ಜಿರಳೆ ಪ್ರತಿಕೃತಿ ದಹನ: ಉಚಿತ ಪ್ರಚಾರ ನೀಡಿದ್ದಕ್ಕೆ ಧನ್ಯವಾದ ಎಂದ ದೀಪ್ಕೆ
ನವದೆಹಲಿ: ರಾವಣ, ಕುಂಭಕರ್ಣ ಪ್ರತಿಕೃತಿಗಳೊಂದಿಗೆ 30 ಅಡಿ ಎತ್ತರದ ಜಿರಳೆಯ ಪ್ರತಿಕೃತಿಯನ್ನೂ ದಹನ ಮಾಡಲು ನಿರ್ಧರಿಸಿರುವ ಆಯೋಜಕರಿಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಧನ್ಯವಾದ ತಿಳಿಸಿದ್ದಾರೆ.ದಸರಾ ಪ್ರಯುಕ್ತ ದೆಹಲಿಯ ಪಿತಂಪುರ ಬಡಾವಣೆಯಲ್ಲಿ ಶ್ರೀ ಕೇಶವ ರಾಮಲೀಲಾ ಸಮಿತಿ ಆಯೋಜಿಸಿರುವ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಪ್ರತಿಕೃತಿಯೊ

ನವದೆಹಲಿ: ರಾವಣ, ಕುಂಭಕರ್ಣ ಪ್ರತಿಕೃತಿಗಳೊಂದಿಗೆ 30 ಅಡಿ ಎತ್ತರದ ಜಿರಳೆಯ ಪ್ರತಿಕೃತಿಯನ್ನೂ ದಹನ ಮಾಡಲು ನಿರ್ಧರಿಸಿರುವ ಆಯೋಜಕರಿಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ ಧನ್ಯವಾದ ತಿಳಿಸಿದ್ದಾರೆ.ದಸರಾ ಪ್ರಯುಕ್ತ ದೆಹಲಿಯ ಪಿತಂಪುರ ಬಡಾವಣೆಯಲ್ಲಿ ಶ್ರೀ ಕೇಶವ ರಾಮಲೀಲಾ ಸಮಿತಿ ಆಯೋಜಿಸಿರುವ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಪ್ರತಿಕೃತಿಯೊಂದಿಗೆ ಜಿರಳೆಯ ಪ್ರತಿಕೃತಿಯನ್ನೂ ದಹಿಸಲು ನಿರ್ಧರಿಸಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ದೀಪ್ಕೆ, ಉಚಿತ ಪ್ರಚಾರ ನೀಡಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಇದನ್ನು ನಾಟಕ ಎಂದು ಕರೆದಿದ್ದಾರೆ.ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಅಶೋಕ್ ಗೋಯಲ್ ಮಾತನಾಡಿ, ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನೈರ್ಮಲ್ಯದ ಮಹತ್ವವನ್ನು ಸಾರುವುದು ಇದರ ಉದ್ದೇಶ ಎಂದು ತಿಳಿಸಿದ್ದಾರೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.ಇದಕ್ಕೂ ಮುನ್ನ, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು.