ದೆಹಲಿಯಲ್ಲಿ ರಾವಣನ ಜೊತೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ ದಹಿಸಿ ದಸರಾ ಆಚರಣೆ
ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ದೆಹಲಿಯ(Delhi) ಪಿತಾಂಪುರದಲ್ಲಿ ನಡೆದ ರಾಮಲೀಲಾ ಮಹೋತ್ಸವದಲ್ಲಿ(Ramleela Mahotsav) ರಾವಣನ ಪ್ರತಿಕೃತಿಯ ಜೊತೆಗೆ ಬೃಹತ್ ಜಿರಳೆ (Cockroach) ಪ್ರತಿಕೃತಿಯನ್ನು ದಹಿಸುವ ಮೂಲಕ ವಿನೂತನವಾಗಿ ದಸರಾವನ್ನು ಆಚರಿಸಲಾಗಿದೆ. ಪಿತಾಂಪುರದ ನೇತಾಜಿ ಸುಭಾಷ್ ಪ್ಲೇಸ್ನಲ್ಲಿರುವ ರಾಮಲೀಲಾ ಮೈದಾನದಲ್ಲಿ ಕೇಶವ್ ರಾಮಲೀಲಾ ಸಮಿತಿ ವತಿಯಿಂದ

ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ದೆಹಲಿಯ(Delhi) ಪಿತಾಂಪುರದಲ್ಲಿ ನಡೆದ ರಾಮಲೀಲಾ ಮಹೋತ್ಸವದಲ್ಲಿ(Ramleela Mahotsav) ರಾವಣನ ಪ್ರತಿಕೃತಿಯ ಜೊತೆಗೆ ಬೃಹತ್ ಜಿರಳೆ (Cockroach) ಪ್ರತಿಕೃತಿಯನ್ನು ದಹಿಸುವ ಮೂಲಕ ವಿನೂತನವಾಗಿ ದಸರಾವನ್ನು ಆಚರಿಸಲಾಗಿದೆ. ಪಿತಾಂಪುರದ ನೇತಾಜಿ ಸುಭಾಷ್ ಪ್ಲೇಸ್ನಲ್ಲಿರುವ ರಾಮಲೀಲಾ ಮೈದಾನದಲ್ಲಿ ಕೇಶವ್ ರಾಮಲೀಲಾ ಸಮಿತಿ ವತಿಯಿಂದ ಈ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ(Kapil Mishra) ಅವರು ಸಾಂಪ್ರದಾಯಿಕ ರಾವಣ ದಹನದ ಜೊತೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 30 ಅಡಿ ಎತ್ತರದ ಜಿರಳೆ ಪ್ರತಿಕೃತಿಗೆ ಅಗ್ನಿಸ್ಪರ್ಶ ಮಾಡಿದರು. VIDEO | Delhi: 30-foot cockroach effigy burnt during Ravana Dahan on the occasion of Dussehra amid CJP protests. (Full video available on PTI Videos – https://t.co/d8jp61yd2p) https://t.co/FTae2SGOxM — Press Trust of India (@PTI_News) October 20, 2026 ಆಪ್ ಆಕ್ಷೇಪ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಜತೆಗೆ ‘ಜಿರಳೆ’ ಪ್ರತಿಕೃತಿಯನ್ನು ದಹಿಸಿರುವುದನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್(Saurabh Bharadwaj) ಅವರು ಲೆಫ್ಟಿನೆಂಟ್ ಗವರ್ನರ್ ಹಾಗೂ ದೆಹಲಿ ಪೊಲೀಸ್(Delhi Police) ಕಮಿಷನರ್ಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಈ ಕೃತ್ಯವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ದೀಪಾವಳಿವರೆಗೆ ಯಾವುದೇ ಪ್ರತಿಭಟನೆ ಇಲ್ಲ; ಕುಟುಂಬದೊಂದಿಗೆ ಹಬ್ಬ ಆಚರಿಸಿ: ಅಭಿಜಿತ್ ದೀಪ್ಕೆ MLA & Minister of @BJP4India cannot use my Hindu religion for their cheap politics against GenZ. They cannot demean our thousand years old sanatan customs by making it a joke. @RSSorg can’t sit quite on this blasphemy. Have requested @CPDelhi and @LtGovDelhi saab to register FIR against BJP MLA and @KapilMishra_IND for hurting religious sentiments of Hindus by alerting the Sanatan Customs for political gains and promoting enmity hatered between communities and groups. — Saurabh Bharadwaj (@Saurabh_MLAgk) October 20, 2026 ಈ ಸಂಬಂಧ ಶ್ರೀ ಕೇಶವ್ ರಾಮಲೀಲಾ ಸಮಿತಿಯ ಆಯೋಜಕರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ಇತರ ಸಂಘಟಕರ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಭಾರದ್ವಾಜ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ. ದಸರಾ ಹಬ್ಬದ ಧಾರ್ಮಿಕ ಮತ್ತು ಪವಿತ್ರ ಪರಂಪರೆಯ ರಾಮಲೀಲಾ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ಇಂತಹ ಕೃತ್ಯವೆಸಗಲಾಗಿದೆ ಎಂದು ಆಪ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.