಟನಾಕಾರರ ಕುಟುಂಬದ ಸದಸ್ಯರು ಪೊಲೀಸರ ಕ್ರಮದ ಬಗ್ಗೆ ಆತಂಕದಲ್ಲಿರಬಹುದು ಎಂದು ಉಲ್ಲೇಖಿಸಿದ ಅವರು, ಹಬ್ಬದ ಸಂದರ್ಭದಲ್ಲಿ ತಮ್ಮ ಆತ್ಮೀಯರೊಂದಿಗೆ ಸಮಯ ಕಳೆಯುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.ಇದೇ ವೇಳೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ತಮ್ಮ ಸಹೋದರರು ಎಂದು ಕರೆದ ದೀಪ್ಕೆ, ಅವರು ಜೈಲಿನಿಂದ ನಗುಮುಖದೊಂದಿಗೆ ಹೊರಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.'ಅವರು ಜೈಲಿನಿಂದ ಹೊರಬರುವಾಗ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗಲಿದ್ದಾರೆ’ ಎಂದು ದಿಪ್ಕೆ ಹೇಳಿದ್ದಾರೆ.