ಅರಣ್ಯಾಧಿಕಾರಿಗಳಿಗೆ ಬೆದರಿಕೆ; ಸಚಿವ ರಾಮಲಿಂಗಾರೆಡ್ಡಿ ತಿರುಗೇಟು
ಕೋಲಾರ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಲು ಆಗುವುದಿಲ್ಲ. ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಆ ರೀತಿ ಮಾಡಿದರೆ ರಾಜ್ಯದಲ್ಲಿ ಯಾವ ಅಧಿಕಾರಿಯೂ ಕೆಲಸ ಮಾಡಲು ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅರಣ್

ಕೋಲಾರ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಲು ಆಗುವುದಿಲ್ಲ. ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಆ ರೀತಿ ಮಾಡಿದರೆ ರಾಜ್ಯದಲ್ಲಿ ಯಾವ ಅಧಿಕಾರಿಯೂ ಕೆಲಸ ಮಾಡಲು ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅರಣ್ಯ ಇಲಾಖೆ ವಿಚಾರವಾಗಿ ಕೆಲವೊಂದು ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಯಾವುದೇ ಇಲಾಖೆಯ ಅಧಿಕಾರಿಗಳಿರಲಿ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು’ ಎಂದು ಎಚ್ಚರಿಸಿದರು.ಅಧಿಕಾರಿಗಳ ಮೇಲೆ ದೂರು ಕೊಟ್ಟು ಎಫ್ಐಆರ್, ದೌರ್ಜನ್ಯ ಕೇಸ್ ಹಾಕುವುದು ಸರಿಯಲ್ಲ. ದುರುದ್ದೇಶಪೂರ್ವಕವಾಗಿ ಸಾಮಾನ್ಯ ಪ್ರಜೆಯ ಮೇಲೂ ಹಾಕಬಾರದು, ಅಧಿಕಾರಿ ಮೇಲೂ ಹಾಕಬಾರದು. ಯಾರೋ ಅಧಿಕಾರಿಗಳು ತಮಗೆ ಅನುಕೂಲವಾಗಿ ವರ್ತಿಸಿಲ್ಲ ಎಂಬ ಕಾರಣಕ್ಕೆ ಕೇಸ್ ಹಾಕಲು ಹೋಗಬಾರದು. ಇಂತಹ ಬೆದರಿಕೆಗಳಿಂದ ಅಧಿಕಾರಿಗಳು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇಂತಹ ನಡೆಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದರು.ಅರಣ್ಯಾಧಿಕಾರಿಗಳು ಸಾಮೂಹಿಕ ರಾಜೀನಾಮೆ ವಿಚಾರವಾಗಿ ತಮ್ಮನ್ನು ಭೇಟಿಯಾಗಿದ್ದರು ಎಂದು ತಿಳಿಸಿದರು.ಅರಣ್ಯ ಒತ್ತುವರಿ ತೆರವಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬೆಂಬಲ ನೀಡುತ್ತಿಲ್ಲ ಎಂಬ ಡಿಸಿಎಫ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಒಂದು ವೇಳೆ ಖಾಸಗಿ ಜಮೀನನ್ನು ಅರಣ್ಯ ಎಂದು ನೋಟಿಫೈ ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಬಿಡಿಸಿಕೊಳ್ಳಬೇಕು. ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ’ ಎಂದರು.ಅರಣ್ಯ ಒತ್ತುವರಿ ತೆರವಿಗೆ ಅಡಚಣೆ ಆಗುತ್ತಿದೆ ಎಂಬ ಇಲಾಖೆಯ ಅಧಿಕಾರಿಗಳ ದೂರಿನ ಬಗ್ಗೆ ಮಾತನಾಡಿ, ಈ ಸಂಬಂಧ ಎರಡು ದಿನಗಳಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದ ಹೇಳಿದರು.ಉಪವಿಭಾಗಾಧಿಕಾರಿಯು ಕಂದಾಯ ಇಲಾಖೆಯ ದಾಖಲೆ ತಿದ್ದುಪಡಿ ಮಾಡಿ 340 ಎಕರೆ ಗೋಮಾಳಕ್ಕೆ ಸೇರಿಸಿರುವುದರ ಸಂಬಂಧ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಂದಾಯ ಇಲಾಖೆಯವರೂ ಕೂಡ ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಅವರಿಗೆ ಇರುವ ಅಧಿಕಾರವನ್ನು ಮಾತ್ರ ಚಲಾಯಿಸಬೇಕು. ಇಲ್ಲದ ಅಧಿಕಾರ ಚಲಾಯಿಸಲು ಯಾರಿಗೂ ಹಕ್ಕಿಲ್ಲ, ನನಗೂ ಹಕ್ಕಿಲ್ಲ. ನಾನು ಕೂಡ ನನ್ನ ಅಧಿಕಾರ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕು ಎಂದರು.ವಿಪಕ್ಷಗಳ ಮೊಸಳೆ ಕಣ್ಣೀರು‘ಹಿಂದೆ ಬಿಜೆಪಿ, ಜೆಡಿಎಸ್ನವರು ಸಿದ್ದರಾಮಯ್ಯ ಅವರನ್ನು ಬಯ್ಯುತ್ತಿದ್ದರು. ಈಗ ಅವರೆಲ್ಲಾ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ರಾಜಕಾರಣದಲ್ಲಿ ಈ ರೀತಿಯ ಪಿತೂರಿ ಮಾಡಬಾರದು. ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ; ಯಾವ ಸಾಮಾನ್ಯ ಪ್ರಜೆಗಾಗಲಿ, ಸಣ್ಣ ನಾಯಕನಿಗಾಗಲಿ ಈ ರೀತಿ ಆಗಬಾರದು. ನಮ್ಮ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೇ ಆಗಬಾರದು’ ಎಂದು ರಾಮಲಿಂಗಾರೆಡ್ಡಿ ಹೇಳಿದರು.ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾವೆಲ್ಲಾ ಅವರ ಜೊತೆ ಇದ್ದೇವೆ. ಅವರು ಈಗಲೂ ರಾಜ್ಯದ ನಂಬರ್ ಒನ್ ಜನಪ್ರಿಯ ನಾಯಕ’ ಎಂದರು.ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ಬಂಧನ ಆಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಗೃಹ ಸಚಿವರು ಕ್ರಮ ತೆಗೆದುಕೊಳ್ಳುತ್ತಾರೆ. ಹಿಂದಿನ ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚೆ ಆಗಿಲ್ಲ’ ಎಂದು ತಿಳಿಸಿದರು.2008ರಿಂದ ರಾಜಕಾರಣ ಹೊಲಸುನಾನು 37 ವರ್ಷಗಳಿಂದ ಶಾಸಕನಾಗಿದ್ದೇನೆ. 2008ರವರೆಗೂ ರಾಜಕಾರಣ ಉತ್ತಮ ವಾತಾವರಣದಲ್ಲಿತ್ತು, ಯಾವುದೇ ಪಕ್ಷದವರೂ ಕೆಸರೆರಚಾಟ ಮಾಡುತ್ತಿರಲಿಲ್ಲ, ಅಶ್ಲೀಲವಾಗಿ ಬೈಯುತ್ತಿರಲಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಬಂದ ಮೇಲೆ ರಾಜಕಾರಣ ಹೊಲಸಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು.2008ರಿಂದ ಈ ರೀತಿ ಆಗಿದೆ ಎಂದರೆ ಬಿಜೆಪಿ ಸರ್ಕಾರದಿಂದಲೇ ಎಂಬ ಪ್ರಶ್ನೆಗೆ, ‘ಬಿಜೆಪಿ ಸರ್ಕಾರ ಎಂದು ಅಲ್ಲ, ಆ ಸಮಯದಿಂದ ರಾಜಕೀಯ ಹೊಲಸು ಶುರುವಾಯಿತು. ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ವಿಚಾರ ಎಲ್ಲರಿಗೂ ಗೊತ್ತು. ಬಿಜೆಪಿಗೆ ಎರಡು ಸಲವೂ ಬಹುಮತ ಬಂದಿರಲಿಲ್ಲ. ಒಂದು ಸಲ 100, ಇನ್ನೊಂದು ಸಲ 104 ಸ್ಥಾನ ಬಂದಿತ್ತು. ಶಾಸಕರ ರಾಜೀನಾಮೆ ಕೊಡಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದರು. ಮುಂಬೈಗೆ ಹೋದವರು ತಡೆಯಾಜ್ಞೆ ತೆಗೆದುಕೊಂಡಿದ್ದಾರೆ’ ಎಂದರು.ಮಾರುವೇಷದ ಕಾರ್ಯಾಚರಣೆಯನ್ನು ಯಾರೂ ಮಾಡಬಾರದು, ಯಾರೇ ಮಾಡಿದರೂ ತಪ್ಪು. ಇದು ಖಂಡನೀಯ ಎಂದು ಹೇಳಿದರು.ಎಲ್ಲಾ ಪಕ್ಷಗಳಿಗೂ ಧಕ್ಕೆಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ಈ ಪ್ರಕರಣ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ‘ಈ ರೀತಿಯ ವಿಚಾರಗಳು ಬಂದಾಗ ಸಹಜವಾಗಿ ಪಕ್ಷಕ್ಕೆ ಧಕ್ಕೆ ಆಗುತ್ತದೆ. ವಿಪಕ್ಷದವರು ಇದರಲ್ಲಿ ಭಾಗಿಯಾಗಿದ್ದರೆ ಅವರ ಪಕ್ಷಕ್ಕೂ ಧಕ್ಕೆ ಆಗುತ್ತದೆ’ ಎಂದರು.261020-18-1987518077